Advertisement

ಸಾಮಾಜಿಕ ನ್ಯಾಯ ಅಭಿಯಾನ: ಬಿಜೆಪಿ 

05:30 AM Aug 08, 2018 | Karthik A |

ಹೊಸದಿಲ್ಲಿ: ಇತರ ಹಿಂದುಳಿದ ವರ್ಗಗಳ (ಒಬಿಸಿ) ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಮಸೂದೆಗೆ ಸೋಮವಾರ ಸಂಸತ್ತಿನ ಒಪ್ಪಿಗೆ ಸಿಕ್ಕಿದ್ದು ಹಾಗೂ ರಾಜ್ಯಸಭೆಗೆ ಸದ್ಯದಲ್ಲೇ ಚರ್ಚೆಗೆ ಬರಲಿರುವ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಬಲವರ್ಧನೆ ಮಸೂದೆಯು ಲೋಕಸಭೆಯಲ್ಲಿ ಅನುಮೋದನೆಗೊಂಡ ಸವಿನೆನಪಿಗಾಗಿ ‘ಸಾಮಾಜಿಕ ನ್ಯಾಯ ಪಾಕ್ಷಿಕ’ ಹಾಗೂ ‘ಸಾಮಾಜಿಕ ನ್ಯಾಯ ಸಪ್ತಾಹ’ ಎಂಬ ಎರಡು ಅಭಿಯಾನಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ವಿಷಯ ತಿಳಿಸಿದರು.

Advertisement

‘ಸಾಮಾಜಿಕ ನ್ಯಾಯ ಪಾಕ್ಷಿಕ’ ಆಗಸ್ಟ್‌ 15ರಿಂದ 30ರವರೆಗೆ ಹಾಗೂ “ಸಾಮಾಜಿಕ ನ್ಯಾಯ ಸಪ್ತಾಹ’ವು ಮುಂದಿನ ವರ್ಷ ಆ. 1ರಿಂದ 9ರವರೆಗೆ ನಡೆಯುತ್ತದೆ ಎಂದ ಅವರು, ಹಾಲಿ ಸಂಸತ್‌ ಅಧಿವೇಶನದಲ್ಲೇ ಈ ಎರಡೂ ಮಸೂದೆಗಳು ಮಂಡನೆಯಾದ ಹಿನ್ನೆಲೆಯಲ್ಲಿ ಹಾಲಿ ಸಂಸತ್‌ ಕಲಾಪವನ್ನು ‘ಸಾಮಾಜಿಕ ನ್ಯಾಯ ಕಲಾಪ’ ಎಂದೇ ಸ್ಮರಿಸಿಕೊಳ್ಳಲಾಗುವುದು ಎಂದರು. ಅಲ್ಲದೆ, ಆಗಸ್ಟ್‌ ಮಾಸದಲ್ಲೇ ಈ ಮಹತ್ವದ ಮಸೂದೆ ಮಂಡನೆಯಾಗಿದ್ದನ್ನು ‘ಆಗಸ್ಟ್‌ ಕ್ರಾಂತಿ’ ಎಂದು ಬಣ್ಣಿಸಿದ ಅವರು, ಇದು 1942ರ ಆಗಸ್ಟ್‌ ನಲ್ಲಿ ಮಹಾತ್ಮಾ ಗಾಂಧಿ ಶುರು ಮಾಡಿದ್ದ “ಕ್ವಿಟ್‌ ಇಂಡಿಯಾ ಚಳವಳಿ’ಯ ನಂತರ ಭಾರತದಲ್ಲಿ ಆಗಿರುವ ಕ್ರಾಂತಿ ಎಂದರು.  

ಇದೇ ವೇಳೆ  ಸಚಿವ ಅನಂತ ಕುಮಾರ್‌, “2014ರ ಚುನಾವಣೆಗೂ ಮುನ್ನ ಮೋದಿಯವರು ತಾವು ಅಧಿಕಾರಕ್ಕೆ ಬಂದರೆ, ಬಡವರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದ್ದರು. ಇದೀಗ, ಒಬಿಸಿ, ದಲಿತರ ಮೇಲಿನ ಹಲ್ಲೆಗಳ ವಿರೋಧಿ ಮಸೂದೆ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next