Advertisement

ಬಿಜೆಪಿಯಿಂದ ಜಾತಿಯ ವಿಷ ಬೀಜ ಬಿತ್ತುವ ಕಾರ್ಯ: ಸತೀಶ್‌

01:32 PM Aug 04, 2020 | mahesh |

ಕಡೂರು: ಸಖರಾಯಪಟ್ಟಣ ಹೋಬಳಿಯಲ್ಲಿ ಬಿಜೆಪಿ ಜಾತಿಯ ವಿಷ ಬೀಜಬಿತ್ತಿ ಪಕ್ಷದ ಕಾರ್ಯಕರ್ತರ ಮೇಲೆ ವ್ಯವಸ್ಥಿತ ಪಿತೂರಿ ಮಾಡುತ್ತಿದೆ ಎಂದು ಸಖರಾಯಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಡಿಮನೆ ಸತೀಶ್‌ ಆರೋಪಿಸಿದರು.

Advertisement

ಜೆಡಿಎಸ್‌ ಮುಖಂಡ ಗಣೇಶ್‌ ತಮ್ಮ ನೂರಾರು ಬೆಂಬಲಿಗರೊಂದಿಗೆ ಸೋಮವಾರ ಮಹಡಿಮನೆ ಸತೀಶ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಜೆಪಿಯು ಜಾತಿಯ ವಿಷಬೀಜ ಬಿತ್ತಿ ಹಣಬಲದಿಂದ ಹಾಗೂ  ಕಾಂಗ್ರೆಸ್‌ ಕಾರ್ಯಕರ್ತರ ಸಣ್ಣಪುಟ್ಟ ತಪ್ಪುಗಳಿಂದ ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ ಶಾಸಕರನ್ನು ಕಾಣಲು ಸಾಧ್ಯವಾಗಿಲ್ಲ. ಮುಂದಿನ ದಿನಗಳು ಚಿಕ್ಕಮಗಳೂರು ಕ್ಷೇತ್ರವು ಕಾಂಗ್ರೆಸ್‌ ಶಾಸಕರ ದಿನಗಳಾಗಲಿವೆ ಎಂಬ ಭರವಸೆ ವ್ಯಕ್ತಪಡಿಸಿದರು. ಶಾಸಕ ಸಿ.ಟಿ.ರವಿ ಮಹಾನ್‌ ನಾಯಕರಲ್ಲ. ಹಣಬಲದಿಂದ ಎಲ್ಲಾ ವಿದ್ಯೆಗಳನ್ನು ತಿಳಿದುಕೊಂಡಿರುವ ಅವರು ಚುನಾವಣೆಯ ಸಮಯದಲ್ಲಿ ಜಾತಿಯ ವಿಷ ಬೀಜವನ್ನು ಬಿತ್ತಿ ಅಧಿಕಾರ ಪಡೆಯುತ್ತಿದ್ದಾರೆ. ನಮ್ಮಲ್ಲಿನ ಸಣ್ಣಪುಟ್ಟ ತಪ್ಪುಗಳ ಲಾಭ ಪಡೆದು ಕಳೆದ 20 ವರ್ಷಗಳಿಂದ ಶಾಸಕರಾಗುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಜೆಡಿಎಸ್‌ನ ನೂರಾರು ಯುವಕರು ಗಣೇಶ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡು ಸಖರಾಯಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಬಲ ಪಡಿಸಿದ್ದಾರೆ ಎಂದರು.

ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಕಡೂರು ತಾಲೂಕಿನ 29 ಗ್ರಾಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಿದ್ದು ಪ್ರತಿಯೊಂದು ಗ್ರಾಪಂಗಳಲ್ಲಿ ಕಾಂಗ್ರೆಸ್‌ ವಾರಿಯರ್ಗಳು ಕಾರ್ಯ ನಿರ್ವಹಿಸಲಿದ್ದು ಮನೆ- ಮನೆಗಳಿಗೆ ತೆರಳಿ ಕೊರೊನಾ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು. ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಕಾಂಗ್ರೆಸ್‌ ಧ್ವಜವನ್ನು ನೀಡುವುದರ ಮೂಲಕ ಪಕ್ಷಕ್ಕೆ ಯುವಕರನ್ನು ಬರಮಾಡಿಕೊಂಡು ಮಾತನಾಡಿದರು. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡ ಯುವಕರ ಪರವಾಗಿ ಗಣೇಶ್‌ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಮಂಜುನಾಥ್‌ ಮತ್ತು ರಾಮಚಂದ್ರಪ್ಪ ಕಾರ್ಯಕರ್ತರನ್ನು ಉದ್ದೇಶಿಸಿ ತಮ್ಮ ಅನುಭವ ಹಂಚಿಕೊಂಡರು. ಕಡೂರು ತಾಪಂ ಉಪಾಧ್ಯಕ್ಷ ಅಕ್ಷಯ್‌ಕುಮಾರ್‌, ಸದಸ್ಯ ರುದ್ರಮೂರ್ತಿ,
ಪಿಳ್ಳೇನಹಳ್ಳಿ ರವಿ, ಎಪಿಎಂಸಿ ಸದಸ್ಯ ಲೋಕೇಶ್‌ ಇದ್ದರು. ಸಂದೀಪ್‌,ದರ್ಶನ್‌, ಉಮೇಶ್‌, ವಿಶ್ವಾಸ್‌, ಲೋಕೇಶ್‌, ಕಿರಣ್‌, ಗಣೇಶ್‌ ಗೌಡ, ಮುಜೀರ್‌, ರವಿ ಮಾಪಲ್ಲಿ, ಅಶ್ರಫ್‌ ಅಲಿ,ರಮೇಶ್‌ ಮತ್ತಿತರರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next