Advertisement

ಬಿಜೆಪಿಯ 35 ಶಾಸಕರಿಗಿಲ್ಲ ಟಿಕೆಟ್‌!

07:50 AM Nov 17, 2017 | Team Udayavani |

ನವದೆಹಲಿ: ಈ ಬಾರಿಯ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ತನ್ನ ಆರು ಸಚಿವರೂ ಸೇರಿದಂತೆ 35 ಹಾಲಿ ಎಂಎಲ್‌ಎಗಳಿಗೆ ಚುನಾವಣಾ ಟಿಕೆಟ್‌ ನೀಡದಿರಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

Advertisement

ಒಟ್ಟು 182 ಕ್ಷೇತ್ರಗಳಲ್ಲಿ ಏನಿಲ್ಲ ವೆಂದರೂ 150 ಕ್ಷೇತ್ರಗಳನ್ನು ವಶಪಡಿಸಿಕೊಳ್ಳುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ಗುರಿಯಾಗಿರುವುದರಿಂದ ಗೆಲ್ಲುವ ಕುದುರೆಗಳಿಗಷ್ಟೇ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. 

ರಾಜ್ಯವನ್ನು ಮೂರು ಅವಧಿಯವರೆಗೆ ಮುನ್ನಡೆಸಿ ಆನಂತರ ಪ್ರಧಾನಿ ಹುದ್ದೆಗೇರಿದ ಮೋದಿಯವರಿಗೆ ಅಭಿನಂದನೆ ಎಂಬ ಮಾದರಿಯಲ್ಲಿ ಕನಿಷ್ಠ 150 ಕ್ಷೇತ್ರಗಳಲ್ಲಿ ನಾವು (ಬಿಜೆಪಿ) ಗೆಲ್ಲಬೇಕೆಂದು ಅಮಿತ್‌ ಶಾ ಈಗಾಗಲೇ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

“ರಫೇಲ್‌’ ವಾರ್‌
ಯುಪಿಎ ಅವಧಿಯಲ್ಲಿ ಏರ್ಪಟ್ಟಿದ್ದ ಎಚ್‌ಎಎಲ್‌ ಹಾಗೂ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ ನಡುವಿನ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ರಿಲಯನ್ಸ್‌ ಡಿಫೆನ್ಸ್‌ ಕಂಪನಿಗೆ ಅನುಕೂಲ ವಾಗುವಂತೆ ಬದಲಿಸಲಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗೆ ಬಿಜೆಪಿ, ರಿಲಯನ್ಸ್‌ ಕಂಪನಿ ಪ್ರತ್ಯುತ್ತರ ನೀಡಿವೆ. ರಫೇಲ್‌ ಒಪ್ಪಂದದ ಬಗ್ಗೆ ಮಾತಾಡುವ ಮೂಲಕ ಯುಪಿಎ ಅವಧಿಯಲ್ಲಾಗಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದಿಂದ ಜನರ ದೃಷ್ಟಿಯನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಹೇಳಿದ್ದರೆ, ಡಸಾಲ್ಟ್ ಕಂಪನಿ ಹಾಗೂ ರಿಲಯನ್ಸ್‌ ನಡುವಿನ ಒಪ್ಪಂದದಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ರಿಲಯನ್ಸ್‌ ಹೇಳಿದೆ.

ಐಎಎಫ್ ಸ್ಪಷ್ಟನೆ: ವಾಯುಪಡೆ ಮುಖ್ಯಸ್ಥ ಬೀರೇಂದರ್‌ ಸಿಂಗ್‌ ಧನೋವಾ ಅವರು ಕಾಂಗ್ರೆಸ್‌ ಆರೋಪ ತಳ್ಳಿಹಾಕಿದ್ದಾರೆ. ಹೆಚ್ಚಿನ ಮೊತ್ತಕ್ಕೆ ಒಪ್ಪಂದ ನಡೆದಿದೆ ಎನ್ನುವ ಆರೋಪ ಸುಳ್ಳು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next