ಭಟನೆಗಾಗಿ ರಾಜಕೀಯ ಪಕ್ಷಗಳು ಹರತಾಳದ ಅಸ್ತ್ರ ಪ್ರಯೋಗಿಸುತ್ತಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ.
Advertisement
ರಾತ್ರಿ ಕೊಲೆ ನಡೆದು ಬೆಳಗಾಗುವಷ್ಟರಲ್ಲಿ ಹರತಾಳ ಘೋಷಣೆಯಾಗಿರುತ್ತದೆ. ಇದರಿಂದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸಬೇಕಾಗುವುದು. ಹಳ್ಳಿಯಲ್ಲಿ ಕೇವಲ ಖಾಸಗಿ ಬಸ್ ಸಂಚಾರವಿರುವ ಪ್ರದೇಶದ ಜನತೆ ಹರತಾಳದ ಕಹಿ ಅನುಭವವಕ್ಕೆ ಸಿಲುಕಬೇಕಾಗಿದೆ.
Related Articles
ರಾಜಧಾನಿ ತಿರುವನಂತಪುರದಲ್ಲಿ ಆರ್.ಎಸ್.ಎಸ್.ಕಾರ್ಯವಾಹ ರಾಜೇಶ್ ಕೊಲೆಯನ್ನು ಖಂಡಿಸಿ ರವಿವಾರದಂದಿನ ಬಿಜೆಪಿ ಕರೆ ನೀಡಿದ ಹರತಾಳದಲ್ಲಿ ಕುಂಬಳೆ ಉಪ್ಪಳ ಮೊದಲಾದೆಡೆಗಳಲ್ಲಿ ಪೇಟೆ ಪೂರ್ಣ ಬಂದ್ ಆಗಿದ್ದು ಜನಸಂಚಾರ ವಿರಳವಾಗಿತ್ತು. ರಜಾ ದಿನವಾದ ಕಾರಣ ಸರಕಾರಿ ಅರೆ ಸರಕಾರಿ ಮತ್ತು ಬ್ಯಾಂಕ್, ಶಾಲೆಗಳಿಗೆ ತೆರಳುವವರಿಗೆ ಒಂದು ಬೋನಸ್ ರಜೆ ನಷ್ಟವಾಯಿತು. ಸರಕಾರಿ, ಖಾಸಗಿ ಬಸ್ ಸಂಚರಿಸದಿದ್ದರೂ ಕೆಲವು ಖಾಸಗಿ ವಾಹನಗಳು ಭಯದಿಂದ ವಿರಳವಾಗಿ ಸಂಚರಿಸಿದವು. ತಾಳ ತಪ್ಪುತ್ತಿರುವ ಹರತಾಳದಿಂದ ರಾಜ್ಯದ ಅಭಿವೃದ್ಧಿ ಕುಂಟಿತವಾಗುತ್ತಿದೆ. ವಿದ್ಯಾಲಯಗಳಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದೆ ಎಂಬ ಆರೋಪ ಬಲವಾಗಿದೆ.ಆದರೆ ಯಾವ ಪಕ್ಷಗಳೂ ಹರತಾಳದಿಂದ ಹಿಂಜರಿಯಲು ಸಿದ್ಧವಿಲ್ಲ.
Advertisement
ಕೊಲೆಯನ್ನು ಪ್ರತಿಭಟಿಸಿ ಕುಂಬಳೆಯಲ್ಲಿ ಬಿ.ಜೆ.ಪಿ. ವತಿಯಿಂದ ಪ್ರತಿಭಟನೆ ನಡೆಯಿತು. ಪಕ್ಷದ ನಾಯಕರಾದ ಸುರೇಶ್ ಕುಮಾರ್ ಶೆಟ್ಟಿ, ಕೆ. ವಿನೋದನ್, ಎಚ್.ಸತ್ಯಶಂಕರ ಭಟ್, ಎಂ .ಶಂಕರ ಆಳ್ವ , ಬಾಬು ಗಟ್ಟಿ, ಶಂಕರ ಕುಂಟಂಗರಡ್ಕ, ಕೆ. ರಮೇಶ್ ಭಟ್, ಕೆ. ಸುಧಾಕರ ಕಾಮತ್, ದಿನೇಶ್ ಆರಿಕ್ಕಾಡಿ, ಹರೀಶ್ ಗಟ್ಟಿ, ಸುಜಿತ್ ರೈ, ಅನಿಲ್ ಶೆಟ್ಟಿ ಮುಂತಾದವರು ನೇತೃತ್ವ ನೀಡಿದರು.