Advertisement

ಹತ್ಯೆ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಲು ಬಿಜೆಪಿ ಆಗ್ರಹ

08:30 AM Sep 05, 2017 | Harsha Rao |

ಬಂಟ್ವಾಳ : ಪಿ.ಎಫ್‌.ಐ, ಎಸ್‌.ಡಿ.ಪಿ.ಐ ಹಾಗೂ ಕೆ.ಎಫ್‌.ಡಿ.ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ರಾಜ್ಯದಲ್ಲಿ ಹಿಂದೂಗಳ ಮೇಲಾಗಿರುವ ಎಲ್ಲ ಹತ್ಯೆ, ಹಲ್ಲೆ ಪ್ರಕರಣಗಳನ್ನು ಸಿ.ಬಿ.ಐ.ಗೆ ಹಸ್ತಾಂತರಿಸಬೇಕು. ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ ರೈ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಆಶ್ರಯದಲ್ಲಿ ಸೆ.4ರಂದು ಬಂಟ್ವಾಳ ಪುರಸಭೆ ಎದುರಲ್ಲಿ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದು, ನಿಷೇಧಿತ ಸಿಮಿ ಸಂಘಟನೆಯ ಪದಾಧಿ ಕಾರಿಗಳೇ ಈ ಸಂಘಟನೆಯಲ್ಲೂ ಪದಾಧಿಕಾರಿಗಳಾಗಿರುವುದು ಕಾನೂನಿಗೆ ಮಾಡಿರುವ ಅಣಕದಂತಿದೆ. ಈ ಸಂಘಟ ನೆಗಳು ಕೇರಳ, ತಮಿಳುನಾಡು, ಗೋವಾ ರಾಜ್ಯಗಳಲ್ಲಿ ಸಹ ತಮ್ಮ ಜಾಲವನ್ನು ಹರಡಿಕೊಂಡಿವೆ. ವಿಶೇಷವಾಗಿ ಕರ್ನಾಟಕದಲ್ಲಿ ಹಿಂದೂಗಳ ಕೊಲೆ, ಹಲ್ಲೆ, ಕೋಮುದಳ್ಳುರಿಗೆ ಕುಮ್ಮಕ್ಕು ನೀಡುವುದು, ಶಾಂತಿ ಸೌಹಾರ್ದಕ್ಕೆ ಭಂಗ ತರುವಂತಹ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿವೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಬಂಟ್ವಾಳದ ಶರತ್‌ ಮಡಿವಾಳ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಖಲೀಲ್‌ವುಲ್ಲಾ ಚಾಮರಾಜನಗರ ಜಿಲ್ಲೆಯ ಪಿ.ಎಫ್‌.ಐ. ಅಧ್ಯಕ್ಷನಾಗಿದ್ದು, ಇನ್ನೊಬ್ಬ ಬಂಟ್ವಾಳದ ಅಬ್ದುಲ್‌ ಶಾಫಿ ಕೂಡ ಪಿ.ಎಫ್‌.ಐ. ಸಂಘಟನೆಯವನು ಎಂದು ಪೊಲೀಸರು ಖಚಿತಪಡಿಸಿದ್ದಾರೆ ಎಂದು ಅವರು ಹೇಳಿದರು.

ಈ ಹಿಂದೆ ಮೈಸೂರಿನಲ್ಲಿ ನಡೆದ ಹಿಂದೂ ಯುವಕರ ಹತ್ಯೆಯ ಸಮಯದಲ್ಲೂ ಈ ಸಂಘಟನೆಗಳನ್ನು ನಿಷೇಧಗೊಳಿಸುವ ಚಿಂತನೆ ನಡೆ ದಿತ್ತಾದರೂ ಮಾಡಿರಲಿಲ್ಲ. ಕೇರಳ ಸರಕಾರ ಕೇರಳ ಹೆ„ಕೋರ್ಟ್‌ಗೆ 2012ರಲ್ಲಿ ಸಲ್ಲಿಸಿದ ಅಫಿಡವಿತ್‌ನಲ್ಲಿ ಈ ಸಂಘಟನೆ ರಾಷ್ಟ್ರದ ಹಿತಕ್ಕೆ ಹಾನಿಕಾರಕ ಎಂದು ತಿಳಿಸಿತ್ತು ಎಂದರು.

ಸೆ. 7ರಂದು “ಮಂಗಳೂರು ಚಲೋ’
ಸೆ. 7ರಂದು ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಕರ್ನಾಟಕ ರಾಜ್ಯದ 5 ವಿಭಾಗಗಳಿಂದ, ಮಂಗಳೂರಿಗೆ ಬೆ„ಕ್‌ ರ್ಯಾಲಿಯ ಮೂಲಕ “ಮಂಗಳೂರು ಚಲೋ’ ಹಮ್ಮಿ ಕೊಳ್ಳಲಾಗಿದೆ ಎಂದು ಮುಖಂಡರು ಹೇಳಿದರು.
ಕ್ಷೇತ್ರ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಮದಾಸ್‌ ಬಂಟ್ವಾಳ, ಪುರಸಭಾ ಮಾಜಿ  ಅಧ್ಯಕ್ಷ ದಿನೇಶ್‌ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಬಿಜೆಪಿ ನೇತಾರ ರಾಜೇಶ್‌ ನಾೖಕ್‌ ಉಳಿಪ್ಪಾಡಿ, ಜಿಲ್ಲಾ ವಕ್ತಾರ ವಿಕಾಸ್‌ ಪುತ್ತೂರು, ಕಾನೂನು ಪ್ರಕೋಷ್ಠ ಅಧ್ಯಕ್ಷ ರಾಜಾರಾಮ್‌ ನಾಯಕ್‌, ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು, ಭಾಸ್ಕರ್‌ ಟೈಲರ್‌, ಸಂಧ್ಯಾ ನಾಯಕ್‌, ಸುಗುಣಾ ಕಿಣಿ, ವಿದ್ಯಾವತಿ, ರೊನಾಲ್ಡ್‌ ಡಿ’ಸೋಜಾ, ನಗರ ಶಕ್ತಿಕೇಂದ್ರದ ಅಧ್ಯಕ್ಷ ಗೋಪಾಲ ಸುವರ್ಣ, ಪ್ರ.ಕಾರ್ಯದರ್ಶಿ ಗುರುದತ್‌ ನಾಯಕ್‌, ಬಿ.ಮೂಡ ಗ್ರಾಮ ಸಮಿತಿ ಅಧ್ಯಕ್ಷ  ಪ್ರಮೋದ್‌ ಕುಮಾರ್‌ ಅಜ್ಜಿಬೆಟ್ಟು , ಪ್ರ. ಕಾರ್ಯದರ್ಶಿ ಗಣೇಶ್‌ ದಾಸ್‌, ಬಂಟ್ವಾಳ ಕಸ್ಬಾ ಗ್ರಾಮ ಸಮಿತಿಯ ಅಧ್ಯಕ್ಷ  ಕೃಷ್ಣಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಪ್ರೇಮನಾಥ, ಮಚ್ಛೇಂದ್ರ ಸಾಲ್ಯಾನ್‌, ಜನಾರ್ದನ ಕುಲಾಲ್‌, ರವಿರಾಜ್‌ ಬಿ.ಸಿ.ರೋಡ್‌, ಚರಣ್‌ ಜುಮಾದಿಗುಡ್ಡೆ ಮತ್ತು ಇತರ ಪ್ರಮುಖರು ಪಾಲ್ಗೊಂಡಿದ್ದರು.

Advertisement

“ಸಕ್ರಿಯ ಕಾರ್ಯಕರ್ತರಾಗಿದ್ದರು’    
ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಯ ಕಾರ್ಯಕರ್ತರ ಸರಣಿ ಹತ್ಯೆಯಲ್ಲಿ ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್‌, ಮೂಡಬಿದಿರೆಯ ಪ್ರಶಾಂತ್‌ ಪೂಜಾರಿ ಹೀಗೆ ನಡೆದಿರುವ ಕೊಲೆಗಳಲ್ಲಿ ಬಂಧಿತರಾಗಿರುವ ವ್ಯಕ್ತಿಗಳು ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next