Advertisement

ಉಗ್ರರಿಗೆ ಆಶ್ರಯ ನೀಡುವ ಮೂಲಕ ಪಾಕ್‌ ನಿಜ ಬಣ್ಣ ಬಯಲು: ಬಿಜೆಪಿ

12:54 AM Dec 18, 2022 | Team Udayavani |

ಮಂಗಳೂರು/ಉಡುಪಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಪಾಕಿಸ್ಥಾನದ ಸಚಿವ ನೀಡಿರುವ ಹೇಳಿಕೆಯನ್ನು ದ.ಕ. ಮತ್ತು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಮತ್ತು ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಖಂಡಿಸಿದ್ದಾರೆ.

Advertisement

ಪಾಕಿಸ್ಥಾನ ಲಾದೆನ್‌, ದಾವೂದ್‌ನಂತಹ ಹಲವಾರು ಉಗ್ರರಿಗೆ ಆಶ್ರಯ ನೀಡಿ ಬೆಳೆಸಿದೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನದ ನಿಜಬಣ್ಣ ಬಯಲಾಗಿದೆ. ನಮ್ಮ ದೇಶದ ಬಗ್ಗೆ ಮಾತನಾಡುವ ನೈತಿಕತೆ ಪಾಕಿಸ್ಥಾನಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ.

ಡಿಕೆಶಿ ಹೇಳಿಕೆಗೆ ಖಂಡನೆ
ಕುಕ್ಕರ್‌ ಬಾಂಬ್‌ ಸ್ಫೋಟವನ್ನು ಸಮರ್ಥಿಸಿ, ಪೊಲೀಸ್‌ ಇಲಾಖೆಯನ್ನು ಅವಮಾನಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದು, ಇದು ಖಂಡನೀಯ ಎಂದು ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ ಎಂ ಹೇಳಿದ್ದಾರೆ. ದೇಶದಲ್ಲಿ ಭಯೋತ್ಪಾದಕರು, ನಕ್ಸಲರನ್ನು ಬೆಳೆಸಿದ್ದು ಕಾಂಗ್ರೆಸ್‌. ಮುಸ್ಲಿಂ ಮತಬ್ಯಾಂಕ್‌ಗಾಗಿ ಈ ರೀತಿ ಕೆಳಮಟ್ಟಕ್ಕೆ ಇಳಿದ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲಿ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next