Advertisement

ಬಿಜೆಪಿಗೆ 2014 ಕ್ಕಿಂತ ಕಡಿಮೆ ಸ್ಥಾನಗಳು: ಕೇಂದ್ರ ಸಚಿವ ಅಠವಳೆ

09:45 AM May 15, 2019 | Team Udayavani |

ಮಂಬಯಿ : ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ 2014 ರಲ್ಲಿ ಗೆದ್ದ ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರ ಸಚಿವ, ಆರ್‌ಪಿಐ ನಾಯಕ ರಾಮ್‌ದಾಸ್‌ ಅಠವಳೆ ಹೇಳಿದ್ದಾರೆ.

Advertisement

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಆರ್‌ಎಲ್‌ಡಿ ಮೈತ್ರಿಯಿಂದಾಗಿ ಬಿಜೆಪಿ ಈ ಬಾರಿ 10 ರಿಂದ 15 ಸ್ಥಾನಗಳನ್ನು ಕಡಿಮೆ ಗೆಲ್ಲಲಿದೆ ಎಂದರು.

2014 ರಲ್ಲಿ ಬಿಜೆಪಿ , ಅಪ್ನಾದಳ ಮೈತ್ರಿ ಕೂಟ 80 ಸ್ಥಾನಗಳ ಪೈಕಿ 73 ಸ್ಥಾನಗಳನ್ನು ಗೆದ್ದಿದ್ದವು. ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿದ್ದವು.

ಮಹಾರಾಷ್ಟ್ರದಲ್ಲೂ ಕಳೆದ ಬಾರಿಗಿಂತ ಬಿಜೆಪಿ , ಶಿವಸೇನೆ ಮೈತ್ರಿಕೂಟ 5 ರಿಂದ 6 ಸ್ಥಾನಗಳನ್ನು ಕಡಿಮೆ ಗೆಲ್ಲಲಿದೆ ಎಂದು ಅಠವಳೆ ಹೇಳಿದರು.

2014 ರಲ್ಲಿ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ರಾಜು ಶೆಟ್ಟಿ ಅವರು ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿದ್ದರು. ಈ ಬಾರಿ ಅವರು ಕಾಂಗ್ರೆಸ್‌ -ಎನ್‌ಸಿಪಿ ಮೈತ್ರಿಕೂಟಕ್ಕೆ ಬೆಂಬಲಿಸಿದ್ದಾರೆ. 2014 ರಲ್ಲಿ ಬಿಜೆಪಿ -ಶಿವಸೇನೆ ಮೈತ್ರಿಕೂಟ 48 ರ ಪೈಕಿ 42 ಸ್ಥಾನಗಳನ್ನು ಗೆದ್ದಿದ್ದವು.

Advertisement

ಎರಡು ರಾಜ್ಯಗಳಲ್ಲಿ ಕಳೆದುಕೊಳ್ಳಲಿರುವ ಸ್ಥಾನಗಳು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿಗೆ ಬರಲಿದ್ದು ನರೇಂದ್ರ ಮೋದಿ ಅವರು 2 ನೇ ಬಾರಿಗೆ ಪ್ರಧಾನಿಯಾಗುವುದು ಖಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next