Advertisement

ಬಿಜೆಪಿ ಸೇರಲ್ಲ: ಕೃಷ್ಣಾರೆಡ್ಡಿ

11:42 PM Jul 12, 2019 | Lakshmi GovindaRaj |

ದೇವನಹಳ್ಳಿ: ಮೊದಲಿನಿಂದಲೂ ಜೆಡಿಎಸ್‌ಗೆ ನಿಷ್ಠರಾಗಿದ್ದೇವೆ. ಈಗಲೂ ಅದೇ ನಿಷ್ಠೆಯಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಬಿಜೆಪಿಗೆ ಬೆಂಬಲವನ್ನೂ ಸೂಚಿಸುವುದಿಲ್ಲ. ಬಿಜೆಪಿಯಿಂದ ಬೆಂಬಲವನ್ನೂ ಕೇಳುವುದಿಲ್ಲ ಎಂದು ಉಪಸಭಾಪತಿ ಹಾಗೂ ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

Advertisement

ತಾಲೂಕಿನ ನಂದಿ ಬೆಟ್ಟ ರಸ್ತೆಯ ಕೋಡಗುರ್ಕಿ ಹತ್ತಿರದ ರೆಸಾರ್ಟ್‌ನಿಂದ ವಿಧಾನಮಂಡಲ ಅಧಿವೇಶನಕ್ಕೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಚಿವ ಸಾ.ರಾ.ಮಹೇಶ್‌ ಅವರು ಬಿಜೆಪಿ ನಾಯಕರ ಜೊತೆಗೆ ಮಾತನಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯವಿಲ್ಲ. ಕುಮಾರ ಕೃಪ ವಸತಿ ಗೃಹ ಪ್ರವಾಸೋದ್ಯಮ ಇಲಾಖೆಗೆ ಬರುವುದರಿಂದ ಅಲ್ಲಿ ಕಾಫೀ ಕುಡಿಯಲು ಹೋಗಿರುತ್ತಾರೆ. ಈಶ್ವರಪ್ಪ ಮತ್ತು ಮುರುಳೀಧರ್‌ರಾವ್‌ ಕೂಡ ಹೋಟಲ್‌ಗೆ ಬಂದಿರಬಹುದು. ಆಕಸ್ಮಿಕವಾಗಿ ಸಿಕ್ಕಿದ್ದರಿಂದ ಮಾತನಾಡಿರಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next