Advertisement
ಪಟ್ಟಣ ಸೇರಿದಂತೆ ತಾಲೂಕಿನ ಆಲನಹಳ್ಳಿ, ಕ್ಯಾತನ ಹಳ್ಳಿ, ಅಣ್ಣೂರು, ಅಂತರಸಂತೆ, ಹೆಬ್ಬಲಗುಪ್ಪೆ, ಸರಗೂರು, ಹಂಚೀಪುರ ಮುಂತಾದ ಗ್ರಾಮಗಳಲ್ಲಿ ಗುರುವಾರ ರೋಡ್ ಶೋ ಮೂಲಕ ಅಬ್ಬರದ ಚುನಾವಣಾಪ್ರಚಾರ ನಡೆಸಿ ಅವರು ಮಾತನಾಡಿದರು.
ಅಭ್ಯರ್ಥಿಯಾಗಿ ಬರುವ ಅವಕಾಶ ಬಂದಿರಲಿಲ್ಲ. ತುಂಬಾ ಜನರ ಪರಿಚಯ ಇದೆ. ಜತೆಗೆ ತಾವು 5 ಬಾರಿ ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದು, ತಮಗೆ ಅನುಕೂಲ ಆಗಿದೆ. ಎಲ್ಲಾವರ್ಗದ ಜನತೆಯೊಂದಿಗೆ ಶಕ್ತಿ ಮೀರಿ ಒಡನಾಟ ಹೊಂದಿದ್ದೇನೆ. ಹೀಗಾಗಿ ಎದುರಾಳಿ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ಮತಗಳು ತಾಲೂಕಿನಲ್ಲಿ ಲಭ್ಯವಾಗುವ ಆಶಾಭಾವನೆ ತಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ: ಮುಂದಿನ ದಿನಗಳಲ್ಲಿ ಬಿಜೆಪಿಗೆ ಉತ್ತಮ ಅವಕಾಶ ಇದೆ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ 17 ಮಂತ್ರಿಗಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಸಿದ್ದರಾಮಯ್ಯ ಅವರೇ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ
ಸೋತಿದ್ದಾರೆ. 104 ಸ್ಥಾನ ಪಡೆದ ಬಿಜೆಪಿಗೆ ಅಧಿಕಾರಸಿಕ್ಕಿಲ್ಲ. ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆಬರಬೇಕಾದರೆ ಬಿಜೆಪಿ ಸಂಸದರ ಆಯ್ಕೆ ಹೆಚ್ಚಾಗ ಬೇಕು. ಇದಕ್ಕೆ ಜನರ ಆಶಿರ್ವಾದ ಬೇಕು ಎಂದು ಶ್ರೀನಿವಾಸ ಪ್ರಸಾದ್ ಕೋರಿದರು.
Related Articles
ಕಾಳಜಿ ಇದೆ. ದೇಶದ ಜನತೆ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿಯೇ ಈ ಬಾರಿಯೂ ಎರಡನೇ ಬಾರಿಗೆ ಪ್ರಧಾನಿಯಾಗುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ 283 ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ ಅದು 300 ದಾಟುವ ಸಂಭವ ಇದೆ. ಈ ಬಾರಿಯೂ ಅವರ ನಾಯಕತ್ವದಲ್ಲಿ ಚುನಾವಣಾ ಮಹಾಸಮರ ನಡೆಯುತ್ತಿದೆ. ಇಡೀ ವಿಶ್ವ ಭಾರತ ದೇಶದ ಚುನಾವಣೆ ಬಗ್ಗೆ ಗಮನ ಸೆಳೆದಿದೆ ಎಂದರು.
Advertisement
ಪ್ರಸಾದ್ ಮುತ್ಸದ್ಧಿ: ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಪಕ್ಷದ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್ ರಾಜ್ಯ ಕಂಡಂತಹ ಮುತ್ಸದ್ಧಿ ರಾಜಕಾರಣಿ. ಐದು ಬಾರಿ ಸಂಸದರಾಗಿ, ಶಾಸಕರಾಗಿ, ಕೇಂದ್ರ ಮತ್ತು ರಾಜ್ಯ ಸಚಿವರಾಗಿ ಆಡಳಿತ ನಡೆಸಿದ್ದ ಅವರು ಎಲ್ಲೂ ಕಪ್ಪುಚುಕ್ಕೆ ಹೊಂದಿಲ್ಲ. ಆರನೇ ಬಾರಿಗೆ ಅವರನ್ನು ಸಂಸತ್ ಗೆ ಕಳುಹಿಸಬೇಕಿದೆ ಈ ಬಾರಿ ರಾಜ್ಯದಲ್ಲಿ 22 ರಿಂದ 23 ಸ್ಥಾನಗಳನ್ನುಲಭಿಸುವ ಸಂಭವ ಇದೆ ಎಂದುಅವರು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ಎಂ.ಶಿವಣ್ಣ, ತಾಲೂಕು ಘಟಕದ ಅಧ್ಯಕ್ಷ ಸಿ.ಕೆ. ಗಿರೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಸಿ.ರಮೇಶ್, ಜಿ.ಪಂ.ಸದಸ್ಯ ವೆಂಕಟಸ್ವಾಮಿ, ಮಾಜಿ ಸದಸ್ಯರಾದ ಭಾಗ್ಯಲಕ್ಷ್ಮೀ, ಎಚ್.ಸಿ.ಲಕ್ಷ್ಮಣ್, ಮಾಜಿ ಪುರಸಭೆ ಸದಸ್ಯ ವಿವೇಕ್, ಮುಖಂಡರಾದ ನಾಗರಾಜು ಮಲ್ಲಾಡಿ, ಗೋಪಾಲ್ ಪೂಜರ್, ಯೋಗೀಶ್ ಕುಮಾರ್,ಶಿವರಾಜಪ್ಪ, ಡ್ರೀಪ್ ಸಿದ್ದನಾಯಕ, ರುದ್ರಪ್ಪ, ಚಾ. ನಂಜುಂಡ ಮೂರ್ತಿ, ಎಚ್.ಕೆ.ಸುರೇಶ್, ವೈ.ಟಿ. ಮಹೇಶ್, ನಂದೀಶ್, ತಾರಕಮನ್ಸೂರ್, ಸೋಮಚಾರ್, ಮೊತ್ತ ಬಸವರಾಜು, ಸಜೀವನ್, ರವಿ, ಲೋಕೇಶ್, ಮಾದೇಶ್, ರಾಕೇಶ್ ಶರ್ಮ, ಗಣೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.