Advertisement

ಮಿಷನ್‌ 150 ಗುರಿ ತಲುಪಲು ಬಿಜೆಪಿ ಸಂಘಟಿಸಿ: ಸುರೇಶ್‌

11:50 AM Aug 20, 2017 | Team Udayavani |

ಎಚ್‌.ಡಿ.ಕೋಟೆ: ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಿಷನ್‌ 150 ಗುರಿ ತಲುಪಬೇಕಾದರೆ ಎಲ್ಲೆಲ್ಲಿ, ಯಾವ ಯಾವ ಹಂತಗಳಲ್ಲಿ ಪಕ್ಷದ ಸಂಘಟನೆ ಹೆಚ್ಚು ಮಾಡಬೇಕು. ಪಕ್ಷವನ್ನು ಹೆಚ್ಚು ಸದೃಢಗೊಳಿಸಲು ಏನು ಮಾಡಬೇಕೆಂದು ಈಗಾಗಲೇ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ಮಾಜಿ ಕಾನೂನು ಸಚಿವ ಸುರೇಶ್‌ ಕುಮಾರ್‌ ಹೇಳಿದರು.

Advertisement

ಬಿಜೆಪಿ ಮೈಸೂರು ಜಿಲ್ಲೆ ಗ್ರಾಮಾಂತರ ಎಚ್‌.ಡಿ.ಕೋಟೆ ತಾಲೂಕು ಘಟಕದಿಂದ ಪಟ್ಟಣದ ಜೆಎಸ್‌ಎಸ್‌ ಮಂಗಳ ಮಂಟಪದಲ್ಲಿ ಕರೆದಿದ್ದ ಜಿಲ್ಲಾ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದರು. ಮಾಜಿ ಸಚಿವರು ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡುವುದರ ಜೊತೆಗೆ ರಾಜ್ಯ ಸರ್ಕಾರದ ವೈಫ‌ಲ್ಯಗಳನ್ನು ತಿಳಿಸಬೇಕು.

ನಾವು ಈ ಬಾರಿ ಮೈಸೂರು ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಮರೆತು ಸಕ್ರಿಯವಾಗಿ ಶ್ರಮಿಸಿ ಎಂದು ಕಿವಿಮಾತು ಹೇಳಿದರು.

ಬೂತ್‌ ಮಟ್ಟದಲ್ಲಿ ಕಾರ್ಯ: ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿ, ತಾಲೂಕಿನಲ್ಲಿ ವಿಸ್ತಾರಕ್‌ ಪ್ರಚಾರವನ್ನು ಪರಿಣಾಮಕಾರಿಯಾಗಿ ಕೈಗೊಂಡಿದ್ದು, ಬೂತ್‌ ಮಟ್ಟದಲ್ಲೂ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ.

ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ತಂದು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಲು ಪ್ರಯತ್ನಿಸಲಾಗುವುದು ಎಂದರು. ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ.ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಸಿ.ಕೆ.ಗಿರೀಶ್‌ ಮತ್ತಿತರರು ಮಾತನಾಡಿದರು.

Advertisement

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷ ನಟರಾಜ್‌, ಸದಸ್ಯ ವೆಂಕಟಸ್ವಾಮಿ, ತಾ.ಪಂ. ಅಧ್ಯಕ್ಷೆ ಮಂಜುಳಾ ದೇವಣ್ಣ, ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಹೇಮಂತ್‌ಗೌಡ, ಪರಿಕ್ಷಿತ್‌ರಾಜ್‌ ಅರಸ್‌, ನಂಜುಂಡಸ್ವಾಮಿ, ಬಿ.ಎಂ.ರಾಮು, ಯೋಗೀಶ್‌, ಬೋರೇಗೌಡ, ಮಹದೇವು, ಮಹೇಶ್‌, ಕೃಷ್ಣಸ್ವಾಮಿ, ಚಿಕ್ಕವೀರನಾಯ್ಕ, ಶಿವರಾಜಪ್ಪ, ಶಿವಮಾದಪ್ಪ, ರಾಜು, ಜೆ.ಪಿ.ಚಂದ್ರಶೇಖರ್‌, ಮೋತ್ತ ಬಸವರಾಜಪ್ಪ, ಸುನಂದರಾಜು, ಸರ್ವಮಂಗಳಮ್ಮ, ಜಗದೀಶ್‌, ನಾಗರಾಜ್‌ ಶೆಟ್ಟಿ ಸೇರಿದಂತೆ ಜಿಲ್ಲಾ ಮತ್ತು ಎಲ್ಲ ತಾಲೂಕು ಕಾರ್ಯಕಾರಿಣಿ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

ಎಲ್ಲೆಡೆ ಫ್ಲೆಕ್ಸ್‌, ಬಿಜೆಪಿ ಬಾವುಟ
ಎಚ್‌.ಡಿ.ಕೋಟೆ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ನಡೆಯುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ ಮತ್ತು ಪಕ್ಷದ ಚಿಹ್ನೆವುಳ್ಳ ಬಾವುಟ ರಾರಾಜಿಸುತ್ತಿದ್ದವು, ಹಾಕಲಾಗಿರುವ ಫ್ಲೆಕ್ಸ್‌ಗಳಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಹಾಗೂ ಅವರ ಪತ್ನಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಮಹದೇವಮ್ಮನವರ ಭಾವಚಿತ್ರಗಳು ಕಾಣಿಸಲಿಲ್ಲ. ಇದು ಚೆರ್ಚೆಗೆ ಗ್ರಾಸವಾಗಿದೆ. ಮಾಜಿ ಶಾಸಕರ ಹಲವು ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next