Advertisement

ಮೋದಿ ಜನ್ಮದಿನಕ್ಕೆ ದೇಶಾದ್ಯಂತ ಸೇವಾ-ಸಮರ್ಪಣ ಅಭಿಯಾನ

11:01 PM Sep 05, 2021 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಸೆ.17ರಂದು 71ನೇ ಜನ್ಮದಿನ ಆಚರಿಸಿಕೊಳ್ಳಲಿದ್ದು, ಅದರ ಪ್ರಯುಕ್ತ ಬಿಜೆಪಿ ದೇಶಾದ್ಯಂತ 20 ದಿನಗಳ ಸೇವಾ ಮತ್ತು ಸಮರ್ಪಣ ಅಭಿಯಾನ ನಡೆಸಲು ನಿರ್ಧರಿಸಿದೆ. ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿ ಈ ವರ್ಷಕ್ಕೆ 20 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ 20 ದಿನಗಳ ಕಾಲ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.

Advertisement

ಈ ಅಭಿಯಾನದಲ್ಲಿ ಎಲ್ಲೆಡೆ ಸ್ವಚ್ಛತ ಕಾರ್ಯಕ್ರಮ, ರಕ್ತದಾನ ಶಿಬಿರಗಳನ್ನು ನಡೆಸಲಾಗುವುದು. ಜಿಲ್ಲಾ ಮತ್ತು ರಾಜ್ಯ ಬಿಜೆಪಿ ಕಚೇರಿಗಳಲ್ಲಿ ಮೋದಿಯವರ ಜೀವನದ ಕುರಿತಾಗಿ ವಸ್ತು ಪ್ರದರ್ಶನ ನಡೆಯಲಿದೆ. ಬೂತ್‌ಗಳಿಂದ 5 ಕೋಟಿ ಪೋಸ್ಟ್‌ಕಾರ್ಡ್‌ಗಳನ್ನು ಪ್ರಧಾನಿಗೆ ಕಳುಹಿಸಿಕೊಡುವುದು, “ಉಚಿತ ಲಸಿಕೆ, ಉಚಿತ ಆಹಾರಧಾನ್ಯ ಒದಗಿಸಿದ್ದಕ್ಕೆ ಧನ್ಯವಾದಗಳು’ ಎಂದು ಬರೆದಿರುವ ಫ‌ಲಕಗಳನ್ನು ಎಲ್ಲೆಡೆ ಅಂಟಿಸುವುದು ಸೇರಿದಂತೆ ಅನೇಕ ರೀತಿಯ ಕಾರ್ಯಕ್ರಮಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next