Advertisement
ಪಟ್ಟಣದ ರುಕ್ಕುಮಾಯಿ ಕಲ್ಯಾಣ ಮಂಟಪದಲ್ಲಿ ನಡೆದ ವಿಧಾನ ಪರಿಷತ್ ಚನಾವಣೆ ಹಿನ್ನೆಲೆ, ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಅವರ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ವ್ಯವಸ್ಥೆ ಹಿಂದುತ್ವ ವ್ಯವಸ್ಥೆಯಿಂದ ವಿಷಯುಕ್ತ ರಾಜಕಾರಣ ಮಾಡಲಾಗುತ್ತಿದೆ. ಇಂದು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ನಾಯಕರು ಸೋಲನ್ನು ಅನುಭವಿಸಿದ್ದಾರೆ ಎಂದರೆ ಬಿಜೆಪಿ ಹಿಂದೂತ್ವ ಆಸ್ತ್ರ ಮಾತ್ರ ಕೆಲಸ ಮಾಡಿದೆ, ಅಭಿವೃದ್ಧಿ ಬಡವರು, ದೀನದಲಿತರ ಪರ ಕೆಲಸಗಾರರನ್ನು ಕಳೆದುಕೊಳ್ಳುವಂತೆ ಆಗಿದೆ. ಇಲ್ಲಿ ಅಭಿವೃದ್ಧಿ ಮಾನ್ಯತೆ ಕೋಡಿ ಜಾತಿ, ಧರ್ಮ, ಹಿಂದುತ್ವ ಹೊಟ್ಟೆ ತುಂಬಿಸುವುದಿಲ್ಲ ಎಂದು ಕಿರಿಕಾಡಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷವು ಗಾಪಂ ಸಿಗಬೇಕಾದ ಹಣ ಮತ್ತು ಯೋಜನೆಗಳನ್ನು ಕಿತ್ತುಕೊಳ್ಳುತ್ತಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಮತವನ್ನು ಚಲಾಯಿಸಿ ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿನ ಜಲಜೀವನ್ ಮಿಷನ್ ಸೇರಿದಂತೆ ಹಲವು ಯೋಜನೆಗಳಿಗೆ ಕಮೀಷನ್ ಆಸೆಗೆ ಗ್ರಾಪಂ ಸಿಗಬೇಕಾದ ಹಣವನ್ನು ಬೇರೆಡೆ ಬಳಸುತ್ತಿದ್ದಾರೆ ಬಿಲ್ ಗಳನ್ನು ದುರುಪಯೋಗ ಬಳಸಿಕೊಳುತ್ತಿದ್ದಾರೆ ನೇರವಾಗಿ ಆರೋಪ ಮಾಡಿದರು.
ಕಮೀಷನ್ ಏಜೆಂಟ್ ಆಗಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ ಇದೊಂದು ಲಾಟರಿ ಸರ್ಕಾರ. ಪ್ರಧಾನಿ ಮೋದಿ ರೈತ ಮಸೂದೆ ಕಾನೂನು ಈ ಹಿಂದೆ ವಾಪಸ್ಸು ತೆಗೆದುಕೊಂಡಿದರೆ 700ಕ್ಕೂ ಹೆಚ್ಚು ರೈತರ ಪ್ರಾಣ ಉಳಿಯುತ್ತಿತ್ತು ಎಂದು ದೂರಿದರು. ಸ್ವಚ್ಚ ಆಡಳಿತ ಕಾಂಗ್ರೆಸ್ ನಿಂದ ಮಾತ್ರ ನೀಡಲು ಸಾಧ್ಯ ಅದ್ದರಿಂದ ಕಾಂಗ್ರೆಸ್ ಗೆ ಮತವನ್ನು ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬಿಜೆಪಿಯವರ ಹಣದ ಅಮಿಷಕ್ಕೆ ಬಲಿಯಾಗಬೇಡಿ, ಬಡವರ ಬಗ್ಗೆ ಕಾಳಜಿಯಿಲ್ಲದ ಪಕ್ಷ ಬಿಜೆಪಿ. ಲೂಟಿ ಮಾಡಿದ ಭ್ರಷ್ಟಾಚಾರದ ಹಣದಿಂದ ಚುನಾವಣೆ ಮಾಡಲು ಹೊರಟಿದ್ದಾರೆ. ನಂತರ ನಿಮಗೆ ಸಿಗಬೇಕಾದ ಸೌಲಭ್ಯ ಕಸಿದು ಕೊಂಡು ಅದನ್ನು ಕೊಳ್ಳೆಹೊಡೆಯುತ್ತಾರೆ ಅವರ ಬಣ್ಣದ ಮಾತಿಗೆ ಬಲಿಯಾಗಬೇಡಿ. ಸಾಮಾಜಿಕ ನ್ಯಾಯ ಇರುವಂತ ಏಕೈಕ ಪಕ್ಷ ಕಾಂಗ್ರೆಸ್. ಬೆಲೆ ಏರಿಕೆ ಹಿನ್ನೆಲೆ ಬಿಜೆಪಿಯವರಿಗೆ ಜನ ಸಮಾನ್ಯರು ಬೀದಿ ಬೀದಿಯಲ್ಲಿ ಉಗಿಯುತ್ತಿದ್ದಾರೆ ಅದ್ದರಿಂದ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್ ಪ್ರಸನ್ನ ಕುಮಾರ್ ಅವರನ್ನು ಅತ್ಯಂತ ಮತಗಳ ಅಂತರದಿಂದ ಗೆಲ್ಲಿಸಬೇಕು ಅದಕ್ಕೆ ಕಾರ್ಯಕರ್ತರು ಸನ್ನದರಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಗಂಗಾ ಬಸವರಾಜ್, ಕಾಂಗ್ರೆಸ್ ಮುಖಂಡ ವಿರೇಶ್ ನಾಯ್ಕ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕೋರಿ. ನಗರ ಘಟಕದ ಅಧ್ಯಕ್ಷ ಮಂಜುನಾಥ್, ಚನ್ನಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಅಮ್ಮಾನುಲ್ಲಾ, ಸಿದ್ದೆಗೌಡ್ರು, ತಾಪಂ ಮಾಜಿ ಸದಸ್ಯ ಜಗದೀಶ್, ಶ್ರೀಕಾಂತ್, ಗಣಿ ಸಾಹೇಬ್ರು, ಮತ್ತಿತರರಿದ್ದರು.