Advertisement

ಶಿವಕಾಂತ ಮಹಾಜನ್ ಮನೆಗೆ ಬಿಜೆಪಿ ವರಿಷ್ಠರು: ಸೂಕ್ತ ಸ್ಥಾನಮಾನದ ಭರವಸೆ

04:08 PM Apr 16, 2023 | Team Udayavani |

ಕಲಬುರಗಿ: ಇಲ್ಲಿನ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ದಿಂದ‌ ವಂಚಿತರಾಗಿರುವ ಮುಖಂಡ ಶಿವಕಾಂತ ಮಹಾಜನ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವುದನ್ನು ಅರಿತ ಪಕ್ಷದ ವರಿಷ್ಠರು ಮಹಾಜನ್ ಮನೆಗೆ ತೆರಳಿ ಸಂಧಾನ ನಡೆಸಿದರು. ‌

Advertisement

ನಗರದ ಶರಣಬಸವೇಶ್ವರ ದೇವಾಲಯ ರಸ್ತೆಯಲ್ಲಿರುವ ಮಹಾಜನ್ ಮನೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಲ್ಲಿ ಒಬ್ಬರಾಗಿರುವ ಬಿಜೆಪಿ ವರಿಷ್ಠರಾದ ಹಿರಿಯ ಸಂಸದ ನಿಷಿಕಾಂತ ದುಬೈ, ಕೇಂದ್ರದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ,ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹಾಗೂ ಇತರರು, ಕಲಬುರಗಿ ಉತ್ತರದಲ್ಲಿ ತಮಗೆ ಬಿಜೆಪಿ ಪಕ್ಷದ ಟಿಕೆಟ್ ದೊರಕಬೇಕಿತ್ತು. ಆದರೆ ಕೊನೆ‌ಘಳಿಗೆಯಲ್ಲಿ ಕೈ ತಪ್ಪಿದೆ. ಆದರೆ ಅನ್ಯಾಯ ಕ್ಕೆ ಮುಂದಿನ‌ ದಿನಗಳಲ್ಲಿ ನ್ಯಾಯ ಕಲ್ಪಿಸಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದರು.

ತಾವು ಸ್ಪರ್ಧೆ ಮಾಡುವುದರಿಂದ ಮತಗಳು ವಿಭಜನೆಯಾಗುತ್ತವೆ.‌ಈ ಸಲ ಪಕ್ಷ ಗೆಲ್ಲುವ ಸ್ಪಷ್ಟ ಸೂಚನೆಗಳಿವೆ. ಆದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿಯಿರಿ. ತ್ಯಾಗವನ್ನು ಪಕ್ಷ ಸದಾ ಗುರುತಿಸುತ್ತದೆಯಲ್ಲದೇ ಸೂಕ್ತ ಸ್ಥಾನ‌ಮಾನ ಕಲ್ಪಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ. ಎಂದಿನಂತೆ ಪಕ್ಷದ ಸಂಘಟನೆ ಹಾಗೂ ಚುನಾವಣಾ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ವರಿಷ್ಠರು ಮಹಾಜನ್ ಅವರಲ್ಲಿ ಕೋರಿದರು.‌

ತದನಂತರ ಬಿಜೆಪಿ ಕೇಂದ್ರದ ವರಿಷ್ಠರು ಶಿವಕಾಂತ ಮಹಾಜನ್ ಅವರ ಮನೆಗೆ ಹೋಗಿ ಸೂಕ್ತ ಮಾತುಕತೆ ನಡೆಸಿ ದರಲ್ಲದೇ ಸೂಕ್ತ ಸ್ಥಾನಮಾನ ಕಲ್ಪಿಸುವುದು ತಮ್ಮ ಜವಾಬ್ದಾರಿ ಎಂದರಲ್ಲದೇ ಯಾವ ಅವಕಾಶ ಕಲ್ಪಿಸಲಾಗುವುದು ಎಂಬುದನ್ನು ಗೌಪ್ಯವಾಗಿ ಸ್ಥಾನಮಾನದ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಶಿವಕಾಂತ ಮಹಾಜನ್, ತಾವು ಚುನಾವಣೆಗೆ ತಯಾರಾದ ಬಗೆ ಹಾಗೂ ಪಕ್ಷದ ಸಂಘಟನೆ ಯಲ್ಲಿ ತೊಡಗಿಸಿಕೊಂಡಿರುವುದನ್ನು ಎಳೆ- ಎಳೆಯಾಗಿ ವಿವರಿಸಿದರಲ್ಲದೇ ಪಕ್ಷದ ಜಿಲ್ಲೆಯ ನಾಯಕರು ನಡೆದುಕೊಂಡ ಬಗೆಯನ್ನು ಪಟ್ಟಿಯೊಂದನ್ನು‌ ಸಲ್ಲಿಸಿ ವಿವರಿಸಿದರು.

Advertisement

ಈ ಸಂದರ್ಭದಲ್ಲಿ ಬಿಜೆಪಿ ‌ನಗರಾಧ್ಯಕ್ಷ ಸಿದ್ದಾಜೀ ಪಾಟೀಲ್, ‌ ಪ್ರಮುಖರಾದ ಶರಣಬಸಪ್ಪ ಹೆಗ್ಗಣೆ, ಸೂರಜ್ ಸಿಂಗ್ ತಿವಾರಿ ಸೇರಿದಂತೆ ಮುಂತಾದವರಿದ್ದರು.

ಸಭೆಗೆ ಆಗಮಿಸಿದ ಮುಖಂಡರು; ನಗರದ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಪಕ್ಷೇತರ ಇಲ್ಲವೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವ ನಿಟ್ಟಿನಲ್ಲಿ ಕಾರ್ಯಕರ್ತ ರೊಂದಿಗೆ ಚರ್ಚಿಸಲು ಶಿವಕಾಂತ ಮಹಾಜನ್ ಸಭೆ ಕರೆದಿದ್ದರು.

ಸಭೆ ಅರಿತ ಬಿಜೆಪಿ ವರಿಷ್ಠರು ಸಭೆಗೆ ಆಗಮಿಸಿ, ಯಾವುದೇ ಕಾರಣಕ್ಕೂ ಶಿವಕಾಂತ ಮಹಾಜನ್ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ‌ . ಮುಂದಿನ‌ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು.‌ಇದು ತಮ್ಮ ಜವಾಬ್ದಾರಿ ಎಂದು ಸಭೆಯಲ್ಲಿ ನೆರೆದಿದ್ದ ಕಾರ್ಯಕರ್ತರಿಗೆ ಸ್ಪಷ್ಟ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next