Advertisement

ಬಿಜೆಪಿಗೆ 180 ಸ್ಥಾನ ಖಚಿತ; ಎಸ್‌.ಬಿ.ಮುನಿವೆಂಕಟಪ್ಪ

06:17 PM Feb 21, 2023 | Team Udayavani |

ಕೋಲಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಪರ ಬಜೆಟ್‌ ಮಂಡಿಸಿದ್ದು, ಬಡವರು, ಮಧ್ಯಮವರ್ಗದ ಪರವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 180 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಮತದಾರರು ಬಿಜೆಪಿ ಕುರಿತು ಒಲವು ಹೊಂದಿದ್ದಾರೆ ಎಂದು ಪಕ್ಷದ ಜಿಲ್ಲಾ ವಕ್ತಾರ ಎಸ್‌.ಬಿ.ಮುನಿವೆಂಕಟಪ್ಪ ಭವಿಷ್ಯ ನುಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕ್ರಮಗಳಿಂದ ರಾಜ್ಯದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಇತರೆ ಪಕ್ಷಗಳು ಎಷ್ಟೇ ತಿಪ್ಪರಲಾಗ ಹಾಕಿದರೂ ಬಿಜೆಪಿ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇಂದು ದೇಶಕ್ಕೆ ಬಿಜೆಪಿ ಅಗತ್ಯವಿದೆ. ಪ್ರಧಾನಿ ಮೋದಿ ಯವರ ಪರಿಶ್ರಮದಿಂದ ಇಂದು ದೇಶ ವಿಶ್ವಮಾನ್ಯವಾಗಿದೆ. ಕೋವಿಡ್‌ನಿಂದಾದ ಆರ್ಥಿಕ ಸಂಕಷ್ಟದಿಂದ ಅಮೆರಿಕಾದಂತಹ ರಾಷ್ಟ್ರಗಳೇ ಮುಗ್ಗರಿಸಿವೆ ಇಂತಹ ಸಂದರ್ಭದಲ್ಲಿ ಮೋದಿ ಭಾರತದ ಘನತೆ ಉಳಿಸಿದ್ದಾರೆ, 140 ಕೋಟಿ ಜನರಿಗೆ ಉಚಿತ ವ್ಯಾಕ್ಸಿನ್‌ ನೀಡಿದ್ದಾರೆ ಎಂದು ಪ್ರತಿಪಾದಿಸಿದರು.

ಬಿಜೆಪಿ ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಆರೋಗ್ಯ ಸಚಿವ ಕೆ.ಸುಧಾಕರ್‌ ಅವರಿಗೆ ಕೋಲಾರ ಜಿಲ್ಲೆಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆಯು ಅಜೆಂಡಾದಲ್ಲಿ ಸೇರಿಸಲು ಮನವಿ ಮಾಡಲಾಗಿದೆ. ಭ್ರಷ್ಟತೆಯಿಂದ ಸಾವಿರಾರು ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಕಾಂಗ್ರೆಸ್ಸಿಗರಿಂದ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಲಾಗುತ್ತದೆ. ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ಭ್ರಷ್ಟಾಚಾರದಿಂದಾಗಿ ಸೋರಿಕೆಯಾಗಿ ಸಾಮಾನ್ಯ ಜನತೆಗೆ ಶೇ.30 ಪ್ರಯೋಜನವಾಗುತ್ತಿರಲಿಲ್ಲ. ಆದರೆ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ರೈತರ ಖಾತೆಗೆ ಹಣವನ್ನು ನೇರವಾಗಿ ಹಾಕುತ್ತಿದ್ದು, ಒಂದೇ
ಒಂದು ರೂ. ದುರ್ವಿನಿಯೋಗವಾಗುತ್ತಿಲ್ಲ ಎಂದರು.

Advertisement

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ ರಾಜ್ಯ ಬಜೆಟ್‌ ರೈತಪರ,ಜನಪರವಾಗಿದೆ ಎಂದು ತಿಳಿಸಿ, ವಿರೋಧ ಪಕ್ಷಗಳು ವಿನಾಕಾರಣ ಟೀಕಿಸುವ ಮೂಲಕ ಕಿವಿಗೆ ಹೂವಿಟ್ಟುಕೊಂಡು ಅದನ್ನೇ ಶಾಶ್ವತವಾಗಿಸಿಕೊಳ್ಳಲಿವೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಯುವ ಮುಖಂಡ ಹಾಗೂ ವಕೀಲ ಬಾಲಾಜಿ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next