Advertisement
ಜಿಲ್ಲೆಯಲ್ಲಿ ಚುನಾವಣೆ ನಡೆದ ಒಟ್ಟು 477 ಗ್ರಾಪಂಗಳ ಪೈಕಿ ಸುಮಾರು 350 ಗ್ರಾಪಂಗಳಲ್ಲಿ13 ಶಾಸಕರನ್ನು ಹೊಂದಿರುವ ಬಿಜೆಪಿ ಮೇಲುಗೈಸಾಧಿಸಿದೆ. ಐವರು ಶಾಸಕರನ್ನು ಹೊಂದಿರುವ ಕಾಂಗ್ರೆಸ್ 120ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ತನ್ನ ಬೆಂಬಲಿತಸದಸ್ಯರ ಮೂಲಕ ಅಧಿಕಾರ ಹಿಡಿಯಲಿದೆ.ಗ್ರಾಮಮಟ್ಟದಲ್ಲಿ ಬಿಜೆಪಿ ಬೇರನ್ನು ಇನ್ನಷ್ಟುಗಟ್ಟಿಗೊಳಿಸಬೇಕು. ಈ ಬೇರು ಎಲ್ಲ ಕಡೆವಿಸ್ತಾರಗೊಳ್ಳಬೇಕು ಎಂಬ ಪಕ್ಷದ ನಾಯಕರಚಿಂತನೆಗೆ ಗ್ರಾಪಂ ಚುನಾವಣೆ ಫಲಿತಾಂಶ ಇನ್ನಷ್ಟು ಶಕ್ತಿ ನೀಡಿದೆ.
Related Articles
Advertisement
ಒಟ್ಟಾರೆ ಸ್ಥಾನ ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತರುಇಲ್ಲಿ ಅತ್ಯಧಿಕ ಸ್ಥಾನಗಳನ್ನುಗೆದ್ದಿದ್ದು 20ಕ್ಕೂ ಹೆಚ್ಚು ಗ್ರಾಪಂಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಎರಡನೇಸ್ಥಾನದಲ್ಲಿರುವ ಬಿಜೆಪಿ ಬೆಂಬಲಿತರು 18ಕ್ಕೂ ಹೆಚ್ಚು ಪಂಚಾಯತ್‌ಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ. ಕಾಂಗ್ರೆಸ್ ಬೆಂಬಲಿತರು 8 ರಿಂದ 10 ಪಂಚಾಯತ್‌ಗಳಲ್ಲಿ ಹಿಡಿತ ಸಾಧಿಸಲಿದ್ದಾರೆ.
ಬಿಜೆಪಿಗೆ ಆಘಾತ :
ನಿಪ್ಪಾಣಿ ತಾಲೂಕಿನ ಫಲಿತಾಂಶ ಬಿಜೆಪಿಗೆ ಆಘಾತ ಉಂಟುಮಾಡಿದೆ. ಕ್ಷೇತ್ರದಲ್ಲಿ ಬಲವಾದ ಹಿಡಿತ ಹೊಂದಿರುವ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಈ ಫಲಿತಾಂಶ ಆಲೋಚನೆ ಮಾಡುವಂತೆ ಮಾಡಿದೆ. ಬಿಜೆಪಿ ಬೆಂಬಲಿತರು 13 ಪಂಚಾಯತ್‌ಗಳಲ್ಲಿ ಅಧಿಕ ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಬೆಂಬಲಿತ ಸದಸ್ಯರೂ 13
ಪಂಚಾಯತ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ವೀರಕುಮಾರ ಪಾಟೀಲ ಅವರ ಪ್ರಭಾವ ಕೆಲಸ ಮಾಡಿದೆ.ಇನ್ನೂ, ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿ ಹಿಡಿತದಲ್ಲಿರುವ ಚಿಕ್ಕೋಡಿ ತಾಲೂಕಿನಲ್ಲಿ ಬಿಜೆಪಿಬಲವಾದ ಪೈಪೋಟಿ ನೀಡಿದೆ. ಇಲ್ಲಿ ಕಾಂಗ್ರೆಸ್ ಶೇ. 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಬೆಂಬಲಿತರು ಒಟ್ಟು 25 ಗ್ರಾಪಂಗಳ ಪೈಕಿ 18ರಲ್ಲಿ ಅಧಿಕಾರ ಹಿಡಿಯಲಿದ್ದಾರೆ.
ಗೆಲುವಿನ ಲೆಕ್ಕಾಚಾರ :
ಜಿಲ್ಲೆಯ ಒಟ್ಟು 499 ಗ್ರಾಪಂಗಳ ಪೈಕಿ 477ಕ್ಕೆ ಚುನಾವಣೆ ನಡೆದಿತ್ತು. ಒಟ್ಟು 8195 ಸ್ಥಾನಗಳ ಪೈಕಿ 769 ಸ್ಥಾನಗಳಿಗೆಅವಿರೋಧ ಆಯ್ಕೆಯಾಗಿತ್ತು. 31 ಸ್ಥಾನಗಳಿಗೆ ಯಾವುದೇನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಲಭ್ಯ ಮಾಹಿತಿಯಂತೆ 31ಸ್ಥಾನಗಳನ್ನು ಹೊರತುಪಡಿಸಿ ಒಟ್ಟು 8164 ಗ್ರಾಪಂ ಸ್ಥಾನಗಳಲ್ಲಿಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 4850 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ 2935 ಅಭ್ಯರ್ಥಿಗಳುಆಯ್ಕೆಯಾಗಿದ್ದರೆ. ಜೆಡಿಎಸ್ ಕೇವಲ 110 ಸ್ಥಾನಕ್ಕೆ ತೃಪ್ತಿಪಟ್ಟಿದೆ.ಮಹಾರಾಷ್ಟ್ರ ಏಕೀಕರಣ ಸಮಿತಿ ಸೇರಿದಂತೆ ಇತರ ಅಭ್ಯರ್ಥಿಗಳು 269 ಕಡೆ ಜಯ ಗಳಿಸಿದ್ದಾರೆ.
ಜನರ ಒಲವು ಬಿಜೆಪಿ ಕಡೆಗೆ ಇದೆ ಎಂಬುದನ್ನು ಗ್ರಾಪಂ ಚುನಾವಣೆತೋರಿಸಿಕೊಟ್ಟಿದೆ. ಗ್ರಾಮೀಣ ಭಾಗದಲ್ಲೂ ಈಗ ಬಿಜೆಪಿ ಬೇರು ಬಹಳ ಗಟ್ಟಿಯಾಗುತ್ತಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರಕಾರ್ಯಕ್ರಮ ಮತ್ತು ಯೋಜನೆ ಸಾಕಷ್ಟು ನೆರವಾಗಿವೆ. –ರಾಜೇಶ ನೇರ್ಲಿ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ
ಜಿಲ್ಲೆಯಲ್ಲಿ ಶೇ. 60ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಕಾಂಗ್ರೆಸ್ ಮೇಲುಗೈಸಾಧಿಸಿದೆ. ಬಿಜೆಪಿ ಆಡಳಿತವನ್ನುಗ್ರಾಮಮಟ್ಟದಲ್ಲಿ ತಿರಸ್ಕರಿಸಲಾಗಿದೆ. ಕೇಂದ್ರಹಾಗೂ ರಾಜ್ಯ ಸರಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗೆ ಜನರು ಪಾಠ ಕಲಿಸಿದ್ದಾರೆ –ಲಕ್ಷ್ಮಣರಾವ್ ಚಿಂಗಳೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
–ಕೇಶವ ಆದಿ