ಹೊಸದಿಲ್ಲಿ : ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿಯೇ ಜಯ ಗಳಿಸಿ ಸರಕಾರ ಮಾಡುವುದು ಖಚಿತ ಎಂಬ ವಿಶ್ವಾಸವನ್ನು ಕೇಂದ್ರ ಗೃಹ ಸಹಾಯಕ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶವು ಈಶಾನ್ಯ ಭಾರತದ ರಾಜಕೀಯ ನಕ್ಷೆಯನ್ನು ಬದಲಸಲಿದೆ ಮಾತ್ರವಲ್ಲ ಅದು ರಾಷ್ಟ ರಾಜಕೀಯ ರಂಗದ ಸ್ವರೂಪವನ್ನು ಕೂಡ ಬದಲಾಯಿಸಲಿದೆ ಎಂದು ರಿಜಿಜು ಹೇಳಿದರು.
2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೂಡ ರಿಜಿಜು ಈ ಮಾತುಗಳನ್ನು ಹೇಳಿದರು.
ಈಗ ಗೊತ್ತಾಗಿರುವ ಟ್ರೆಂಡ್ ಪ್ರಕಾರ ನಾಗಾಲ್ಯಾಂಡ್ ಮತ್ತು ತ್ರಿಪುರದಲ್ಲಿ ಅತ್ಯಂತ ನಿಕಟ ಸ್ಪರ್ಧೆ ಏರ್ಪಡುತ್ತಿದೆ. ತ್ರಿಪುರದಲ್ಲಿ ಬಿಜೆಪಿ ಮತ್ತು ಸಿಪಿಎಂ ನಡುವೆ ಕತ್ತುಕತ್ತಿನ ಹೋರಾಟ ಸಾಗಿದೆ.
ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಎನ್‌ಪಿಎಫ್ ನಡುವೆ ನಿಕಟ ಸ್ಪರ್ಧೆ ಸಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಈ ಮೂರು ರಾಜ್ಯಗಳಲ್ಲಿ ಸ್ಪಷ್ಟ ಟ್ರೆಂಡ್ ಗೊತ್ತಾಗಲಿದೆ.