Advertisement

ನಿರಂತರ ವಿದ್ಯುತ್‌ ನೀಡಲು ವಿಫ‌ಲ

03:01 PM Jan 31, 2023 | Team Udayavani |

ಪಾಂಡವಪುರ: ಸೆಸ್ಕ್ ಅಧಿಕಾರಿಗಳು ನಿರಂತರ ವಿದ್ಯುತ್‌ ನೀಡುವಲ್ಲಿವಿಫ‌ಲರಾಗಿದ್ದು, ರೈತ ಸಮುದಾಯಕ್ಕೆ ವಿನಾಃಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಮುಖಂಡ ಡಾ.ಎನ್‌.ಎಸ್‌.ಇಂದ್ರೇಶ್‌ ನೇತೃತ್ವದಲ್ಲಿ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧಆಕ್ರೋಶ ವ್ಯಕ್ತಪಡಿಸಿ, ಎಇಇ ಪುಟ್ಟಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ರೈತರ ಸಮಸ್ಯೆಗೆ ಸ್ಪಂದಿಸಿಲ್ಲ: ಬಿಜೆಪಿ ಮುಖಂಡ ಡಾ.ಎನ್‌.ಎಸ್‌.ಇಂದ್ರೇಶ್‌ಮಾತನಾಡಿ, ವಿದ್ಯುತ್‌ ಸಮಸ್ತೆಯಿಂದಹಳ್ಳಿಗಾಡಿನ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ವಿದ್ಯುತ್‌ ಸಮಸ್ಯೆ ಉಂಟಾದಲ್ಲಿಬೆಳೆ ಮೇಲೆ ಪರಿಣಾಮ ಬೀರಿ ರೈತನಿಗೆ ತೊಂದರೆಯಾಗುತ್ತಿದೆ.

ದೂರು ಬಂದ ತಕ್ಷಣ ಕೆಲಸ ಮಾಡಬೇಕು. ಅನ್ನದಾತನ ಕೆಲಸ ಮಾಡುವುದಕ್ಕೆಯೇನೀವಿರುವುದು. ವಿದ್ಯುತ್‌ ಸಮಸ್ಯೆಯ ಬಗ್ಗೆಅಧಿಕಾರಿಗಳ ಗಮನಕ್ಕೆ ತಂದರೆ ಸೆಸ್ಕ್ ಅಧಿಕಾರಿಗಳು ಯಾವುದಕ್ಕೂ ಸ್ಪಂದನೆನೀಡದೆ, ಬೇಜವಬ್ದಾರಿಯಿಂದವರ್ತಿಸುತ್ತಿದ್ದಾರೆ ಎನ್ನುವ ಮಾತುಗಳು ಸಾಕಷ್ಟು ಕೇಳಿಬರುತ್ತಿದೆ. ಬಡ ರೈತರುವಿದ್ಯುತ್‌ ಸಮಸ್ಯೆ ಕುರಿತು ಬಂದು ದೂರುನೀಡಿದರೆ, ಸಮಸ್ಯೆಗೆ ಸ್ಪಂದನೆ ನೀಡದೆತಾರತಮ್ಯ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ರೈತರನ್ನು ಕಚೇರಿಗೆ ಅಲೆಸಬೇಡಿ: ಸೆಸ್ಕ್ ಅಧಿಕಾರಿಗಳು ರೈತರ ಸಮಸ್ಯೆ ಸ್ಪಂದನೆನೀಡಬೇಕಾದರೆ ಶಾಸಕರ ಶಿಫಾರಸ್ಸು ಬೇಕು, ಇಲ್ಲಿನ ಅಧಿಕಾರಿಗಳು ರಾಜಕೀಯ ಮಾಡಲುಹೊರಟಿದ್ದು, ಇಲಾಖೆಯಲ್ಲಿ ರಾಜಕೀಯ ಮಾಡುವುದಾದರೆ ತಮ್ಮ ಕೆಲಸಕ್ಕೆರಾಜೀನಾಮೆ ನೀಡಿ, ನಂತರ ಬಂದುರಾಜಕಾರಣ ಮಾಡಿ ಎಂದು ತರಾಟೆಗೆತೆಗೆದುಕೊಂಡ ಅವರು, ರೈತರನ್ನು ಕಚೇರಿಗೆಅಲೆಸದೆ ಕೆಲಸ ಮಾಡಿಕೊಡಿ ಎಂದು ಕಿಡಿಕಾರಿದರು.

Advertisement

ರೈತರು ವಿದ್ಯುತ್‌ ಸಮಸ್ಯೆ ಬಗ್ಗೆ ದೂರುನೀಡಿದ ತಕ್ಷಣ ಸ್ಪಂದಿಸಿ, ರೈತರ ಸಮಸ್ಯೆ ಆಲಿಸಬೇಕು. ಇಲ್ಲವಾದರೆ ಮುಂದಿನದಿನಗಳಲ್ಲಿ ಮತ್ತಷ್ಟು ರೈತರೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಇಇ ಪುಟ್ಟಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ನಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿಸರಿಪಡಿಸಿಕೊಂಡು ರೈತರ ಸಮಸ್ಯೆಗೆ ಸ್ಪಂದಿಸಿಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ್‌, ಮುಖಂಡರಾದರಾಜೀವ್‌ ತಮ್ಮಣ್ಣ, ಕೆ.ಎಲ್‌.ಆನಂದ್‌,ನೀಲನಹಳ್ಳಿ ಧನಂಜಯ್‌, ಎಲೆಕೆರೆಈರೇಗೌಡ, ಚಿಕ್ಕಮರಳಿ ನವೀನಕುಮಾರ್‌,ಸಂದೇಶ್‌, ಸೋಮಣ್ಣ, ಭಾಸ್ಕರ್‌, ರಾಮು,ಶ್ರೀನಿವಾಸ ನಾಯಕ ಸೇರಿದಂತೆ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next