ನವದೆಹಲಿ: ಹಲವು ಸೆಲೆಬ್ರಿಟಿಗಳಿಗೆ ಸಂಕಷ್ಟ ತಂದೊಡ್ಡಿರುವ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಉರುಳು ಇದೀಗ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ಗೂ ಸುತ್ತಿಕೊಂಡಿದೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ ಭೂಪೇಶ್ ಬಘೇಲ್ 508 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಅಲ್ಲದೆ ವಿಧಾನಸಭಾ ಚುನಾವಣಾ ಸಮಯದಲ್ಲೇ ಬಘೇಲ್‌ಗೆ ಈ ಹಗರಣ ಕಂಟಕವಾಗಿ ಪರಿಣಮಿಸಲಿದೆ ಎಂದು ಹೇಳಲಾಗಿದೆ.
ಮಹದೇವ್ ಬೆಟ್ಟಿಂಗ್ ಆಪ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಶುಭಂ ಸೋನಿ ಅವರು ನೀಡಿದ ಹೇಳಿಕೆಯಂತೆ ದುಬೈನಲ್ಲಿ ತಾನು ಜೂಜಿನ ವ್ಯವಹಾರವನ್ನು ಸ್ಥಾಪಿಸಲು ಬಘೇಲ್ ತನಗೆ ಪ್ರೋತ್ಸಾಹ ನೀಡಿದ್ದಾನೆ ಎಂದು ಸೋನಿ ವಿಡಿಯೋ ಸಂದೇಶದಲ್ಲಿ ಆರೋಪಿಸಿದ್ದಾರೆ. ಭಿಲಾಯ್‌ನಲ್ಲಿ ತನ್ನ ಸಹಚರರನ್ನು ಬಂಧಿಸುವ ಕುರಿತು ಬಘೇಲ್ ಅವರನ್ನು ಸಂಪರ್ಕಿಸಿರುವುದಾಗಿ ಅವರು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಬಘೇಲ್ ಚುನಾವಣಾ ಹೊತ್ತಿನಲ್ಲೇ ಬಿಜೆಪಿ ಇಡಿ ಯನ್ನು ಅಸ್ತ್ರವಾಗಿ ಬಳಸಿಕೊಂಡು ದಾಳಿ ನಡೆಸುತ್ತಿದೆ ಜೊತೆಗೆ ತನ್ನ “ಮಾನಹಾನಿ” ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಈ ಚುನಾವಣೆಗೆ ಬಿಜೆಪಿ ಇಡಿಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Villagers; ಹೆಸ್ಕುತ್ತೂರು: ಗ್ರಾಮಸ್ಥರಿಂದಲೇ ದುರಸ್ತಿಗೊಂಡ ಹಾರ್ಯಾಡಿ ಸಂಪರ್ಕ ರಸ್ತೆ