Advertisement

ಗುಜರಾತ್‌ನಲ್ಲಿ ಬಿಜೆಪಿಗೇ ಜಯ?

07:25 AM Oct 25, 2017 | Harsha Rao |

ಹೊಸದಿಲ್ಲಿ: ಗುಜರಾತ್‌ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿ ಕೊಳ್ಳಲಿದೆ. ಪಟೇಲರಿಗೆ ಮೀಸಲು ದೊರಕಿಸಲು ಹೋರಾಟ ನಡೆಸಿದ ಹಾರ್ದಿಕ್‌ ಪಟೇಲ್‌ ಮತ್ತವರ ಬೆಂಬಲಿಗರಿಗೆ ನಿರೀಕ್ಷಿತ ಪ್ರೋತ್ಸಾಹ ಸಿಗಲಾರದು. ವಿಧಾನಸಭೆಗೆ ಚುನಾ ವಣೆಯ ದಿನಾಂಕ ಬುಧವಾರ ಪ್ರಕಟ ವಾಗುವ ನಿರೀಕ್ಷೆಯ ನಡುವೆಯೇ “ಇಂಡಿಯಾ ಟುಡೇ’ -“ಆ್ಯಕ್ಸಿಸ್‌ ಮೈ ಇಂಡಿಯಾ’ ಸಂಸ್ಥೆ ಜಂಟಿಯಾಗಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. 

Advertisement

ಸೆ.15ರಿಂದ ಅ.15ರ ವರೆಗೆ 182 ಕ್ಷೇತ್ರಗಳಲ್ಲಿ ಈ ಸಮೀಕ್ಷೆ ನಡೆಸಿದಾಗ ಆಡಳಿತಾರೂಢ ಬಿಜೆಪಿಗೆ 115-125 ಸ್ಥಾನಗಳು ಲಭಿಸುವ ಸಾಧ್ಯತೆ ಗೋಚರಿಸಿದೆ. 2007 ಮತ್ತು 2012ರ ಫ‌ಲಿತಾಂಶದ ಮಾದರಿಯಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆಯ ಫ‌ಲಿತಾಂಶವೂ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ಪ್ರಧಾನ ವಿಪಕ್ಷ ಕಾಂಗ್ರೆಸ್‌ 57-65 ಸ್ಥಾನಗಳನ್ನು ಗಳಿಸಲಿದೆ. ಹಾಲಿ ವಿಧಾನಸಭೆಯಲ್ಲಿ ಪಕ್ಷ 60 ಸ್ಥಾನಗಳನ್ನು ಗೆದ್ದಿತ್ತು. ಒಬಿಸಿ ನಾಯಕ ಅಲ್ಪೇಶ್‌ ಠಾಕೂರ್‌, ದಲಿತ ಹೋರಾಟಗಾರ ಜಿಗ್ನೇಶ್‌ ಮೇವಾನಿ ನಡೆಸಿದ ಹೋರಾಟ ಕೊಂಚ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಧನಾತ್ಮಕವಾಗಲಿದೆ. 

182 ಸ್ಥಾನಗಳ ಪೈಕಿ ಪಟೇಲ್‌ ಸಮುದಾಯ 21 ಕ್ಷೇತ್ರಗಳಲ್ಲಿ ಭಾರಿ ಪ್ರಭಾವ ಹೊಂದಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ.16ರಷ್ಟು ಪ್ರಮಾಣ ದಲ್ಲಿ ಪಟೇಲರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next