Advertisement

ಯಾರೋ ಮಾಡಿದ ಯೋಜನೆಗಳಿಗೆ ಕಾಯಿ ಒಡೆದು ಪೂಜೆ ಸಲ್ಲಿಸಿದ್ದೇ ಎಂ.ಬಿ.ಪಾಟೀಲ ಸಾಧನೆ: ಕಟೀಲ್

02:38 PM Oct 09, 2020 | keerthan |

ವಿಜಯಪುರ: ಮಾಜಿ ಸಚಿವ ಎಂ.ಬಿ.ಪಾಟೀಲ ಅಧಿಕಾರ ಇದ್ದಾಗ ಗೂಂಡಾಗಿರಿ ರಾಜಕಾರಣ ಮಾಡಿದ್ದೇ ಸಾಧನೆ. ಯಾರೋ ಮಾಡಿದ ಯೋಜನೆಗಳಿಗೆ ಕಾಯಿ ಒಡೆದು ಪೂಜೆ ಸಲ್ಲಿಸಿದ್ದೇ ಇವರು ಮಾಡಿದ ವಿಜಯಪುರ ಜಿಲ್ಲಾ ಪ್ರಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

Advertisement

ಶುಕ್ರವಾರ ಜಿಲ್ಲೆಯ ಆಲಮಟ್ಟಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಲ ಸಂಪನ್ಮೂಲ ಖಾತೆ, ಗೃಹ ಸಚಿರಾಗಿದ್ದಾಗ ಎಂ.ಬಿ.ಪಾಟೀಲ ಅವರು ಆಡಳಿತದ ಪಾರುಪತ್ಯ, ದಬ್ಬಾಳಿಕೆ ರಾಜಕಾರಣ ಮಾಡಿಯೇ ಹೆಸರಾದವರು. ಗೃಹ ಸಚಿವರಿದ್ದಾಗ ಏನು ಮಾಡಿದ್ದಾರೆ ಗೊತ್ತಲ್ಲ, ಅವರ ಕಥೆ ಏನು ನಮಗೆ ಗೊತ್ತಿದೆ ಎಂದು ಕುಟುಕಿದರು.

ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿ, ಅನುಷ್ಠಾನಕ್ಕೆ ತಂದದ್ದು ಹಿಂದೆ ಅಧಿಕಾರ ನಡೆಸಿದ ನಮ್ಮ ಬಿಜೆಪಿ ಸರ್ಕಾರ ಎಂದರು.

ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳಿಗಾಗಿ ಹೋರಾಟ ಮಾಡಿದ್ದು ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಎಂದು ಪಕ್ಕದಲ್ಲಿ ಕುಳಿತಿದ್ದ ನಡಹಳ್ಳಿ ಅವರನ್ನು ತೋರಿಸಿದರು.

ಇದನ್ನೂ ಓದಿ:ವಠಾರ ಶಾಲೆಯ ನಾಲ್ವರು ಮಕ್ಕಳಿಗೆ ಕೋವಿಡ್ ಪಾಸಿಟಿವ್: ಪೋಷಕರಲ್ಲಿ ಹೆಚ್ಚಿದ ಆತಂಕ

Advertisement

ಅಧಿಕಾರ ಕಳೆದುಕೊಂಡ ಬಳಿಕ ಎಂ.ಬಿ.ಪಾಟೀಲ ಅವರು ಇದೀಗ ವಿಜಯಪುರ ಜಿಲ್ಲೆಯ ನೀರಾವರಿ ನನ್ನ ಕನಸು, ಜಿಲ್ಲೆಯನ್ನು ನೀರಾವರಿ ಮಾಡಿದ್ದೇ ನಾನು,  ನನ್ನಿಂದಲೇ ವಿಜಯಪುರ ಜಿಲ್ಲೆ ನೀರು ಕಂಡಿದೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದರು.

ನೀವು ಅಧಿಕಾರದಲ್ಲಿ ಇದ್ದಾಗ ಯಾಕೆ ನೀರಾವರಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿಲ್ಲ. ನೀವು ಸಚಿವರಾಗಿದ್ದಾಗ ಗೂಂಡಾಗಿರಿ ರಾಜಕಾರಣ ಮಾಡಿದ್ದೇ ಸಾಧನೆ. ಇದಕ್ಕಾಗಿಯೇ ಜನರು ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next