Advertisement

ಚಾಮರಾಜನಗರ ಜಿಲ್ಲೆ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ

05:35 PM Jun 09, 2022 | Team Udayavani |

ಚಾಮರಾಜನಗರ: ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಶೈಕ್ಷಣಿಕ ಬೆಳೆವಣಿಗೆಗಾಗಿ ಜಿಲ್ಲೆಯ ಪ್ರಬುದ್ಧ ಮತದಾರರು ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್‌ ಅವರಿಗೆ ಮೊದಲ ಪ್ರಾಶಸ್ತ್ಯಗಳ ಮತಗಳನ್ನು ನೀಡಿ ಗೆಲ್ಲಿಸಿಬೇಕು. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ, ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮನವಿ ಮಾಡಿದರು.

Advertisement

ಜಿಲ್ಲೆಯಲ್ಲಿ ಬುಧವಾರ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್‌ ಪರ ಬಿರುಸಿನ ಪ್ರಚಾರ ನಡೆಸಿದ ಸೋಮಣ್ಣ ಅವರು, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ, ಬಸವರಾಜರಾಜೇಂದ್ರ ಅಸ್ಪತ್ರೆ, ಮರಿಯಾಲ ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆ, ಸರ್ಕಾರಿ ಮಹಿಳಾ ಕಾಲೇಜು, ಪದವಿ ಕಾಲೇಜು ಸೇರಿದಂತೆ ಅನೇಕ ಕಡೆ ತೆರಳಿ ಮತಯಾಚನೆ ಮಾಡಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್‌ ಇಂಜಿನ್‌ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ದೇಶವೆ ಮೆಚ್ಚಿದೆ. ರಾಜ್ಯದಲ್ಲಿ ಸಿಎಂ ಬಸವರಾಜು ಬೊಮ್ಮಾಯಿ ಅವರ ಸರ್ಕಾರ  ಅಭಿವೃದ್ಧಿ ಹಾಗೂ ಜನಪರ ಯೋಜನೆಗಳು ಜನ ಸಾಮಾನ್ಯರಿಗೆ ತಲುಪುತ್ತಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಅವರು ನೀಡುತ್ತಿರುವ ಕೊಡುಗೆ ಅಪಾರ.

ರಾಜ್ಯದಲ್ಲಿ ಬಸವರಾಜು ಬೊಮ್ಮಾಯಿ ಹಾಗು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಹಾಗೂ ಸದಾನಂದ ಗೌಡರ ನೇತೃತ್ವದ ಸರ್ಕಾರದ ಸಾಧನೆಯನ್ನು ನೋಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಮೈ.ವಿ.ರವಿಶಂಕರ್‌ ಓರ್ವ ಪ್ರಾಮಾಣಿಕ ಅಭ್ಯರ್ಥಿ. ಉತ್ತಮ ವ್ಯಕ್ತಿತ್ವವುಳ್ಳ ಸಂಘಟನಾಕಾರಾಗಿದ್ದಾರೆ. ಜಿಯಾಲಿಸ್ಟ್‌ ಆಗಿ ಈ ಭಾಗದಲ್ಲಿ ಹೆಚ್ಚು ರೈತರ ಕೊಳವೆ ಬಾವಿಗಳನ್ನು ಪರೀಕ್ಷೆಮಾಡಿ, ನೀರು ಕೊಟ್ಟಿದ್ದಾರೆ. ತಮ್ಮದೇ ಆದ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜಸೇವೆಯಲ್ಲಿದ್ದಾರೆ. ಕಳೆದ ಬಾರಿ ಕೇವಲ 83 ಮತಗಳ ಅಂತರದಲ್ಲಿ ವಿಧಾನ ಪರಿಷತ್‌ಗೆ ಹೋಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಪದವೀಧರರು ಒಂದು ಅವಕಾಶ ನೀಡಿ, ಅವರ ಗೆಲುವಿಗೆ ಕಾರಣಕರ್ತರಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಜೂ. 21 ರಂದು ಮೈಸೂರಿಗೆ ಆಗಮಿಸುತ್ತಿದ್ದು. ಇಷ್ಟೋತ್ತಿಗೆ ಮತದಾನ ಮುಗಿದು ಎಣಿಕೆಯಾಗಿರುತ್ತದೆ. ನಮ್ಮ ಅಭ್ಯರ್ಥಿ ರವಿಶಂಕರ್‌ ಪ್ರಥಮ ಪ್ರಾಶಸ್ತ್ಯ ಮತದಲ್ಲಿಯೇ ಗೆಲುವು ಸಾಧಿಸಿ, ಮೈಸೂರಿಗೆ ಮೋದಿ ಅವರು ಬರುತ್ತಿರುವ ಶುಭ ಗಳಿಗೆಯಲ್ಲಿ ಅವರಿಗೆ ನಾವೆಲ್ಲರು ಸೇರಿ ಗೆಲುವಿನ ಕಾಣಿಕೆ ನೀಡಬೇಕೆಂದು ಸೋಮಣ್ಣ ಮನವಿ ಮಾಡಿದರು.

Advertisement

ಶಾಸಕ ಎನ್‌. ಮಹೇಶ್‌, ಮಾಜಿ ಶಾಸಕರಾದ ಪೊ›.ಕೆ.ಆರ್‌. ಮಲ್ಲಿಕಾರ್ಜುನಪ್ಪ, ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌. ಸುಂದರ್‌, ಮುಖಂಡ ರಾದ ಅಮ್ಮನಪುರ ಮಲ್ಲೇಶ್‌, ಆಲೂರು ನಟರಾಜು, ನಾಗಶ್ರೀಪ್ರತಾಪ್‌, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಕೋರ್‌ ಕಮಿಟಿ ಸದಸ್ಯ ಡಾ.ಎ.ಆರ್‌. ಬಾಬು, ವೆಂಕಟರಮಣಸ್ವಾಮಿ, ಶಿವಪುರ ಸುರೇಶ್‌, ಕೊಡಸೋಗೆ ಶಿವಬಸಪ್ಪ, ಕೆ. ವೀರಭದ್ರಸ್ವಾಮಿ, ಬೇಡರಪುರ ಬಸವಣ್ಣ,
ಕೊತ್ತಲವಾಡಿ ಕುಮಾರ್‌, ಬಿಲ್ವಾ ಮಹೇಶ್‌, ಜಿಲ್ಲಾ ವಕ್ತಾರ ಶಿವಕುಮಾರ್‌, ಮಾಧ್ಯಮ ಪ್ರಮುಖ್‌ ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next