Advertisement

ಜನರನ್ನು ಧಾರ್ಮಿಕ ಮಟ್ಟದಲ್ಲಿ ವಿಭಜಿಸುವಲ್ಲಿ ಬಿಜೆಪಿ ವಿಫಲವಾಗಿದೆ : ಪಾಲೇಕರ್

05:11 PM May 14, 2022 | Team Udayavani |

ಪಣಜಿ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿ ಎದುರಿಸುತ್ತಿದೆ. ಹೀಗಾಗಿ ಆಡಳಿತ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯಲು ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಗೋವಾ ರಾಜ್ಯದ ಜನರನ್ನು ಧಾರ್ಮಿಕ ಮಟ್ಟದಲ್ಲಿ ವಿಭಜಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಅಮಿತ್ ಪಾಲೇಕರ್ ಹೇಳಿದ್ದಾರೆ.

Advertisement

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ತಂತ್ರದಿಂದ ಕನ್ನಡ ಒಕ್ಕೂಟದ ಮುಖಂಡರನ್ನು ದೂರವಿಡಬೇಕು. ವೋಟ್ ಬ್ಯಾಂಕ್ ಲಾಭ ಪಡೆದು ಅಧಿಕಾರ ಪಡೆಯಲು ಬಿಜೆಪಿಯು ಒಡೆದು ಆಳುವ ತಂತ್ರವನ್ನು ಬಳಸುತ್ತಿದೆ ಎಂದು ಅಮಿತ್ ಪಾಲೇಕರ್ ಆರೋಪಿಸಿದರು.

ಎಲ್ಲರೂ ಚುನಾವಣೆಗೆ ಸ್ಫರ್ಧಿಸಲು ಸ್ವತಂತ್ರರು. ಆದರೆ ಹೋರಾಟದ ಹಿಂದಿನ ಉದ್ದೇಶ ಜನಸೇವೆಯೇ ಆಗಿರಬೇಕು. ಒಂದು ನಿರ್ದಿಷ್ಠ ಭಾಷೆ ಮಾತನಾಡುವ ಅಥವಾ ಮೂಲತಃ ಹಿಂದಿನ ನಿರ್ದಿಷ್ಠ ರಾಜ್ಯದವರಿಗೆ ಮಾತ್ರ ಸೇವೆ ಸಲ್ಲಿಸುವುದು ಹೊರತುಪಡಿಸಿ ಎಲ್ಲಾ ಜನರಿಗೆ ಸೇವೆ ಸಲ್ಲಿಸುವುದು ಗುರಿಯಾಗಿರಬೇಕು ಎಂದು ಅಮಿತ್ ಪಾಲೇಕರ್ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next