Advertisement

ಹರ್ಯಾಣ, ಹಿಮಾಚಲದಲ್ಲಿ ಬಿಜೆಪಿ ಸೋಲು, ರೈತರ ಹೋರಾಟದ ಗೆಲುವಾಗಿದೆ: ಟಿಕಾಯತ್

02:45 PM Nov 03, 2021 | Team Udayavani |

ನವದೆಹಲಿ:ಹಿಮಾಚಲ್ ಪ್ರದೇಶ ಮತ್ತು ಹರ್ಯಾಣದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪರಾಜಯಗೊಂಡಿರುವುದು “ರೈತ ಚಳವಳಿಯ ಗೆಲುವಾಗಿದೆ” ಎಂದು ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು)ದ ರಾಕೇಶ್ ಟಿಕಾಯತ್ ಬುಧವಾರ(ನವೆಂಬರ್ 03) ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಆತ ಪಾಕ್ ಪ್ರೇಮಿ… ರಾತ್ರೋರಾತ್ರಿ ನನ್ನ ವಿರುದ್ಧ ಸಂಚು ಮಾಡಿದ್ದೇಕೆ? ಸೋನಿಯಾಗೆ ಸಿಂಗ್

ಅವರು(ಬಿಜೆಪಿ) ಈ ದೇಶದ ಜನರನ್ನು ಹತ್ತಿಕ್ಕಲು ಬಯಸುತ್ತಿದ್ದಾರೆ. ಅಷ್ಟೇ ಅಲ್ಲ ತೋಳ್ಬಲದ ತಂತ್ರಗಾರಿಕೆಯನ್ನೂ ಬಳಸುತ್ತಿದ್ದಾರೆ. ಹಣದುಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಖಾಸಗೀಕರಣದ ಮೂಲಕ ದೇಶವನ್ನು ಮಾರಲು ಹೊರಟಿರುವ ಈ ಸರ್ಕಾರದ ಆಡಳಿತದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಟಿಕಾಯತ್ ಆರೋಪಿಸಿದರು.

ಹಿಮಾಚಲ್ ಪ್ರದೇಶ ಮತ್ತು ಹರ್ಯಾಣದಲ್ಲಿ ಬಿಜೆಪಿ ಸೋಲನ್ನನುಭವಿಸಿದೆ. ಈ ಸೋಲು ಜನರು ಅಸಮಾಧಾನಗೊಂಡಿದ್ದಕ್ಕೆ ನೀಡಿರುವ ಕೊಡುಗೆಯಾಗಿದೆ. ಬಿಜೆಪಿಯ ಸೋಲು ನಮ್ಮ ರೈತ ಹೋರಾಟದ ಗೆಲುವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಇಂಡಿಯನ್ ನ್ಯಾಷನಲ್ ಲೋಕ ದಳ(ಐಎನ್ ಎಲ್ ಡಿ)ದ ಅಭ್ಯರ್ಥಿ ಅಭಯ್ ಸಿಂಗ್ ಚೌಟಾಲಾ ಹರ್ಯಾಣದ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂಬುದನ್ನು ಚೌಟಾಲಾ ಗೆಲುವಿನ ಮೂಲಕ ಮತದಾರ ತೋರಿಸಿಕೊಟ್ಟಿದ್ದಾರೆ ಎಂದು ಟಿಕಾಯತ್ ಹೇಳಿದರು.

Advertisement

ಒಂದು ವೇಳೆ ಕೇಂದ್ರ ಸರ್ಕಾರ ರೈತರ ಸಮಸ್ಯೆಯನ್ನು ಕೇಳಲು ಸಿದ್ದವಾಗಿಲ್ಲ ಎಂದಾದರೆ ಬಿಜೆಪಿ ಸೋಲನ್ನನುಭವಿಸುವುದು ಖಚಿತ. ಅವರ ಭರವಸೆ ಮತ್ತು ಕಾರ್ಯಾಚರಣೆ ಎರಡೂ ಭಿನ್ನವಾಗಿದೆ. ಅವರು ತಮ್ಮ ಭರವಸೆಯನ್ನು ಈಡೇರಿಸಲು ಸಿದ್ದರಿಲ್ಲ ಎಂದು ಟಿಕಾಯತ್ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next