ದೊಡ್ಡಬಳ್ಳಾಪುರ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರಗಳು ಸಾಮಾನ್ಯ. ಆದರೆ, ಅನಿರೀಕ್ಷಿತ ಬೆಳ ವಣಿಗೆಯೊಂದರಲ್ಲಿ ನಗರಸಭೆ ಸದಸ್ಯರು ಸೇರಿದಂತೆ ಪಕ್ಷದ ಘಟಾನುಘಟಿ ಮುಖಂಡರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಭಾನುವಾರವಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ಮತಯಾಚನೆ ನಡೆಸಿದ ಒಂದು ದಿನದ ಅಂತರದಲ್ಲಿಯೇ, ಸೋಮವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ, ಶಾಸಕ ಟಿ.ವೆಂಕಟ ರಮಣಯ್ಯ ನೇತೃತ್ವದಲ್ಲಿ ಮುನ್ನೂರಕ್ಕೂ ಹೆಚ್ಚು ಮುಖಂಡರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಪಕ್ಷ ಬಿಟ್ಟ ಬಿಜೆಪಿ ಮುಖಂಡರು: ಪ್ರಮುಖವಾಗಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಎಚ್.ಎಸ್.ಶಿವಶಂಕರ್ ಸೇರಿ ದಂತೆ 35 ಗ್ರಾಪಂ ಸದಸ್ಯರು ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಘಟಾನು ಘಟಿ ಮುಖಂಡರು ಬಿಜೆಪಿ ತ್ಯಜಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಪ್ರಮುಖ ತೀರ್ಮಾನ ನಡೆದಿದ್ದು, ದೊಡ್ಡಬಳ್ಳಾಪುರದ ಬಿಜೆಪಿಯಲ್ಲಿದ್ದ ಶೇ.50 ರಷ್ಟು ಪ್ರಮುಖ ಮುಖಂಡರು ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಜಗದೀಶದ ಶೆಟ್ಟರ್, ಲಕ್ಷ್ಮಣ ಸವದಿ, ಪುಟ್ಟಣ್ಣ ಸೇರಿದಂತೆ ಸುಮಾರು ಬಂದಿ ಕೇಸರು ಶಾಲು ತೊಟ್ಟವರು ಬಿಜೆಪಿ ಸಹವಾಸ ಸಾಕು ಎಂದು ಕಾಂಗ್ರೆಸ್ ಸೇರಿದ್ದಾರೆ ಎಂದರು.
ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ರೇವಣ್ಣ, ಶಾಸಕ ಟಿ.ವೆಂಕಟರಮಣಯ್ಯ, ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇ ಗೌಡ, ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್ ನಾರಾಯಣಗೌಡ, ಮುಖಂಡರಾದ ಕಂಟನಕುಂಟೆ ಕೃಷ್ಣ ಮೂರ್ತಿ, ಚುಂಚೇಗೌಡ, ಜಿ.ಲಕ್ಷಿ¾àಪತಿ, ನಗರಸಭೆ ಸದಸ್ಯರಾದ ಆನಂದ್, ಸುಬ್ರಮಣಿ, ರೋಹಿಣಿ ಮಂಜುನಾಥ್, ಮುಖಂಡರಾದ ಆದಿತ್ಯ ನಾಗೇಶ್, ಅಖೀಲೇಶ್, ದಯಾನಂದ್ ಮತ್ತಿತರರಿದ್ದರು.