Advertisement
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದ್ದು, ಒಬ್ಬೊಬ್ಬರಿಗೆ 50 ಕೋಟಿ ರೂಪಾಯಿ ಆಫರ್ ಮಾಡಲಾಗಿದೆ. ಆದರೆ ಕಾಂಗ್ರೆಸ್‌ನ ಯಾವ ಶಾಸಕರು ಇದಕ್ಕೆ ಬಗ್ಗಿಲ್ಲ. 136 ಶಾಸಕರಿದ್ದರೂ ಬಿಜೆಪಿ ಅವರು ಸರ್ಕಾರವನ್ನು ಅಲುಗಾಡಿಸಲು ಪ್ರಯತ್ನ ಮಾಡುತ್ತಿದ್ದು, ಅವರಿಗೆ ಸರ್ಕಾರಗಳನ್ನು ಬೀಳಿಸುವುದು ಅಭ್ಯಸವಾಗಿ ಹೋಗಿದೆ. ನೇರವಾಗಿ ಅವರು ಯಾವತ್ತೂ ಚುನಾವಣೆ ಮಾಡಿಯೇ ಇಲ್ಲ. ದೇಶದ ಬೇರೆ ಬೇರೆ ಭಾಗಗಳಲ್ಲಿ ಸರ್ಕಾರ ಅಂತಂತ್ರ ಮಾಡುವ ರೀತಿ ಕರ್ನಾಟಕದಲ್ಲೂ ನಡೆದಿರುವುದು ಸತ್ಯ ಎಂದರು.
ದೇಶದಲ್ಲಿ ಶೇ.5ರಷ್ಟು ಮಾತ್ರವೇ ಬಡತನ ಇದೆ ಎಂಬ ನೀತಿ ಆಯೋಗದ ಮಾಹಿತಿ ಸತ್ಯವೋ? ಅಸತ್ಯವೋ? ಎಂಬುದು ತಿಳಿಯಬೇಕಿದೆ. ಇದು ನೀತಿ ಆಯೋಗ ನೀಡಿರುವ ಸರ್ವೇ ರಿಪೋರ್ಟ್ ಅಲ್ಲ. ಒಂದೊಮ್ಮೆ 5% ಬಡತನವಿದ್ದರೆ ಖುಷಿಯ ಸಂಗತಿ. ಆದರೆ ಜನರ ಸಾಮಾಜಿಕ ಪರಿಸ್ಥಿತಿ ಗಮನಿಸಿದರೆ ಆ ರೀತಿ ಕಾಣುವುದಿಲ್ಲ. ಬಡತನದ ರೇಖೆಗಿಂತ ಕಡಿಮೆ ಇರುವ 82 ಸಾವಿರ ಕುಟುಂಬಕ್ಕೆ ಅಕ್ಕಿ ಕೊಡಲಾಗಿದೆ ಎಂದರು. ತನಿಖೆ ನಡೆಸಿ ಸೂಕ್ತ ಕ್ರಮ
ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಮಾತನಾಡಿ, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರೀತಿಯ ತನಿಖೆ ನಡೆಸುತ್ತಿದ್ದು, ಸಿಸಿ ಟಿವಿ ಪರಿಶೀಲನೆ ನಡೆಸಲಾಗಿದೆ. ಯಾರೋ ಒಬ್ಬರು ಟೋಕನ್ ಪಡೆಯುವ ಸಂದರ್ಭದಲ್ಲಿ ಬ್ಯಾಗ್ ಇಟ್ಟಿರುವುದು ಕಂಡು ಬಂದಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಉಗ್ರರ ಕೃತ್ಯ ಎಂಬುದು ತಿಳಿದಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದು, ಯಾರೂ, ಏನೂ ಎಂಬ ಸಂಪೂರ್ಣ ಮಾಹಿತಿ ಸಿಕ್ಕಿದ ಮೇಲೆ ಮಾತನಾಡುತ್ತೇನೆ. ಆದರೆ ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡಬಾರದು, ಇದರ ಪತ್ತೆಗೆ ಎಲ್ಲರೂ ಸಹಕಾರ ನೀಡಬೇಕು. ಇಂತಹ ಘಟನೆ ಎಲ್ಲ ಕಾಲದಲ್ಲೂ ನಡೆದಿದ್ದು, ಇಂತಹ ಘಟನೆಗಳು ನಡೆಯಬಾರದು. ಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಸಣ್ಣ ಪ್ರಮಾಣದಲ್ಲಿ ಘಟನೆ ನಡೆದಿತ್ತು. ಈ ಘಟನೆ ಕುರಿತು ಆರೋಪಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕ್ರಮವಹಿಸಲಾಗುವುದು ಎಂದರು.