Advertisement
ನಗರದ ಮಾಗಾವಿ ಸಭಾಭವನದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಹಾವೇರಿ ವಿಧಾನಸಭೆ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಯಾರು ಪಕ್ಷದಲ್ಲಿ ಸಕ್ರಿಯರಾಗಿರುತ್ತಾರೋ ಅವರಿಗಷ್ಟೇ ಪಕ್ಷದ ಪದಾಧಿಕಾರಿ, ಇತರೆ ಸ್ಥಾನಮಾನ ಸಿಗುತ್ತದೆ. ಅದನ್ನು ಬಿಟ್ಟು ಮಧ್ಯದಲ್ಲಿ ಕಲ್ಲು ಹೊಡೆದು, ಟಯರ್ ಸುಟ್ಟು, ಪ್ರತಿಭಟನೆ ಮಾಡಿ ಸ್ಥಾನಮಾನ ಪಡೆಯಲು ಬಿಜೆಪಿಯಲ್ಲಿ ಸಾಧ್ಯವಿಲ್ಲ. ಇದು ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಾಗಿದ್ದು ಇಡೀ ದೇಶದ ಬಿಜೆಪಿಯಲ್ಲಿ ಇದೇ ನಿಯಮ ಅನ್ವಯಯಿಸುತ್ತದೆ ಎಂದರು.
ಭಾರತದ ಆರ್ಥಿಕತೆ ಕುಸಿದಿದೆ ಎನ್ನುತ್ತಾರೆ. ಆದರೆ, ಅದು ಕುಸಿತ ಅಲ್ಲ ವ್ಯತ್ಯಾವಷ್ಟೆ. ಇಡೀ ಜಗತ್ತಿನ ಆರ್ಥಿಕತೆ ಕುಸಿದರೂ ಭಾರತದ ಆರ್ಥಿಕ ಸುಸ್ಥಿರವಾಗಿತ್ತು ಎಂಬುದನ್ನು ಅರಿಯಬೇಕು ಎಂದು ನಳಿನಕುಮಾರ ಅಭಿಪ್ರಾಯಿಸಿದರು. ಬೇರೆ ಪಕ್ಷದಲ್ಲಿದ್ದ ಕೆಲ ಶಾಸಕರು ಸರ್ಕಾರದ ಕಾರ್ಯವೈಖರಿಗೆ ಬೇಸತ್ತು. ಯಡಿಯೂರಪ್ಪ ಅವರ ಬಳಿ ಬಂದು ಕೈ ಜೋಡಿಸಿದ್ದಾರರೆಯೇ ಹರತು ಅಧಿಕಾರದಾಸೆಗಲ್ಲ. ಅವರೆಲ್ಲ ಸರ್ಕಾರಕ್ಕೆ ಬೆಂಗಾವಲಾಗಿ ನಿಂತಿದ್ದಾರೆ ಎಂದರು.