Advertisement
ವಿಧಾನಸಭೆಯಲ್ಲಿ ಉಪ ಸಭಾಧ್ಯಕ್ಷರನ್ನು ಕೆಳಕ್ಕಿಳಿಸಿದ ರೀತಿಯಲ್ಲೇ ಇಲ್ಲೂ ಸಭಾಪತಿಯವರನ್ನು ಕೆಳಕ್ಕೆ ಇಳಿಸಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಪರಿಷತ್‌ನ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಖ್ಯಾಬಲವನ್ನು 31ಕ್ಕೆ ವೃದ್ಧಿಸಿಕೊಂಡಿರುವ ಬಿಜೆಪಿಗೆ ಜೆಡಿಎಸ್‌ನ ಬೆಂಬಲ ಸಿಕ್ಕರೆ ಸಭಾಪತಿ ಸ್ಥಾನ ಪಡೆಯುವುದು ಸುಲಭ. ಜೆಡಿಎಸ್‌ನಲ್ಲೂ ಬಿಜೆಪಿಗೆ ಬೆಂಬಲ ಕೊಡುವ ಬಗ್ಗೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಈಗಿನ ಮಾತುಕತೆ ಪ್ರಕಾರ ಮುಂದಿನ ಚಳಿಗಾಲದ ಅಧಿವೇಶನ ಅಥವಾ ಜನವರಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನ ಸಂದರ್ಭದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಲಾಗಿದೆ. ಪರಿಷತ್‌ನ ಒಟ್ಟು ಸಂಖ್ಯಾಬಲ 75. ಬಹುಮತಕ್ಕೆ 38 ಸದಸ್ಯರ ಅಗತ್ಯ ಇದೆ. ಬಿಜೆಪಿ 31 ಸದಸ್ಯರನ್ನು ಹೊಂದಿದೆ. ಪಕ್ಷೇತರ ಸದಸ್ಯರೊಬ್ಬರ ಬೆಂಬಲವೂ ಪಡೆದರೆ ಆರು ಮತಗಳ ಕೊರತೆಯಾಗಲಿದೆ. ಕಾಂಗ್ರೆಸ್ 28 ಮತ್ತು ಜೆಡಿಎಸ್ 14 ಸ್ಥಾನಗಳನ್ನು ಹೊಂದಿವೆ. ಕರಾವಳಿ ಭಾಗಕ್ಕೆ ಸಭಾಪತಿ ಪಟ್ಟ?
ವಿಧಾನಪರಿಷತ್‌ನಲ್ಲಿ ಸಭಾಪತಿ ಹುದ್ದೆ ಬಿಜೆಪಿಗೆ ದೊರೆತರೆ ಕರಾವಳಿ ಭಾಗದವರಿಗೇ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.