Advertisement
ಸಮೀಪದ ಕುಡತಿನಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ರೋಡ್ ಶೋ ದಲ್ಲಿ ಮಾತನಾಡಿ ಅವರು, ಇವತ್ತು ಬಿಜೆಪಿ ಸರಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಟಾನಮಾನ ಕಲ್ಪಿಸಿದೆ. ಅಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ ಭಯೋತ್ಪಾದನೆ ಅನ್ನೋದು ಕಳಚಿ ಹೋಗಿದೆ ಎಂದರು.
Related Articles
Advertisement
ಸಂಡೂರಲ್ಲಿ ಅಕೌಂಟ್ ಓಪನ್ ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಲಿದ್ದೇವೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂಡೂರಲ್ಲಿ ಬಿಜೆಪಿ ಗೆಲ್ಲಿಸಿ ಇತಿಹಾಸ ನಿರ್ಮಾಣ ಮಾಡಲಿದ್ದೇವೆ ಎಂದು ತಿಳಿಸಿದರು.
ನಂತರ ತೆಲಂಗಾಣ ಬಿಜೆಪಿ ಮುಖಂಡೆ ಅರುಣಾ ಮಾತನಾಡಿ, ನರೇಂದ್ರ ಮೋದಿಯಿಂದ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಗುಜರಾತ್, ಯುಪಿಎ ಬಿಜೆಪಿ ಜಯಭೇರಿ ಬಾರಿಸಿದಂತೆ ಈ ಬಾರಿ ಕೂಡ ದೇಶದಲ್ಲಿ ಡಬಲ್ ಇಂಜಿನ್ ಸರಕಾರ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು.
ದೇಶದಲ್ಲಿರುವ ಪ್ರತಿಯೊಂದು ವರ್ಗದವರಿಗೆ ಮೋದಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿ ಯಶಸ್ವಿಯಾಗಿದ್ದಾರೆ ಎಂದರು.
ಆದ್ದರಿಂದ ಸಂಡೂರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ಮತ್ತೊಮ್ಮೆ ಡಬಲ್ ಇಂಜಿನ್ ಸರಕಾರ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಪ್ರಾರಂಭದಲ್ಲಿ ರಾಜ್ಯ ಬಿಜೆಪಿ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಬುಧವಾರ ಕುಡಿತಿನಿ ಪಟ್ಟಣಕ್ಕೆ ಪ್ರವೇಶಿಸಿತು. ಯಾತ್ರೆಯ ಅಂಗವಾಗಿ ಕುಡಿತಿನಿಯಲ್ಲಿ ಅದ್ಧೂರಿ ರೋಡ್ ಶೋ ನಡೆಯಿತು.
ಪಟ್ಟಣದ ಬಸ್ ನಿಲ್ದಾಣ ದಿಂದ ಆರಂಭಗೊಂಡ ಯಾತ್ರೆಯು ಮುಖ್ಯ ವೃತ್ತದ ಮೂಲಕ ಸಾಗಿ ಆಂಜನೇಯ ದೇವಸ್ಥಾನಕ್ಕೆ ತಲುಪಿ ದೇವರ ದರ್ಶನ ಪಡೆದರು. ರೋಡ್ ಶೋನಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಮೆರವಣಿಗೆಯಲ್ಲಿ , ಜಾನಪದ ಕಲಾ ಮೇಳ, ವಿವಿಧ ವೇಷ ಭೂಷಣ ದಾರಿಗಳು ಗೊಂಬೆ ಕುಣಿತ, ಕಹಳೆ, ಚೆಂಡೆ ವಾದ್ಯ ಮೇಳ, ತಾಳಗಳು, ಬೈಕ್ ಆಕರ್ಷಣೆಯೊಂದಿಗೆ ಕಾರ್ಯಕರ್ತರ ಘೋಷಣೆ ಮೊಳಗಿತು. ಉರಿ ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು ಲವಲವಿಕೆಯಿಂದ ರೋಡ್ ಶೋದಲ್ಲಿ ಭಾಗವಹಿಸಿದರು.
ವಿಜಯ ಸಂಕಲ್ಪ ಯಾತ್ರೆ ಮುಖ್ಯ ರಸ್ತೆಗೆ ಅಗಮಿಸುತ್ತಿದ್ದಂತೆ ಜೆಸಿಬಿಗಳ ಮುಖಾಂತರ ಕಾರ್ಯಕರ್ತರು ಪುಷ್ಪ ಎರಚುವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದರು. ಯಾತ್ರೆ ಸಾಗಿದ ದಾರಿಯುದ್ದಕ್ಕೂ ಕೇಸರಿಮಯವಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಶ್ರೀರಾಮುಲು, ಉಭಯ ಜಿಲ್ಲಾ ಸಂಸದರು ವೈ.ದೇವೇಂದ್ರಪ್ಪ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾದ ಕಾರ್ಯ ಕರಾಣಿ ಸದಸ್ಯ ಕೆ.ಎಸ್,ದಿವಾಕರ್, ಸಂಡೂರು ಬಿಜೆಪಿ ಮಂಡಲ ಅಧ್ಯಕ್ಷ ಜಿ.ಟಿ.ಪಂಪಾಪತಿ, ಬಿಜೆಪಿ ಬಳ್ಳಾರಿ ಜಿಲ್ಲಾಧ್ಯಕ್ಷ ಮುರಾರಿಗೌಡ, ಮಾಜಿ ಸಂಸದೆ ಜೆ. ಶಾಂತ, ಎಂಎಲ್ ಸಿ ವೈ. ಸತೀಶ್, ಸೇರಿದಂತೆ ಕಾರ್ಯಕರ್ತರು ರಥದಲ್ಲಿದ್ದರು.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾದ ಕಾರ್ಯಕಾರಣಿ ಸದಸ್ಯ ಕೆ.ಎಸ್,ದಿವಾಕರ್ ಅವರು ವಿಜಯ ಸಂಕಲ್ಪ ಯಾತ್ರೆಯ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: ದಾವಣಗೆರೆ: ಹಾಡ ಹಗಲೇ ಕೊಲೆ ಪ್ರಕರಣದ ಆರೋಪಿಗಳಿಬ್ಬರ ಕೊಚ್ಚಿ ಕೊಲೆ