Advertisement

Vijayapura; ರಾಜ್ಯದಲ್ಲಿ ಬಿಜೆಪಿ ಮುಗಿದ ಆಧ್ಯಾಯ: ಸಚಿವ ಎಂ.ಬಿ.ಪಾಟೀಲ

01:08 PM Oct 24, 2023 | keerthan |

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಮುಗಿದ ಆಧ್ಯಾಯ. ವಿಪಕ್ಷದ ನಾಯಕನನ್ನು ನೇಮಿಸದಷ್ಟು ಅದರ ಪರಿಸ್ಥಿತಿ ದುರ್ಬಲವಾಗಿದೆ‌. ಕರ್ನಾಟಕ ರಾಜ್ಯದಲ್ಲಿನ ಸೋಲಿನಿಂದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಇನ್ನೂ ಚೇತರಿಕೊಂಡಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕುಟುಕಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೊಡಿಸುವ ವಿಷಯದಲ್ಲಿ ಹಲವರಿಗೆ ಚೈತ್ರಾ ವಂಚನೆ ಮಾಡಿದ್ದು, ಶೇ.40 ರಷ್ಟು ಕಮೀಷನ್ ಸರ್ಕಾರದ ಆಡಳಿತ ನೋಡಿದ್ದೇವೆ. ಕರ್ನಾಟಕದ ಮಟ್ಟಿಗೆ ಬಿಜೆಪಿ ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:Road Mishap: ಆಯುಧ ಪೂಜೆ ಮುಗಿಸಿ ವಾಪಾಸ್‌ ಆಗುತ್ತಿದ್ದ 7 ಮಂದಿ ಭೀಕರ ಅಪಘಾತಕ್ಕೆ ಬಲಿ

ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಕಾರಣಕ್ಕೆ ರಾಜ್ಯಕ್ಕೆ ಪಕ್ಷದ ಅಧ್ಯಕ್ಷನ ಬದಲಾವಣೆಗೂ ಮುಂದಾಗಿಲ್ಲ. ವಿಪಕ್ಷ ನಾಯಕನ ನೇಮಕವೂ ಮಾಡಲಾಗದ ದುಸ್ಥಿತಿ ಇದೆ. ಇದನ್ನು ನೋಡಿದರೆ ರಾಜ್ಯದಲ್ಲಿ ಬಿಜೆಪಿ ಮುಗಿದ ಕಥೆ‌. ಕರ್ನಾಟಕದಲ್ಲಿ ಇನ್ನೆಂದೂ ಬಿಜೆಪಿ ತಲೆ ಎತ್ತಲು ಸಾಧ್ಯವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next