Advertisement

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

10:38 PM Oct 30, 2020 | mahesh |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ವ್ಯಾಪ್ತಿಯಲ್ಲಿ ಪಕ್ಷಾತೀತವಾಗಿ ಅಭಿವೃಧ್ಧಿಗಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇಳಿಸಿ ನಗರಸಭಾ ಸದಸ್ಯರು ಮತ್ತು ಸಂಸದರಾದ ಬಿ.ಎನ್.ಬಚ್ಚೇಗೌಡ,ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಅವರ ಸಹಕಾರದಿಂದ ಆನಂದರೆಡ್ಡಿ ಅವರನ್ನು ನಗರಸಭೆಯ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ನಗರಸಭೆಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದ ಅವರು ಚಿಕ್ಕಬಳ್ಳಾಪುರ ನಗರಸಭೆಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕರಿಸಿದ ಪ್ರತಿಯೊಬ್ಬ ನಗರಸಭಾ ಸದಸ್ಯರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಸಚಿವರು ಅದೇ ರೀತಿ ಮಾಜಿ ಶಾಸಕ ಬಚ್ಚೇಗೌಡ,ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಅವರ ನೇತೃತ್ವದಲ್ಲಿ ಎರಡು ಪಕ್ಷಗಳ ಸದಸ್ಯರು ಬೇಷರತ್ ಸಹಕಾರ ನೀಡಿದ್ದರಿಂದ ಇವತ್ತು ನಾವು ಜನತಾದಳದ ವೀಣಾ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ನಗರವನ್ನು ಮಾದರಿಯಾಗಿ ಮಾಡುವುದೇ ತಮ್ಮ ಮುಖ್ಯ ಗುರಿಯೆಂದ ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃಧ್ಧಿಗಾಗಿ ಈ ಚುನಾವಣೆ ನಡೆದಿದೆ ಆನಂದ್‍ರೆಡ್ಡಿ ಅವರನ್ನು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರನ್ನು ನಗರಸಭೆಯ ಸದಸ್ಯರು ಪಕ್ಷಾತೀತವಾಗಿ ಆಶೀರ್ವಾದ ಮಾಡಿದ್ದಾರೆ ಹಾಗಾಗಿ ಚಿಕ್ಕಬಳ್ಳಾಪುರ ನಗರವನ್ನು ಸುಂದರ ಮತ್ತು ಸುರಕ್ಷಿತ ನಗರವಾಗಿ ರೂಪಗೊಳಿಸಲು ಪ್ರಥಮ ಪ್ರಾಶಾಸ್ತ್ಯ ಮತ್ತು ಸಿದ್ದಾಂತವಾಗಿದೆ ಎಂದರು.

ನೂತನ ನಗರಸಭೆಯ ಅಧ್ಯಕ್ಷ ಆನಂದರೆಡ್ಡಿ ಅನುಭವಿಗಳಾಗಿದ್ದಾರೆ ಇದು ಅವರು ಮೂರನೇ ಬಾರಿಗೆ ನಗರಸಭಾ ಸದಸ್ಯರಾಗಿ ಅಂದರೇ ಅವರ ಪತ್ನಿ ಮತ್ತು ತಾಯಿ ಅವರು ನಗರಸಭಾ ಸದಸ್ಯರಾಗಿದ್ದರು ಇದೀಗ ಅವರು ನಗರಸಭಾ ಸದಸ್ಯರಾಗಿದ್ದಾರೆ ಅವರಿಗೆ ಆಡಳಿತದ ಅನುಭವ ಇದೇ ಬದ್ದತೆ ಮತ್ತು ಜವಾಬ್ದಾರಿಯಿದೆ ಎಲ್ಲರಿಗಿಂತ ಮುಖ್ಯವಾಗಿ ದಕ್ಷತೆಯಿದೆ ಎಂದರು.

ದಕ್ಷ ಆಡಳಿತಗಾರರನ್ನು ಆಯ್ಕೆ ಮಾಡಲು ಹಿರಿಯರೊಂದಿಗೆ ಸಮಾಲೋಚನೆ ಮಾಡಿ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಹಾಗಾಗಿ ಹೊಸ ತಂಡ ಹುರುಪಿನಿಂದ ಮತ್ತು ಕಳಕಳಿಯಿಂದ ಕೆಲಸ ಮಾಡುತ್ತದೆ ಜನಪರವಾಗಿ ಅಭಿವೃಧ್ಧಿಗೆ ಮಾನ್ಯತೆಯನ್ನು ಹೊಸ ತಂಡ ನೀಡುತ್ತದೆ ಎಂದು ವಿಶ್ವಾಸವನ್ನು ಹೊಂದಿದ್ದೇನೆ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬೆನ್ನಲುಬು ಆಗಿ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದ ಸಚಿವರು ಯಾವುದೇ ರಾಗ,ದ್ವೇಷ ಇಟ್ಟುಕೊಳ್ಳುವುದಿಲ್ಲ ನಗರಸಭೆಯ ಎಲ್ಲಾ 31 ಸದಸ್ಯರು ನಮ್ಮವರು ಎಂದು ಮನೋಧೋರಣೆಯಿಂದ ಕೆಲಸ ಮಾಡುತ್ತೇನೆ ಜಿಲ್ಲಾ ಕೇಂದ್ರವನ್ನು ಮಾದರಿಯಾಗಿ ಪರಿವರ್ತನೆ ಕಲ್ಪನೆ-ಕನಸು ನನಸು ಮಾಡಲು ಎಲ್ಲಾ ಸದಸ್ಯರ ಪ್ರೀತಿ ಮತ್ತು ವಿಶ್ವಾಸವನ್ನುಗಳಿಸುವಂತಹ ಕೆಲಸವನ್ನು ಮಾಡುತ್ತೇನೆ ಎಂದರು.

Advertisement

ನಗರಸಭೆಯ ನೂತನ ಅಧ್ಯಕ್ಷ ಆನಂದರೆಡ್ಡಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್,ಸಂಸದ ಬಿ.ಎನ್.ಬಚ್ಚೇಗೌಡ ಹಾಗೂ ವಿಧಾನ ಪರಿಷತ್ತಿನ ಸದಸ್ಯರ ಆಶೀರ್ವಾದದಿಂದ ಮತ್ತು ಮಾಜಿ ಶಾಸಕ ಬಚ್ಚೇಗೌಡ ಮತ್ತು ನಗರಸಭೆಯ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿದ್ದೇನೆ ಇನ್ನೂ ಮುಂದೆ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಅವರ ಹಾದಿಯಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ನಗರವನ್ನು ಸ್ಮಾರ್ಟ್‍ಸಿಟಿ ಮಾಡಲು ಸಚಿವರು ಕನಸು ಕಂಡಿದ್ದಾರೆ ಕೊರೊನಾ ಸಂಕಷ್ಟದಲ್ಲಿ ಅನುದಾನ ಕಡಿತಗೊಂಡಿದೆ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ನಗರ ಮತ್ತು ನಗರಸಭೆಯನ್ನು ಸುಂದರ ನಗರವಾಗಿ ಪರಿವರ್ತನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ,ವಿಧಾನ ಪರಿಷತ್ತು ಸದಸ್ಯ ವೈ.ಎ.ನಾರಾಯಣಸ್ವಾಮಿ,ನಗರಸಭೆಯ ಉಪಾಧ್ಯಕ್ಷೆ ವೀಣಾ ರಾಮು ಮತ್ತಿತರರು ಉಪಸ್ಥಿತರಿದ್ದರು…

Advertisement

Udayavani is now on Telegram. Click here to join our channel and stay updated with the latest news.

Next