Advertisement
ಫಿರ್ ಆಯೇಂಗೇ ನರೇಂದ್ರ ಮೋದಿ: ಬಿಜೆಪಿ ಘೋಷ ವಾಕ್ಯ
ಅಯೋಧ್ಯೆಯಲ್ಲಿ ಮುಂ ದಿನ ತಿಂಗಳ 22ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಶುರು ವಾಗುವುದಕ್ಕಿಂತ ಮೊದಲು ಬಿಡುಗಡೆಯಾದದ್ದು ವಿಶೇಷ. ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿ ರುವ ಬಿಜೆಪಿ “ಉತ್ತಮ ಸಾಧನೆ ಯ ಆಧಾರದ ಮೇಲೆ ಜಯದ ನಗಾರಿಗಳು ಬಾರಿಸ ಲ್ಪಡಲಿವೆ. ಶ್ರೀರಾಮನು ಉತ್ತಮ ಚಿಂತನಾ ಶಕ್ತಿಯನ್ನು ಕೊಡುವ ವಿಶ್ವಾಸವಿದೆ ಮತ್ತು ಮೋದಿಯವರು ಮತ್ತೆ ಆಯ್ಕೆಯಾಗಿ ಬರುವ ವಿಶ್ವಾಸವಿದೆ. ಮೋದಿಯವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ದೇಶದ ಗೌರವದ ಪ್ರತೀಕ. ಅವರು ಈ ದೇಶದ 140 ಕೋಟಿ ಮಂದಿಯ ಆಶೋತ್ತರಗಳನ್ನು ಪ್ರತಿನಿಧಿಸುವವರು. ಮೋದಿ ಮತ್ತೂಮ್ಮೆ ಬರಲಿದ್ದಾರೆ. ‘ ಎಂದು ಬರೆದುಕೊಳ್ಳಲಾಗಿದೆ.
Related Articles
Advertisement
ಹಾಡಿನಲ್ಲಿ ಯಾವ ಅಂಶಗಳಿವೆ?
ಟ್ವೀಟ್ ಮಾಡಿರುವ ವೀಡಿಯೋದಲ್ಲಿ ಇರುವ ಹಾಡಿನಲ್ಲಿ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ಪ್ರಮುಖ ನಿರ್ಣಯಗಳಾಗಿರುವ 370ನೇ ವಿಧಿ ರದ್ದು, ರಾಮ ಮಂದಿರ ನಿರ್ಮಾಣ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿ ಉಗ್ರರ ತರಬೇತಿ ಶಿಬಿರಗಳ ನಾಶದ ಅಂಶವನ್ನು ವಿಶೇಷವಾಗಿ ಪ್ರಸ್ತಾವಮಾಡಲಾಗಿದೆ.
ವಿಪಕ್ಷಗಳ “ಇಂಡಿಯಾ’ ಒಕ್ಕೂಟವನ್ನು ಟೀಕಿಸಿ, ಪ್ರಧಾನಿ ಮೋದಿಯವರೇ ಪಕ್ಷದ ಅತ್ಯುನ್ನತ ನಾಯಕ ಮತ್ತು ಅವರೇ ಪಕ್ಷದ ಸಂಸ್ಕೃತಿಯ ಪ್ರತೀಕ ಎಂದು ಬಿಂಬಿಸಲಾಗಿದೆ.
ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ವಿರುದ್ಧದ ಹೋರಾಟವನ್ನು ಟಿಎಂಸಿ ಕೈಗೆತ್ತಿಕೊಳ್ಳಲಿದ್ದು, ಸಮ ಬಲದ ಹೋರಾಟ ನಡೆಸಲಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಆ ಪಕ್ಷದ ಜತೆಗೆ ಒಪ್ಪಂದ ಮಾಡಿಕೊಂಡಿವೆ. ದೇಶದಲ್ಲಿ ಈಗ ಕೇಂದ್ರ ತನಿಖಾ ಸಂಸ್ಥೆಗಳು ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ.ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಸಿಎಂ ಇವಿಎಂ ಸರಿಯಾಗದಿದ್ದರೆ 400 ಕಡೆ ಬಿಜೆಪಿಗೆ ಜಯ: ಸ್ಯಾಮ್ ಪಿತ್ರೋಡಾ
“ಈ ಬಾರಿಯೂ ಇವಿಎಂಗಳನ್ನು ಸರಿ ಪಡಿಸದೇ ಹೋದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳಲ್ಲೂ ಜಯಗಳಿಸಲಿದೆ’ ಹೀಗೆಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಇವಿಎಂಗಳನ್ನು ಬಿಜೆಪಿ ಪರವಾಗಿ ಬಳಸಲಾಗುತ್ತಿದೆ ಎಂಬ ಹಿಂದಿನ ಆರೋಪವನ್ನೇ ಪಿತ್ರೋಡಾ ಪುನರುಚ್ಚರಿಸಿದ್ದಾರೆ. ಇವಿಎಂ ಬಗ್ಗೆ ಕಳವಳ ವ್ಯಕ್ತ ಪಡಿಸಿ ಚುನಾವಣೆ ಆಯೋಗಕ್ಕೂ ಪತ್ರ ಬರೆದಿದ್ದೆ. ಆದರೆ ಆಯೋಗ ಪ್ರತಿಕ್ರಿಯೆ ನೀಡದಕ್ಕೆ ಈಗ ಮಾತನಾಡಲೇ ಬೇಕಾದ ಸನ್ನಿವೇಶ ಎದುರಾಗಿದೆ ಎಂದಿದ್ದಾರೆ. ಅಲ್ಲದೆ ಲೋಕಸಭೆಯ ಎಲ್ಲ ಸ್ಥಾನಗಳಲ್ಲೂ ಗೆಲ್ಲುತ್ತೇವೆಂಬ ಭರವಸೆ ಬಿಜೆಪಿ ಇದ್ದರೆ ಇರಲಿ, ಅದನ್ನು ದೇಶ ನಿರ್ಧರಿಸುತ್ತದೆ ಎಂದರು. ಆರ್‌ಎಸ್‌ಎಸ್ ಶಕ್ತಿ ಕೇಂದ್ರ ನಾಗಪುರದಲ್ಲಿ ಹಮ್ ತಯ್ಯಾರ್ ಹೈ ಎಂದ ಕೈ ನಾಯಕರು
ಮುಂಬಯಿ: ಬಿಜೆಪಿ ಲೋಕಸಭೆ ಚುನಾವಣೆಗಾಗಿ ಫಿರ್ ಮೋದಿ ಆಯೇಂಗೇ ಎಂಬ ಧ್ಯೇಯ ವಾಕ್ಯದ ಹಾಡು ಬಿಡುಗಡೆ ಮಾಡಿರುವಂತೆಯೇ ಕಾಂಗ್ರೆಸ್ ಕೂಡ ಆರ್‌ಎಸ್‌ಎಸ್ ಶಕ್ತಿ ಕೇಂದ್ರ ನಾಗಪುರದಿಂದ ಗುರುವಾರ ಬಹಿರಂಗ ಪ್ರಚಾರ ಆರಂ ಭಿಸಿದೆ. ಈ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ “ನಾವು ಸಿದ್ಧರಿದ್ದೇವೆ’ (ಹಮ್ ತಯ್ಯಾ ರ್ ಹೈ’) ಎಂಬ ಸವಾಲನ್ನು ಬಿಜೆಪಿಗೆ ಒಡ್ಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ಸರಕಾರ ದೇಶವನ್ನು ಬಡತನಕ್ಕೆ ನೂಕಿದೆ. ದೇಶದ ಹಿಡಿತ ಶ್ರೀಸಾಮಾನ್ಯನ ಕೈಯಲ್ಲಿ ಇದ್ದರೆ ಮಾತ್ರವೇ ರಾಷ್ಟ್ರ ಸುಭಿಕ್ಷವಾಗಬಲ್ಲದು ಎಂದು ಹೇಳಿದ್ದಾರೆ. ದೇಶದಲ್ಲಿ ಎರಡು ಪ್ರಬಲ ಹೋರಾಟಗಳು ನಡೆಯುತ್ತಿವೆ. ಆ ಹೋರಾಟ ರಾಜಕೀಯಕ್ಕಾಗಿ ಅಥವಾ ಅಧಿಕಾರಕ್ಕಾಗಿ ಎಂದು. ಜನರು ತಿಳಿದಿದ್ದಾರೆ. ಆದರೆ ಈ ಹೋರಾಟವಾಗುತ್ತಿರುವುದು 2 ಸಿದ್ಧಾಂತಗಳ ನಡುವೆ ಮತ್ತು ಈ ಹೋರಾಟದಲ್ಲಿ ಕಾಂಗ್ರೆಸ್‌ನ ಉದ್ದೇಶ ಸಾಮಾನ್ಯ ಜನರ ಕೈಗೆ ದೇಶದ ಅಧಿಕಾರವನ್ನು ಸಿಗುವಂತೆ ಮಾಡುವುದೇ ಆಗಿದೆ ಎಂದರು. ಪ್ರತಿನಿಧಿಸುವವರು ಇಲ್ಲ ದಲಿತರು, ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅವರನ್ನು ಪ್ರತಿನಿಧಿಸುವವರಿಲ್ಲ. ತಾನು ಒಬಿಸಿ ಎಂದು ಹೇಳಿಕೊಳ್ಳುತ್ತಿದ್ದ ಮೋದಿ ಜಾತಿಗಣತಿ ವಿಚಾರ ಬರುತ್ತಿದ್ದಂತೆ ಬಡವರೆಲ್ಲ ಒಂದೇ ಜಾತಿ ಎನ್ನುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಹರಿಹಾಯ್ದರು. ಬಿಜೆಪಿ -ಆರ್‌ಎಸ್‌ಎಸ್ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ನಾಶವಾಗುತ್ತದೆ. ನಾಗಪುರದಲ್ಲಿ 2 ಸಿದ್ಧಾಂತಗಳಿವೆ .ಒಂದು ಅಂಬೇಡ್ಕರ್ ಗೆ ಸಂಬಂಧಿಸಿದ ಪ್ರಗತಿಪರ ಚಿಂತನೆ . ಮತ್ತೂಂದು ದೇಶ ಹಾಳುಮಾಡುವ ಆರ್‌ಎಸ್‌ಎಸ್ ಸಿದ್ಧಾಂತ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ 23 ಸೀಟು ಕೊಡಲು ಸಾಧ್ಯವಿಲ್ಲ: ಉದ್ಧವ್ ಕೋರಿಕೆ ತಿರಸ್ಕರಿಸಿದ ಕಾಂಗ್ರೆಸ್
ಮುಂಬಯಿ: 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ 23 ಸ್ಥಾನಗಳನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಬಣಕ್ಕೆ ನೀಡಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಮಹಾ ವಿಕಾಸ ಅಘಾಡಿಯ ಪಾಲುದಾರರಾಗಿದ್ದ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಕುರಿತಂತೆ ಚರ್ಚಿಸಲು ನಾಯಕರು ಸಭೆ ನಡೆಸಿದ್ದಾರೆ. ಈ ವೇಳೆ ಉದ್ಧವ್ ಬಣ 23 ಕ್ಷೇತ್ರಗಳಲ್ಲಿ ಸೀಟು ಕೇಳಿತ್ತು.