ಶಿವಮೊಗ್ಗ: ಬಿಜೆಪಿಯದ್ದು ಕೇವಲ ಡಬ್ಬಲ್ ಇಂಜಿನ್ ಸರ್ಕಾರ ಅಲ್ಲ.ಪವರ್ ಇಂಜಿನ್ ಸರ್ಕಾರ. ಇದು ಅಭಿವೃದ್ಧಿಯನ್ನು ಮುಂದೆ ತೆಗೆದುಕೊಂಡು ಹೋಗುವ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ನೀಡಿದ್ದಾರೆ.
ಸೊರಬದಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿ , ಇಲ್ಲಿನ ರೇಣುಕಾಂಬಾ ದೇವಿಗೆ ನಮನ ಸಲ್ಲಿಸಿ, ಮಾತು ಪ್ರಾರಂಭ ಮಾಡ್ತೇನೆ. ಇದು ಕುಮಾರ್ ಬಂಗಾರಪ್ಪ, ರಾಘವೇಂದ್ರ ಅವರ ಚುನಾವಣೆ ಅಲ್ಲ.ರಾಜ್ಯದ ಜನರ ಹಿತದ ಚುನಾವಣೆ.ಕರ್ನಾಟಕವನ್ನು ಮುಂದೆ ಕೊಂಡೋಯ್ಯುವ ಚುನಾವಣೆ ಎಂದರು.
ಇಲ್ಲಿ ಬಂಗಾರಪ್ಪ, ಯಡಿಯೂರಪ್ಪ ಅವರಿಂದ ಸಾಕಷ್ಟು ಅಭಿವೃದ್ಧಿ ಅಗಿದೆ. ಕೋವಿಡ್ ಬಂದಾಗ ವಿಶ್ವದಲ್ಲೇ ಮೊದಲು ಎಲ್ಲರಿಗೂ ಲಸಿಕೆಯನ್ನು ದೇಶದಲ್ಲಿ ನೀಡಲಾಯ್ತು.ಮೊಬೈಲ್, ಆಟೋಮೊಬೈಲ್ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗೆ ಅದ್ಯತೆ ನೀಡಿದ್ದೇವೆ. ಕಾಂಗ್ರೆಸ್- ಜೆಡಿಎಸ್ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ರೈತರ ಮಾಹಿತಿ ಕೇಳಿತ್ತು. ಆಗಿನ ರಾಜ್ಯ ಸರ್ಕಾರ 17 ಜನರ ಮಾಹಿತಿ ಕೇಳಿತ್ತು.ಅದರೆ ನಂತರ ಬಂದ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ 54 ಲಕ್ಷ ರೈತರು ನೊಂದಾಯಿಸಿಕೊಂಡರು. ಕೇಂದ್ರದ ಕೃಷಿ ಸಮ್ಮಾನ್ ಯೋಜನೆಯಡಿ 54 ಲಕ್ಷ ರೈತರಿಗೆ ಹಣ ದೊರಕುತ್ತಿದೆ.ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ, ಲಿಂಗಾಯತ- ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದೆ. ಆದರೆ ಕಾಂಗ್ರೆಸ್ ನಾಯಕರು ಅದನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಾರೆ.ಮೀಸಲಾತಿ ವಿಚಾರದಲ್ಲೂ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಲಿಂಗಾಯತರ ಕಡೆಗಣನೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.ಹಾಗಾದ್ರೇ, ನಿಜಲಿಂಗಪ್ಪ, ವಿರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಮಾಡಿದ್ದು ಏನು..? ಜೆಡಿಎಸ್ ಗೆ ವೋಟ್ ಹಾಕೋದೆಂದರೇ ಕಾಂಗ್ರೆಸ್ ಗೆ ವೋಟ್ ಹಾಕಿದಂತೆ.ಕಾಂಗ್ರೆಸ್ ವೋಟ್ ಹಾಕಿದರೇ, ಅದು ಪಿಎಫ್ಐ ಗೆ ಹಾಕಿದಂತೆ. ಅವರೆಲ್ಲರೂ ಜನ, ರಾಷ್ಟ್ರ ವಿರೋಧಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕಾಲದಲ್ಲಿ ಅರ್ಕಾವತಿ ಹಗರಣ, ಬಿಪಿಎಂಪಿ ಯಲ್ಲೂ ಹಗರಣ ಮಾಡಿದರು. ಡಿಕೆ ಶಿವಕುಮಾರ್ ಮೇಲೆ ಮನಿ ಲಾಂಡರಿಂಗ್ ಕೇಸ್ ಇದ್ದು, ಬೇಲ್ ಮೇಲೆ ಓಡಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಖರ್ಗೆಯವರ ಮನದಲ್ಲಿ ಎಷ್ಟು ವಿಷ ಇದೆ ನೋಡಿ.ಮೋದಿಯವರ ಬಗ್ಗೆ ಹೇಗೆಲ್ಲಾ ಟೀಕೆ ಮಾಡುತ್ತಿದ್ದಾರೆ.ಅವರ ಮಾತುಗಳು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಬರುತ್ತವೆ. ಅವರು ಎಷ್ಟೇ ಟೀಕೆ ಮಾಡಿದರೂ, ದೇಶದ ಜನರ ಮೋದಿ ಅವರ ಜೊತೆ ನಿಲ್ಲುತ್ತಾರೆ.ನಾನು ಕೂಡ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ.ಮತ್ತೋಂದು ರಾಷ್ಟೀಯ ಪಕ್ಷದ ಅಧ್ಯಕ್ಷರಿಗೆ ಇದು ಶೋಭೆ ತರುವುದಿಲ್ಲ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಅಭಿವೃದ್ಧಿ ಪರವಾಗಿ ರಾಜ್ಯದ ಜನರು ನಿಲ್ಲಬೇಕು.ಕುಮಾರ್ ಬಂಗಾರಪ್ಪ ರನ್ನು ಮತ್ತೋಮ್ಮೆ ಗೆಲ್ಲಿಸಿ ಕಳುಹಿಸಿ ಎಂದು ಮನವಿ ಮಾಡಿದರು.