Advertisement

ಅಂಧ ಮಕ್ಕಳ ಜತೆ ಅಡ್ವಾಣಿ ಹುಟ್ಟುಹಬ್ಬ

06:20 AM Nov 09, 2017 | Team Udayavani |

ಹೊಸದಿಲ್ಲಿ: ಬಿಜೆಪಿ ಧುರೀಣ ಎಲ್‌.ಕೆ. ಅಡ್ವಾಣಿ ಅವರು ಬುಧವಾರ ತಮ್ಮ 90ನೇ ಜನ್ಮದಿನವನ್ನು ಅಂಧ ಮಕ್ಕಳ ಜತೆ ಆಚರಿಸಿಕೊಂಡರು.

Advertisement

ಲೋಧಿ ರಸ್ತೆಯಲ್ಲಿನ ಅಂಧ ಮಕ್ಕಳ ಶಾಲೆಯ 90 ವಿದ್ಯಾರ್ಥಿಗಳನ್ನು ಮನೆಗೆ ಆಮಂತ್ರಿಸಿದ್ದ ಅಡ್ವಾಣಿ, ಅವರ ಜತೆ ಹುಟ್ಟು ಹಬ್ಬ ಆಚರಿಸಿಕೊಂಡರಲ್ಲದೆ, ಉಪಾಹಾರ ಸೇವಿಸಿ ಖುಷಿಪಟ್ಟರು. ಬೆಳಗ್ಗೆಯಿಂದಲೇ ಅವರ ಮನೆ ಹಬ್ಬದ ವಾತಾವರಣದಿಂದ ಕೂಡಿತ್ತು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಹಲವು ಗಣ್ಯರು ಅವರಿಗೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next