Advertisement

ಬಿಜೆಪಿಯಿಂದ ಸಣ್ಣ ಸಣ್ಣ ಸಮಾಜಕ್ಕೂ ಪ್ರಾಶಸ್ತ್ಯ : ಸಿದ್ದು ಸವದಿ

07:46 PM May 06, 2022 | Team Udayavani |

ರಬಕವಿ-ಬನಹಟ್ಟಿ : ಬಿಜೆಪಿ ಪಕ್ಷ ಸಣ್ಣ ಸಣ್ಣ ಸಮಾಜಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದೆ. ನಮ್ಮ ಪಕ್ಷದಲ್ಲಿ ಯಾವುದೇ ಜಾತಿ ಬೇದ ಇಲ್ಲ ಅವಕಾಶ ಸಿಕ್ಕಾಗ ಎಲ್ಲರಿಗೂ ಸಮಾನ ಅವಕಾಶ ನೀಡುತ್ತೇವೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಶುಕ್ರವಾರ ರಬಕವಿ-ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸದಾಶಿವ ಪರೀಟ ಅವರನ್ನು ಸನ್ಮಾನಿಸಿ ಮಾತನಾಡಿದರು. ಈ ಕೇತ್ರದಲ್ಲಿ ಬಿಜೆಪಿ ಸುಸ್ಥಿರವಾಗಿದೆ. ಬಿಜೆಪಿ ಅತ್ಯಂತ ಗಂಡು ಮೆಟ್ಟಿನ ಸ್ಥಾನವಾಗಿದೆ. ಆಯ್ಕೆಯಾದ ನೂತನ ಚೇರಮನ್ನರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಳಿ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ನಗರದ ಸೌಂದರ್ಯಿಕರಣ ನಿಟ್ಟಿನಲ್ಲಿ ಸಾಕಷ್ಟು ಮುತುವರ್ಜಿವಹಿಸಿ ಕೆಲಸ ಮಾಡಬೇಕು ಎಂದರು.

ರಬಕವಿ-ಬನಹಟ್ಟಿ ಅಭಿವೃದ್ಧಿ ನಿಟ್ಟಿನಲ್ಲಿ ಈ ಹಿಂದೆ ಎಂದು ಬಾರದಷ್ಟು ಅನುದಾನ ಬಂದಿದೆ. ನಗರೋತ್ತಾನ ಯೋಜನೆಯಲ್ಲಿ ರಬಕವಿ-ಬನಹಟ್ಟಿ ನಗರಸಭೆಗೆ ೩೦ ಕೋಟಿ ಹಾಗೂ ವಿಶೇಷ ಅನುದಾನದಲ್ಲಿ ೫ ಕೋಟಿ ಹಣ ಬಂದಿದ್ದು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ಮೂಲಭೂತ ಸೌಲಭ್ಯಗಳ ನಿವಾರಣೆಗೆ ಶ್ರಮಿಸಬೇಕು. ನಗರದ ಸೌಂದರ್ಯಕರಣಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಚೇರಮನ್ನರಾಗಿ ಆಯ್ಕೆಯಾದ ಸದಾಶಿವ ಪರೀಟ ಮಾತನಾಡಿ, ನನ್ನನು ಚೇರಮನ್ನರಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಚಿರಋಣಿಯಾಗಿದ್ದು, ಅವಳಿ ನಗರಗಳ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲ ಸದಸ್ಯರನ್ನು, ಗುರುಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ಧಬಾಡಿ, ಪೌರಾಯುಕ್ತ ಶ್ರೀನಿವಾಸ ಜಾಧವ, ಯಲ್ಲಪ್ಪ ಕಟಗಿ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ದುರ್ಗವ್ವ ಹರಿಜನ, ಯೂನೂಸ ಚೌಗಲಾ, ದೀಪಾ ಕೊಣ್ಣೂರ, ವಿಶ್ವನಾಥ ಸವದಿ, ವಿಜಯ ಕಲಾಲ, ಮಹಾನಂದಾ ಆಲಗೂರ, ಪ್ರತಿಭಾ ಹಳ್ಳೂರ, ರಾಜು ಅಂಬಲಿ, ಪ್ರವೀಣ ಕೋಲಾರ, ಅರುಣ ಕದಂ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next