Advertisement

ಅಪನಗದೀಕರಣ ಬಿಜೆಪಿ ಚುನಾವಣಾ ಅಸ್ತ್ರ: ಶಾ

03:45 AM Jan 07, 2017 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯ ಚುನಾವಣೆಯಲ್ಲಿ ಅಪನಗದೀ ಕರಣವನ್ನು ಮತದಾರರ ಮುಂದೆ ದೊಡ್ಡ ಮಟ್ಟದಲ್ಲಿ ಬಿಂಬಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರೆ ನೀಡಿದ್ದಾರೆ. ಬಡವರ ಪರ ಎಂದು ಹೇಳಿಕೊಂಡು ಮತ ಕೇಳುವ ಕಾಂಗ್ರೆಸ್‌ನ ಉದ್ದೇಶವನ್ನು ಅಪನಗದೀಕರಣ ಕಸಿದು ಕೊಂಡಿದೆ. ಬಡವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿ ಸುತ್ತಿದ್ದಾರೆ ಎಂದು ಹೇಳಿದ್ದಾರೆ. 

Advertisement

ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಯನ್ನು ಉದ್ದೇಶಿಸಿ ಭಾಷಣ ಮಾಡಿದ ಅಮಿತ್‌ ಶಾ, ಅಪನಗದೀಕರಣ ಕ್ರಮವನ್ನು ಐತಿಹಾಸಿಕ ಎಂದು ಬಣ್ಣಿಸಿದರು. ಅಪನಗದೀಕರಣ ಮತ್ತು ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಬಿಜೆಪಿಗೆ ಎರಡು ಪ್ರಮುಖ ಚುನಾವಣಾ ವಿಷಯ ಗಳಾಗಿವೆ. ನೋಟು ರದ್ದತಿ ಹೆಚ್ಚಿನ ಆದಾಯಕ್ಕೆ ಕಾರಣವಾಗಲಿದೆ. ಆ ಹಣವನ್ನು ಬಡವರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುವುದು ಎಂದು ಹೇಳಿದರು. ಇದೇ ವೇಳೆ, ಅಪನಗ ದೀಕರಣವನ್ನು ಟೀಕಿಸುವ ವಿಪಕ್ಷ ಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಈ ಹಿಂದೆ ಕಪ್ಪು ಹಣ ನಿರ್ಮೂಲನೆಗೆ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ವಿಪಕ್ಷಗಳು ಪ್ರಶ್ನೆ ಕೇಳುತ್ತಿದ್ದವು. ಆದರೆ ಕ್ರಮ ಕೈಗೊಂಡರೆ ಅದನ್ನೂ ಪ್ರಶ್ನಿಸುತ್ತಿವೆ ಎಂದು ಲೇವಡಿ ಮಾಡಿದರು. 

ಇದೇ ವೇಳೆ ಅಪನಗದೀಕರಣ ನೀತಿ ಜಾರಿಗೆ ತಂದ ಮತ್ತು ಪಾಕಿಸ್ಥಾನದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಿಸಿದ ಪ್ರಧಾನಿ ಮೋದಿ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next