Advertisement

‘ಮುಝೆ ಚಲ್ತೇ ಜಾನಾ ಹೈ’ ಪ್ರಧಾನಿ ಮೋದಿ ಪಯಣದ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ

02:20 PM Mar 16, 2023 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜದ ವಿವಿಧ ವರ್ಗಗಳಿಗೆ ಸೇವೆ ಸಲ್ಲಿಸಲು ಮತ್ತು ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ತಮ್ಮ ಧ್ಯೇಯದಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ತೋರಿಸುವ ಕಿರು ಅನಿಮೇಟೆಡ್ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪ್ರತಿಪಕ್ಷಗಳು ತಮ್ಮ ಮೇಲೆ ನಡೆಸಿದ ನಿಂದನೆಗಳು ಮತ್ತು ಆರೋಪಗಳನ್ನು ಸೇರಿಸಿ ವಿಡಿಯೋ ಮಾಡಲಾಗಿದೆ.

Advertisement

“ಮುಝೆ ಚಲ್ತೇ ಜಾನಾ ಹೈ” (ನಾನು ನಡೆಯುತ್ತಲೇ ಇರಬೇಕು) ಎಂಬ ಶೀರ್ಷಿಕೆಯ ನಾಲ್ಕು ನಿಮಿಷಗಳ ಮೂವತ್ತು ಸೆಕೆಂಡ್ ಗಳ ವಿಡಿಯೋ ಅನಿಮೇಷನ್, ಸೋನಿಯಾರಂತಹ ಕಾಂಗ್ರೆಸ್ ನಾಯಕರ ವಾಗ್ದಾಳಿಗಳ ನಡುವೆ ಪ್ರಧಾನಿ ಮೋದಿ ಗುಜರಾತ್‌ ನ ಮುಖ್ಯಮಂತ್ರಿಯಾಗುವುದರಿಂದ ಪ್ರಧಾನಿಯವರೆಗಿನ ಪ್ರಯಾಣವನ್ನು ತೋರಿಸುತ್ತದೆ. ಈ ಪಯಣದ ವಿಡಿಯೋದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಣಿಶಂಕರ್ ಅಯ್ಯರ್ ಮತ್ತು ದಿಗ್ವಿಜಯ ಸಿಂಗ್ ರನ್ನು ಕಾಣಬಹುದು.

ವಿಡಿಯೋದಲ್ಲಿ 2024 ರ ಸಂಸತ್ತಿನ ಚುನಾವಣೆಯ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ. 2014 ಮತ್ತು 2019 ರ ಲೋಕಸಭಾ ಚುನಾವಣೆಗಳನ್ನು ದಾಟಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕಡೆಗೆ ಪ್ರಧಾನಿ ಮೋದಿ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ತೋರಿಸುತ್ತದೆ.

ವಿರೋಧ ಪಕ್ಷದ ನಾಯಕರು “ಮೌತ್ ಕಾ ಸೌದಾಗರ್”, “ಚಾಯ್ ವಾಲಾ”, “ಚೌಕಿದಾರ್ ಚೋರ್ ಹೈ” ಮತ್ತು “ಗೌತಮ್ ದಾಸ್” ಎಂದು ಕೂಗುವುದನ್ನು ತೋರಿಸಲಾಗಿದೆ, ಕೇಂದ್ರ ಸರ್ಕಾರದ ಯೋಜನೆಗಳು, ಕೋವಿಡ್ ಸಮಯದಲ್ಲಿ ನಡೆದ ಕಷ್ಟಗಳ ಬಗ್ಗೆ ಉಲ್ಲೇಖಿಸಲಾಗಿದೆ.

Advertisement

ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಅಮೆರಿಕ ವೀಸಾ ನಿರಾಕರಿಸಿದ ಕಾರಣ ಸೋನಿಯಾ ಗಾಂಧಿ ಅವರೊಂದಿಗೆ ಒಬಾಮಾ ಮೊದಲ ಬಾರಿಗೆ ಕಾಣಿಸಿಕೊಂಡರು. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಒಬಾಮಾ ಅವರು ಅಮೇರಿಕಾದ ವೀಸಾವನ್ನು ಕೈಯಲ್ಲಿ ಹಿಡಿದುಕೊಂಡು ಮೆಟ್ಟಿಲುಗಳ ಮೇಲೆ ಓಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next