Advertisement
ಬಿಜೆಪಿ ರಾಜ್ಯ ವಕ್ತಾರೆ ಸುಲೋಚನಾ ಜಿ.ಕೆ. ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ತಮ್ಮ ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗುತ್ತಿಲ್ಲ. ಶಾಂತವಾಗಿ ನಡೆಯುತ್ತಿದ್ದ ಶರತ್ ಶವಯಾತ್ರೆ ಸಂದರ್ಭದಲ್ಲಿ ಕಲ್ಲುತೂರಾಟ ನಡೆಸಿದವರನ್ನು ಬಂಧಿಸದೇ, ಮೆರವಣಿಗೆ ನೇತೃತ್ವ ವಹಿಸಿದ್ದ ಹಿಂದೂ ನಾಯಕರನ್ನೇ ಬಂಧಿಸಲು ಹೊರಟಿರುವುದು ರಾಜ್ಯ ಸರಕಾರದ ದಮನಕಾರಿ ನೀತಿಯನ್ನು ತೋರಿಸುತ್ತದೆ ಎಂದವರು ಆರೋಪಿಸಿದರು. ಅವಕಾಶ ನೀಡಿದ್ದರೂ…
ಪ್ರತಿಭಟನೆಗೆ ಅವಕಾಶ ನೀಡದಿದ್ದರೆ ನಿಮ್ಮ ಮುಂದಿನ ನಡೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ,
ಇದು ಹಿಂದೂ ಕಾರ್ಯಕರ್ತರ ಅಳವು-ಉಳಿವಿನ ಪ್ರಶ್ನೆ. ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ಬಳಿ ಅಥವಾ ನೆಹರೂ ಮೈದಾನದಲ್ಲಿ ನಡೆಯಲಿದೆ. ಒಂದು ವೇಳೆ ಅವಕಾಶ ನೀಡದಿದ್ದರೂ ಪ್ರತಿಭಟನೆ ನಡೆಸಿಯೇ ಸಿದ್ಧ ಎಂದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಭಾ ಮಾಲಿನಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಉಪಸ್ಥಿತರಿದ್ದರು.
Related Articles
ಜು. 13ರಂದು ಮಂಗಳೂರು ಮತ್ತು ಉಡುಪಿ ಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡುವುದಾಗಿ ಆಯಾ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.
Advertisement
ಹಿಂದೂಗಳ ಬಂಧನ ಪ್ರಯತ್ನ ವಿರುದ್ಧ ಪ್ರತಿಭಟನೆ
ಜಿಲ್ಲೆಯಲ್ಲಿ ಹಲವು ಪ್ರಕರಣಗಳು ಪೂರ್ಣ ವಿರಾಮ ಕಾಣದೆ ಬಾಕಿಯಾಗಿದ್ದರೂ ಕಾರಣಕರ್ತರನ್ನು ಬಂಧಿಸದೆ ಬಿಜೆಪಿ ಮುಖಂಡರನ್ನು, ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಶರತ್ ಕೊಲೆಯಾಗಿ ಇಷ್ಟು ದಿನಗಳಾಗಿದ್ದರೂ ಆರೋಪಿ ಗಳ ಬಂಧನವಾಗಿಲ್ಲ. ಈ ಎಲ್ಲ ಪ್ರಕರಣಗಳನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವ ದಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಗೆ ಸ್ಥಳ ನಿಗದಿಯಾಗಬೇಕಷ್ಟೇ.
– ನಳಿನ್‌ಕುಮಾರ್ ಕಟೀಲು, ಸಂಸದ