Advertisement

ಭ್ರಮಾಲೋಕ ಸೃಷ್ಟಿಸಿ ಬಿಜೆಪಿ ಗೆಲುವು: ದಿನೇಶ್‌ ಗುಂಡೂರಾವ್‌

08:15 AM Jul 24, 2017 | Team Udayavani |

ಸೋಮವಾರಪೇಟೆ: ಯುಪಿಎ ಸರಕಾ ರದ ಆಡಳಿತದಲ್ಲಿ ಇದ್ದ ಕಾರ್ಯಕ್ರಮಗಳನ್ನು ಸ್ವಲ್ಪ ಬದಲಾಯಿಸಿ ತನ್ನದೇ ಕಾರ್ಯಕ್ರಮ ಎಂದು ಎನ್‌ಡಿಎಜನರಿಗೆ ಮಂಕುಬೂದಿ ಎರಚುವ ಕೆಲಸ ತೀವ್ರ ಗೊಳಿಸಿದೆ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುವಕರಲ್ಲಿ ಭ್ರಮಾಲೋಕ ಸೃಷ್ಟಿಸಿ, ಸುಳ್ಳನ್ನೇ ಸತ್ಯ ಎಂಬುದಾಗಿ ನಂಬಿಸಿ, ಗೆಲವು ಸಾಧಿಸಿರುವ ಬಿಜೆಪಿ, ಈಗ ಮತ್ತೂಮ್ಮೆ ವಿಸ್ತಾರಕರನ್ನು ನೇಮಿಸಿ ಸುಳ್ಳು ಅಂಕಿ ಅಂಶಗಳನ್ನೊಳಗೊಂಡ ಕರಪತ್ರವನ್ನು ಮನೆ ಮನೆಗೆ ಹಂಚುತ್ತಿದ್ದಾರೆ ಎಂದು ದೂರಿದರು.

ಮಾಹಿತಿ ಹಕ್ಕು ಕಾಯಿದೆ, ಆಧಾರ್‌, ಲೋಕ್‌ಪಾಲ್‌ ಮಸೂದೆ, ಆಹಾರ ಭದ್ರತೆ, ಉದ್ಯೋಗ ಖಾತ್ರಿಯಂತಹ ಯೋಜನೆಗಳು ಯುಪಿಎ ಸರಕಾ ರದ ಯೋಜನೆಗಳಾಗಿವೆ. ಯುಪಿಎ ಸರಕಾರದ ನಿರ್ಮಲಭಾರತ ಘೋಷಣೆಯನ್ನು ಬದಲಾಯಿಸಿ ಸ್ವತ್ಛ ಭಾರತ ಎಂದು ನಾಮಾಂಕಿತ ಮಾಡಿರುವುದೇ ಎನ್‌ಡಿಎ ಸಾಧನೆಯಾಗಿದೆ. ಪ್ರಧಾನಮಂತ್ರಿ ಮೋದಿ ಅವರ ಅಚ್ಛೆ ದಿನ್‌ ಬದಲಾಗಿ ಕೆಟ್ಟ ದಿನಗಳು ಬರುತ್ತಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ರಾಜ್ಯದ 22 ಲಕ್ಷ ರೈತರ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಿದೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಗೆ ಹೋರಾಟಕ್ಕೆ ಯಾವುದೇ ವಿಷಯಗಳು ಸಿಗದ ಕಾರಣ, ದಕ್ಷಿಣ ಕನ್ನಡದ ಕಲ್ಲಡ್ಕ ಕೋಮು ಗಲಭೆ ಯನ್ನು ಚುನಾವಣಾ ವಿಷಯವನ್ನಾಗಿ ತೆಗೆದುಕೊಂಡು ಬೆಂಕಿ ಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.

Advertisement

ದೇಶದಲ್ಲಿ ಗೋಮಾಂಸದ ಹೆಸರಿನಲ್ಲಿ ಗೋರಕ್ಷಕರು ಅಲ್ಪಸಂಖ್ಯಾಕರನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಕಲಿ ಗೋರಕ್ಷಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮೊಸಳೆ ಕಣ್ಣೀರು ಸುರಿಸುತ್ತಾರೆ. ಗೋರಕ್ಷಕರು ವೇದಿಕೆಯಲ್ಲಿ ಪ್ರಚೋದ ನಕಾರಿ ಭಾಷಣ ಮಾಡುತ್ತಲೆ ಮುಂದುವರಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಒಂದು ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ಸ್ವಾರ್ಥದ ರಾಜಕಾರಣ ಮಾಡುವುದು ಬಿಜೆಪಿಯ ಒಂದಂಶದ ಕಾರ್ಯಕ್ರಮವಾಗಿದೆ. ಬಡಜನರ ಶವದ ಮೇಲೆ ಕೀಳುಮಟ್ಟದ ರಾಜಕಾರಣವನ್ನು ಮಾಡುವುದೇ ಬಿಜೆಪಿಯ ಪೌರುಷ. ಗೋ ರಕ್ಷಕರ ಮುಖವಾಡ ಧರಿಸಿರುವ ಇವರಿಂದ ಹಿಂದೂ ಧರ್ಮದ ರಕ್ಷಣೆಯ ಬಗ್ಗೆ ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಜಿಲ್ಲೆಗೆ ಸಂಬಂಧಿಸಿದಂತೆ ಮುಂಬರುವ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಮುಂಚಿತವಾಗಿ ಘೋಷಣೆ ಮಾಡುವುದು ಉತ್ತಮ. ಪಕ್ಷದಿಂದ ಹೊರ ಹೋಗುವವರು ಬೇಗನೆ ಹೋದಲ್ಲಿ ಪಕ್ಷಕ್ಕೂ ಉತ್ತಮ. ಪಕ್ಕಾ ಇರುವವರು ಮಾತ್ರ ಕಾಂಗ್ರೆಸಿಗೆ ಬೇಕಾಗಿದೆ. ಕಚ್ಚಾಡುವವರ ಅವಶ್ಯಕತೆ ಇಲ್ಲ. ನಿಷ್ಠಾವಂತ ಕಾರ್ಯಕರ್ತರೇ ಪಕ್ಷದ ಆಸ್ತಿಯಾಗಿದ್ದಾರೆಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥ್‌ ಮಾತನಾಡಿ, ಚುನಾವಣೆಗೆ ಮೊದಲು ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು. ರಾಹುಲ್‌ ಗಾಂಧಿಯವರ ಸೂಚನೆ ಮೇರೆಗೆ ಪ್ರತಿಯೊಂದು ಬೂತ್‌ ಮಟ್ಟದಿಂದಲೇ ಪಕ್ಷವನ್ನು ಸಂಘಟಿಸಲು ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಮೈಸೂರು, ಚಾಮರಾಜನಗರ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸುವ ಕಾರ್ಯ ನಡೆದಿದೆ. ಯುವ ಕಾಂಗ್ರೆಸ್‌ ಮತ್ತು ಮಹಿಳಾ ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು, ಸರಕಾರದ ಸಾಧನೆಗಳನ್ನು ಪ್ರತಿಯೊಂದು ಮನೆ ಮನೆಗೆ ತಿಳುಸುವಂತಹ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದರು. 

ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ ರಮೇಶ್‌ ಮಾತನಾಡಿ, ಪಕ್ಷದ ನಾಯಕರು ಜನರು ಮತ್ತು ಕಾರ್ಯಕರ್ತರ ನಡುವೆ ಸಮನ್ವಯತೆಯಿಂದ ಕೆಲಸ ಮಾಡಲು ಮುಂದಾಗಬೇಕು. ಈ ಹಿಂದಿನ ಸೋಲಿನ ಪರಾಮರ್ಶೆಯನ್ನು ಆತ್ಮಾವಲೋಕನ ಮಾಡುವ ಬದಲು ಕಾರ್ಯಕರ್ತರಲ್ಲಿ ಉತ್ಸಾಹವನ್ನು ತುಂಬುವ ಕೆಲಸವನ್ನು ಮಾಡಬೇಕು. ಉಸ್ತುವಾರಿ ಸಚಿವರು ಅಥವಾ ಪಕ್ಷದ ಪ್ರಮುಖ ನಾಯಕರು ಬಂದಾಗ ಅವರ ಹಿಂದೆ ಸುತ್ತಾಡುವವರು ನಾಯಕ ರಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಕಾರ್ಯಕರ್ತರೇ ನಿಜವಾದ ಆಸ್ತಿ. ಅಭ್ಯರ್ಥಿ ಆಯ್ಕೆ ಬಗ್ಗೆ ಯಾರಿಗೂ ಚಿಂತೆ ಬೇಡ. ಪಕ್ಷ ಮುಖ್ಯ ಎಂದು ಕೆಲಸ ಮಾಡಬೇಕೆಂದರು. 

ವಿಧಾನಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ವಿಧಾನಪರಿಷತ್‌ ಸದಸ್ಯ ಅರುಣ್‌ಮಾಚಯ್ಯ, ಐಎನ್‌ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಮುಖಂಡರಾದ ವಿಪಿ ಶಶಿಧರ್‌, ಚಂದ್ರಮೌಳಿ ಮಾತನಾಡಿದರು.

ಅಧ್ಯಕ್ಷತೆಯನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಂ. ಲೋಕೇಶ್‌ ವಹಿಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಕೆ.ಎಂ. ಇಬ್ರಾಹಿಂ, ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಕೆ.ಎ. ಯಾಕುಬ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಿ.ಆರ್‌. ಪುಷ್ಪಲತಾ, ಹಿಂದುಳಿದ ವಿಭಾಗದ ಅಧ್ಯಕ್ಷ ಸರಚಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂಗಪ್ಪ, ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಮಡಿಕೇರಿ ಕ್ಷೇತ್ರ ಸಮಿತಿ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ  ಹಾನಗಲ್‌ ಮಿಥುನ್‌ ಅಧಿಕಾರ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next