ನಂಜನಗೂಡು: ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಸೆಡ್ಡು ಹೊಡೆದು ನೀತಿರುವ ಮಾಜಿ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸೋಮವಾರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಪಟ್ಟನದ ಶ್ರೀಕಂಠ ಪುರಿ ಬಡಾವಣೆಯಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ಜಮಾಯಿಸಿದ ಸಹಸ್ರಾರು ಬಿಜೆಪಿ ಕಾರ್ಯಕರ್ತರು ಹಾಗೂ ಅಸಂಖ್ಯಾತ ಮುಖಂಡರು ಪ್ರಸನ್ನ ಚಿಂತಾಮಣಿ ದೇವಾಲಯಕ್ಕೆ ಬಂದು ಗಣಪತಿಗೆ ಪೂಜೆ ಸಲ್ಲಿಸಿ, ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದರು.
ತೆರದ ವಾಹನದಲ್ಲಿ ಬಿಜೆಪಿಯ ರಾಜಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ವಿ.ಸೋಮಣ್ಣ, ರಾಮದಾಸ್, ವಿಜಯಶಂಕರ್, ಶೋಭಾಕ ರಂದ್ಲಾಜೆ, ಮುಖಂಡರಾದ ಎಸ್.ಮಹದೇವಯ್ಯ, ಜಯದೇವ್, ಕೋಟೆ ಶಿವಣ್ಣ ಶ್ರೀನಿವಾಸ್ ಪ್ರಸಾದ್‌ಗೆ ಸಾತ್ ನೀಡಿದರು.
ಈ ವೇಳೆ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಆಡಳಿತ ವೈಖರಿ, ದುರಾಡಳಿತದ ಪರ್ವವನ್ನು ಬಿಚ್ಚಿಡುತ್ತಾ, ಈ ಸರ್ಕಾರಕ್ಕೆ ಪಾಠ ಕಲಿಸಲು ಹಾಗೂ ತಮ್ಮ ಕೈ ಬಲ ಪಡಿಸಲು ಬಿಜೆಪಿಗೆ ಬೆಂಬಲ ನೀಡಿ ಮನವಿ ಮಾಡಿದರು.
ನಾಮಪತ್ರ ಸಲ್ಲಿಸಲು ಐವರಿಗೆ ಮಾತ್ರ ಅವಕಾಶವಾಗಿದ್ದರಿಂದ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ ವಿ.ಸೋಮಣ್ಣ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಮಾಜಿ ಆಶ್ರಯ ಸಮಿತಿಯ ಅಧ್ಯಕ್ಷ ಬಾಲಚಂದ್ರ, ಜಿಪಂ ಮಾಜಿ ಸದಸ್ಯ ಚಿಕ್ಕರಂಗನಾಯಕರೊಂದಿಗೆ ಪ್ರಸಾದ್ ನಾಮಪತ್ರವನ್ನು ಚುನಾವಣಾಧಿಕಾರಿ ಜಗದೀಶ್‌ಗೆ ಸಲ್ಲಿಸಿದರು.
ನಂತರ ವಿ .ಶ್ರೀನಿವಾಸ ಪ್ರಸಾದ್ ಮಾತನಾಡಿ, ಸಿದ್ದರಾಮಯ್ಯನವರ ದುರಹಾಂಕಾರಕ್ಕೆ ನಂಜನಗೂಡಿನ ಜನತೆ ಈ ಚುನಾವಣೆಯ ಮೂಲಕ ಪಾಠ ಕಲಿಸಿಲಿದ್ದಾರೆ ಎಂದು ಹೇಳಿದರು. ಈಗ ಯುದ್ಧದ ಪ್ರಾರಂಭದ ಮೊದಲನೇ ಹಂತ ಸುರುವಾಗಿದೆ.
ಅಧಿಕಾರ ದುರ್ಬಳಕೆ ಹಾಗೂ ಹಣದ ಮದ ಕಾಂಗ್ರೆಸ್ ಗೆಲುವು ಸಾಧಿಸಬಹುದು ಎಂದಿದ್ದರೆ ಅದಕ್ಕೆ ಇಲ್ಲಿನ ಜನತೆ ಮದ್ದು ನೀಡಲು ಸಿದ್ಧತೆ ನಡೆಸಿದ್ದಾರೆ. ಮತದಾರರು ಈ ಬಾರಿಯೂ ತಮ್ಮ ಹಾಗೂ ಬಿಜೆಪಿಯ ಬೆಂಬಲಕ್ಕೆ ನಿಂತು ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆ ನೋಡಿ ಎಂದರು.