Advertisement

ಮಾ.1ರಿಂದ 4 ಸ್ಥಳಗಳಿಂದ ಬಿಜೆಪಿ ಯಾತ್ರೆ ಪ್ರಾರಂಭ

09:53 PM Feb 25, 2023 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿರುವ ಬಿಜೆಪಿ, ಪಕ್ಷದ ಹಿರಿಯ ನಾಯಕರನ್ನು ಮುಂಚೂಣಿಯಲ್ಲಿಟ್ಟುಕೊಂಡು ರಾಜ್ಯಾದ್ಯಂತ ಯಾತ್ರೆ ನಡೆಸಲು ಸನ್ನದ್ಧವಾಗಿದೆ.

Advertisement

ಬಿಜೆಪಿ ಸಂಕಲ್ಪ ಯಾತ್ರೆ ಬಗ್ಗೆ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಮಾಹಿತಿ ನೀಡಿದರು. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಪ್ರತೀ ಜಿಲ್ಲೆಗೆ ಭೇಟಿ ನೀಡಿ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಉಳಿದಂತೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದ ಗೌಡ ಮುಂತಾದವರನ್ನು ಯಾತ್ರೆಯ ಸಂದರ್ಭದಲ್ಲಿನ ಸ್ಥಿತಿಗತಿಗೆ ಅನುಗುಣವಾಗಿ ಪಕ್ಷ ಬಳಸಿಕೊಳ್ಳಲಿದೆ. ಉಳಿದಂತೆ ಪಕ್ಷದ ಜನಪ್ರತಿನಿಧಿಗಳು ಯಾತ್ರೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ನಾಲ್ಕು ಯಾತ್ರೆಗಳು
ರಾಜ್ಯದ ನಾಲ್ಕು ಸ್ಥಳಗಳಿಂದ ಯಾತ್ರೆ ಆರಂಭಗೊಳ್ಳಲಿದೆ. ಮಾರ್ಚ್‌ ಒಂದರಂದು ಮಲೈ ಮಹದೇಶ್ವರ ಬೆಟ್ಟ, ಮಾರ್ಚ್‌ 2ರಿಂದ ನಂದಗಢದ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ, ಮಾರ್ಚ್‌ 3ರಿಂದ ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳ, ಮಾರ್ಚ್‌ 3ರಂದು ದೇವನಹಳ್ಳಿಯಲ್ಲಿನ ಕೆಂಪೇಗೌಡರ ಜನ್ಮಸ್ಥಳ ಆವತಿಯಿಂದ ಸಂಕಲ್ಪ ಯಾತ್ರೆ ಹೊರಡಲಿದೆ. ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಾಪುರ, ಜಿಲ್ಲಾ ಪ್ರಭಾರಿ ಮತ್ತು ಯಾತ್ರೆಯ ಸಹ ಸಂಚಾಲಕ ಸಚ್ಚಿದಾನಂದಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಯಾತ್ರೆ 1
ಪ್ರಾರಂಭದ ಸ್ಥಳ: ಮಲೆ ಮಹದೇಶ್ವರ ಬೆಟ್ಟ
ಪ್ರಾರಂಭದ ದಿನಾಂಕ: ಮಾ. 1
ಉದ್ಘಾಟಕರು: ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಒಟ್ಟು ಕ್ಷೇತ್ರಗಳು: 58
ಯಾತ್ರೆ ಸಾಗುವ ಜಿಲ್ಲೆಗಳು: ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ.
ಪಾಲ್ಗೊಳ್ಳುವ ನಾಯಕರು: ಕೆ.ಎಸ್‌.ಈಶ್ವರಪ್ಪ, ವಿ. ಸೋಮಣ್ಣ, ಕೆ.ಸಿ. ನಾರಾಯಣಗೌಡ, ವಿ. ಸುನೀಲ್‌ ಕುಮಾರ್‌, ವಿ. ಶ್ರೀನಿವಾಸ್‌ ಪ್ರಸಾದ್‌, ಎನ್‌. ಮಹೇಶ್‌, ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ನಿರ್ಮಲ್‌ ಕುಮಾರ್‌ ಸುರಾನ.

Advertisement

ಯಾತ್ರೆ 2
ಪ್ರಾರಂಭದ ಸ್ಥಳ: ನಂದಗಢದ ಸಂಗೊಳ್ಳಿ ರಾಯಣ್ಣ ಸ್ಮಾರಕ
ಪ್ರಾರಂಭದ ದಿನಾಂಕ: ಮಾ. 2
ಉದ್ಘಾಟಕರು: ರಾಜನಾಥ ಸಿಂಗ್‌, ಕೇಂದ್ರ ರಕ್ಷಣ ಸಚಿವ
ಒಟ್ಟು ಕ್ಷೇತ್ರಗಳು: 56
ಯಾತ್ರೆ ಸಾಗುವ ಜಿಲ್ಲೆಗಳು: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ.
ಪಾಲ್ಗೊಳ್ಳುವ ನಾಯಕರು: ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ರಮೇಶ್‌ ಜಾರಕಿಹೊಳಿ, ಸಿ.ಸಿ. ಪಾಟೀಲ್‌, ಮುರುಗೇಶ್‌ ನಿರಾಣಿ, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜ, ಶಿವರಾಮ ಹೆಬ್ಟಾರ್‌, ಅನಿಲ್‌ ಬೆನಕೆ, ಮಹೇಶ್‌ ಟೆಂಗಿನಕಾಯಿ.

ಯಾತ್ರೆ 3
ಪ್ರಾರಂಭದ ಸ್ಥಳ: ಬಸವಕಲ್ಯಾಣದ ಹೊಸ ಅನುಭವ ಮಂಟಪ
ಪ್ರಾರಂಭದ ದಿನಾಂಕ: ಮಾ. 3
ಪ್ರಾರಂಭದ ಸಮಯ: ಬೆಳಗ್ಗೆ 11
ಉದ್ಘಾಟಕರು: ಅಮಿತ್‌ ಶಾ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ
ಒಟ್ಟು ಕ್ಷೇತ್ರಗಳು: 45
ಯಾತ್ರೆ ಸಾಗುವ ಜಿಲ್ಲೆಗಳು: ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ.
ಪಾಲ್ಗೊಳ್ಳುವ ನಾಯಕರು: ಜಗದೀಶ್‌ ಶೆಟ್ಟರ್‌, ಬಿ. ಶ್ರೀರಾಮುಲು, ಭಗವಂತ ಖೂಬಾ, ಪ್ರಭು ಚೌವ್ಹಾಣ್‌, ಹಾಲಪ್ಪ ಆಚಾರ್‌, ಆನಂದ್‌ ಸಿಂಗ್‌, ಅರವಿಂದ ಲಿಂಬಾವಳಿ, ಬಾಬುರಾವ್‌ ಚಿಂಚನಸೂರ್‌, ಮಾಲೀಕಯ್ಯ ಗುತ್ತೇದಾರ್‌, ಸಿದ್ಧರಾಜು, ಛಲವಾದಿ ನಾರಾಯಣಸ್ವಾಮಿ, ಮಾರುತಿರಾವ್‌ ಮೂಳೆ.

ಯಾತ್ರೆ 4
ಪ್ರಾರಂಭದ ಸ್ಥಳ: ದೇವನಹಳ್ಳಿಯ ಆವತಿ, ಕೆಂಪೇಗೌಡ ಜನ್ಮಸ್ಥಳ
ಪ್ರಾರಂಭದ ದಿನಾಂಕ: ಮಾರ್ಚ್‌ 3
ಪ್ರಾರಂಭದ ಸಮಯ: ಅಪರಾಹ್ನ 3
ಉದ್ಘಾಟಕರು: ಅಮಿತ್‌ ಶಾ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ
ಒಟ್ಟು ಕ್ಷೇತ್ರಗಳು: 65
ಯಾತ್ರೆ ಸಾಗುವ ಜಿಲ್ಲೆಗಳು: ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ.
ಪಾಲ್ಗೊಳ್ಳುವ ನಾಯಕರು: ಆರ್‌. ಅಶೋಕ್‌, ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಎ. ನಾರಾಯಣಸ್ವಾಮಿ, ಎಸ್‌.ಟಿ. ಸೋಮಶೇಖರ್‌, ಡಾ| ಸುಧಾಕರ್‌, ಮುನಿರತ್ನ, ಎಂಟಿಬಿ ನಾಗರಾಜ್‌, ಜೆ.ಸಿ. ಮಾಧುಸ್ವಾಮಿ, ಪಿ.ಸಿ. ಮೋಹನ್‌, ಪೂರ್ಣಿಮಾ ಶ್ರೀನಿವಾಸ್‌.

ಸಮಾರೋಪ ಸಮಾರಂಭಕ್ಕೆ ಮೋದಿ
ಬಹುತೇಕ ಮಾರ್ಚ್‌ 25ರಂದು ದಾವಣಗೆರೆಯಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಸುಮಾರು ಹತ್ತು ಲಕ್ಷ ಮಂದಿಯನ್ನು ಸೇರಿಸುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ ಎಂದು ರವಿಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next