Advertisement
ಇದರೊಂದಿಗೆ ಬಿಜೆಪಿ ಈಶಾನ್ಯದ 2 ರಾಜ್ಯಗಳಲ್ಲಿ ನೇರ ವಾಗಿ, 5 ರಾಜ್ಯಗಳಲ್ಲಿ ಪರೋಕ್ಷವಾಗಿ ಅಡಳಿತದ ಚುಕ್ಕಾಣಿ ಹಿಡಿದುಕೊಂಡಂತಾಗಿದೆ.
ತ್ರಿಪುರಾ ಚುನಾವಣೆಯಲ್ಲಿ ಬಿಜೆಪಿ 60 ಕ್ಷೇತ್ರಗಳ ಪೈಕಿ ಏಕಾಂಗಿಯಾಗಿಯೇ 32 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಇಂಡೀಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ಟಿ) 1 ಕ್ಷೇತ್ರದಲ್ಲಿ ಗೆದ್ದಿದೆ. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ಆಸೆಯನ್ನು ಹೊತ್ತಿದ್ದ ತಿಪ್ರಾ ಮೋಥಾ ಪಾರ್ಟಿ 13 ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟ 14 ಕ್ಷೇತ್ರಗಳಲ್ಲಿ ಜಯಸಾಧಿಸಿದೆ. 55 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 32ರಲ್ಲಿ ಜಯ ಗಳಿಸಿದೆ. 2018ರಲ್ಲಿ ಬಿಜೆಪಿ 35 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಪಿ ದಾಖಲೆಯ 2ನೇ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಿದೆ. ಆದರೆ ಹಾಲಿ ಮುಖ್ಯಮಂತ್ರಿ ಡಾ| ಮಾನಿಕ್ ಸಹಾ ಅವರನ್ನು ಮುಂದುವರಿಸುವ ಬಗ್ಗೆ ಬಿಜೆಪಿ ವರಿಷ್ಠರು ಇನ್ನೂ ಮುಕ್ತ ಅಭಿಪ್ರಾಯ ಹೊಂದಿಲ್ಲ. ಕೇಂದ್ರ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಖಾತೆ ಸಹಾಯಕ ಸಚಿವ ಪ್ರತಿಮಾ ಭೌಮಿಕ್ ಅವರನ್ನು ಈ ಸ್ಥಾನಕ್ಕೆ ನೇಮಿಸುವ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆದಿದೆ.
Related Articles
-ನರೇಂದ್ರ ಮೋದಿ, ಪ್ರಧಾನಮಂತ್ರಿ
Advertisement