ಬೆಂಗಳೂರು: ರೈತರು ಅನ್ನದಾತರು, ದೇಶದ ಬೆನ್ನೆಲುಬು ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಬಿಜೆಪಿ ಹೇಳಿಕೆಯಲ್ಲಿ ಒಂದು, ಮನಸ್ಸಿನಲ್ಲಿ ಒಂದು ಇಟ್ಟುಕೊಂಡಿದ್ದಾರೆ. ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಪ್ರತಿಭಟನೆಗೆ ಕಾರ್ಯಕರ್ತರ ಹೆಸರಿನಲ್ಲಿ ಬಿಜೆಪಿಯವರು ವೇಶ ಮರೆಸಿಕೊಂಡು ಬಂದಿದರು. ರಸ್ತೆಯಲ್ಲಿ ಮೊಳೆ ಹೊಡೆದಿದ್ದಾರೆ. ಕಾಂಕ್ರೀಟ್ ದಿಬ್ಬ ಹಾಕಿ ಅಡ್ಡಗಟ್ಟಿದ್ದಾರೆ. ರೈತರ ಹೆಸರಲ್ಲಿ ಅವರ ಮುಖವಾಡ ಹೊರ ಬಂದಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯವರು ಅನುಭವಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ದಾಳಿ ನಡೆಸಿದ್ದರಿಂದ ಪೊಲೀಸರ ಕ್ರಮ; ಅಶ್ರುವಾಯು ಸಿಡಿಸಿದ್ದಕ್ಕೆ ಕೇಂದ್ರ ಸಮರ್ಥನೆ
ಮೇಲ್ಮನೆ ಸಭಾಪತಿ, ಉಪಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಇತ್ತೀಚೆಗೆಯಷ್ಟೇ ಉಪಸಭಾಪತಿ ಚುನಾವಣೆ ನಡೆದಿದೆ. ಸಭಾಪತಿ ಸ್ಥಾನಕ್ಕೆ ರಾಜಿನಾಮೆ ಕೇಳಿದ್ದಾರೆ. ಈ ಬಗ್ಗೆ ಪರಿಷತ್‌ನಲ್ಲಿ ಚರ್ಚೆಯಾಗಲಿದೆ. ಮೊದಲಿನಿಂದಲೂ ದೇವೇಗೌಡರು ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಇಟ್ಟವರು. ಸಭಾಪತಿ ಸ್ಥಾನ ಹೊಂದಾಣಿಕೆಗೆ ಅವರು ಬಿಜೆಪಿ ಜೊತೆ ಹೋಗದಿರುವುದು ಸೂಕ್ತ ಎಂದರು.
ಗೋಹತ್ಯೆ ನಿಷೇಧ ವಿಚಾರ ಬಂದಾಗ ಬಿಜೆಪಿ ನಿರ್ಧಾರ ತೆಗೆದುಕೊಂಡಿತ್ತು. ನನ್ನ ಅಭಿಪ್ರಾಯದಲ್ಲಿ ಎಲ್ಲಾ ಪ್ರಾಣಿ ಹತ್ಯೆ ನಿಲ್ಲಿಸಬೇಕು ಎಂದು ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.