Advertisement

ಕಂಗನಾ ಪಕ್ಷಕ್ಕೆ ಬರಬಹುದು, ಆದರೆ….: ರಣಾವುತ್ ಬಿಜೆಪಿ ಸೇರ್ಪಡೆ ಜೆಪಿ ನಡ್ಡಾ ಹೇಳಿದ್ದೇನು?

11:44 AM Oct 30, 2022 | Team Udayavani |

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ತನ್ನ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ ಕಂಗನಾ ರಣಾವುತ್ ಅವರು ರಾಜಕೀಯಕ್ಕೆ ಸೇರುವ ಬಗ್ಗೆ ಶನಿವಾರ ಹೇಳಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧೆ ಮಾಡುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Advertisement

ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಂಗನಾ ಅವರನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಿಯೇ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.

ಜನರು ಬಯಸಿದರೆ ಮತ್ತು ಬಿಜೆಪಿ ಟಿಕೆಟ್ ನೀಡಿದರೆ ಹಿಮಾಚಲ ಪ್ರದೇಶದ ಮಂಡಿಯಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಕಂಗನಾ ಶನಿವಾರ ಹೇಳಿದ್ದಾರೆ.

ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುವವರಿಗೆ ಪಕ್ಷದಲ್ಲಿ ಸಾಕಷ್ಟು ಅವಕಾಶವಿದೆ. ಕಂಗನಾ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬುದು ನನ್ನ ನಿರ್ಧಾರವಲ್ಲ, ಅದಕ್ಕಾಗಿ ಪಕ್ಷದ ತಳ ಮಟ್ಟ ಸಂಸದೀಯ ಸಮಿತಿ, ಚುನಾವಣಾ ಆಯೋಗದ ಪ್ರಕ್ರಿಯೆ ಇದೆ” ಎಂದರು.

ಇದನ್ನೂ ಓದಿ:ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ನಲ್ಲಿ ICA ಪ್ರತಿನಿಧಿಯಾಗಿ ವೆಂಗ್‌ಸರ್ಕರ್, ಶುಭಾಂಗಿ ಕುಲಕರ್ಣಿ

Advertisement

“ಷರತ್ತುಗಳ ಆಧಾರದ ಮೇಲೆ ನಾವು ಯಾರನ್ನೂ ಪಕ್ಷಕ್ಕೆ ಸೇರಿಸುವುದಿಲ್ಲ. ನಾವು ಎಲ್ಲರಿಗೂ ಇದನ್ನೇ ಹೇಳುತ್ತೇವೆ, ನೀವು ಬೇಷರತ್ತಾಗಿ ಪಕ್ಷಕ್ಕೆ ಬರಬೇಕು, ನಂತರ ಮಾತ್ರ ಪಕ್ಷವು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ನಡ್ಡಾ ಪಕ್ಷದ ನಿಲುವನ್ನು ವಿವರಿಸಿದರು.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಜೆಪಿ ನಡ್ಡಾ, ” ಹಿಮಾಚಲ ಪ್ರದೇಶ ಮತ್ತೆ ಬಿಜೆಪಿಗೆ ಮತ ಹಾಕಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಗೆಲುವಿನ ಟ್ರೆಂಡ್ ಅನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next