Advertisement

ಇಂದು ಬಿಜೆಪಿ ಸಂಸ್ಥಾಪನ ದಿನ : ಕಾರ್ಯಕರ್ತರಿಗೆ ಮೋದಿ, ಶಾ ಶುಭಾಶಯ

09:12 AM Apr 07, 2019 | Vishnu Das |

ಹೊಸದಿಲ್ಲಿ: ಭಾರತೀಯ ಜನತಾಪಕ್ಷವು ಎಪ್ರಿಲ್‌ 6 ರಂದು 39 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ.

Advertisement

ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಕಾರ್ಯಕರ್ತರಿಗೆ ಶುಭಾಶಯಗಳನ್ನು ಟ್ವೀಟ್‌ ಮೂಲಕ ಸಲ್ಲಿಸಿದ್ದಾರೆ. ಶ್ಯಾಮ ಪ್ರಸಾದ್‌ ಮುಖರ್ಜಿ, ಅಟಲ್‌ ಬಿಹಾರಿ ವಾಜಪೇಯಿ , ಎಲ್‌.ಕೆ.ಅಡ್ವಾಣಿ ಮತ್ತು ನರೇಂದ್ರ ಮೋದಿ ಅವರು ಭಾವಚಿತ್ರಗಳನ್ನ ಪೋಸ್ಟ್‌ ಮಾಡಿ ಪಕ್ಷ ತ್ಯಾಗ ಮಾಡಿದ ನಾಯಕರಿಗೆ ಕೃತಜ್ಞರಾಗಿದ್ದೇವೆ ಎಂದು ಬರೆದಿದ್ದಾರೆ.

ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಶಾ, ‘ಸಂಘಟನೆಗಾಗಿ ಶ್ರಮಿಸಿದ ಎಲ್ಲಾ ಮಹಾಪುರುಷರಿಗೆ ನಮನಗಳು. ಪಕ್ಷಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಣೆ ಮಾಡಿ ಇಂದು ಈ ನಮ್ಮನ್ನು ಈ ವೈಭವದವರೆಗೆ ತಲುಪಿಸಿದ್ದಾರೆ’ ಎಂದು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ’39 ವರ್ಷಗಳ ಹಿಂದೆ ಸಮಾಜ ಸೇವೆಯ ಬದ್ಧತೆಯೊಂದಿಗೆ ಬಿಜೆಪಿ ಪಕ್ಷ ಹುಟ್ಟಿಕೊಂಡು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿತು. ಕಾರ್ಯಕರ್ತರ ಶ್ರಮಕ್ಕಾಗಿ ಧನ್ಯವಾದಗಳು. ಬಿಜೆಪಿ ಈ ಭಾರತದ ಆದ್ಯತೆಯ ಪಕ್ಷವಾಗಿದೆ. ಸಂಸ್ಥಾಪನ ದಿನಾಚರಣೆ ವೇಳೆ ಬಿಜೆಪಿ ಕುಟುಂಬಕ್ಕೆ ಶುಭಾಶಯಗಳು’ ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next