Advertisement

Guarantee Schemeಗಳ ಬಗ್ಗೆ ಬಿಜೆಪಿ ಅಪಪ್ರಚಾರ: ಗೃಹ ಸಚಿವ ಪರಮೇಶ್ವರ್‌

10:21 PM Jul 08, 2024 | Team Udayavani |

ಬೆಂಗಳೂರು: ಆಡಳಿತ ನಡೆಸಲು ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ ಹೊರತು, ಅವರನ್ನಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ವಾಗ್ಧಾಳಿ ನಡೆಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಅವರಿಗೆ (ಬಿಜೆಪಿಗೆ) ಅವಕಾಶ ಕೊಟ್ಟಿದ್ದಾರೆ. ಅವರು ಅಲ್ಲಿ ಆಡಳಿತ ನಡೆಸಲಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸಲು ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಹೀಗಿರುವಾಗ, ಕೇಂದ್ರಕ್ಕೆ ಯತ್ನಾಳ್‌ ಅವರು ಪತ್ರ ಬರೆದಿದ್ದಾರೆ. ಕೇಂದ್ರದ ನಿರ್ದೇಶನ ಬರಲಿ ನೋಡಿ ಉತ್ತರಿಸುತ್ತೇವೆ. ಗ್ಯಾರಂಟಿಗಳಿಂದ ಆರ್ಥಿಕ ಮುಗ್ಗಟ್ಟು ಉಂಟಾಗಿದೆ ಅಂತ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದನ್ನು ಆಡಳಿತ ನಡೆಸುವ ನಾವು ಹೇಳಿಲ್ಲವಲ್ಲ.

Advertisement

ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ. ಸಮಸ್ಯೆ ಇದ್ದರೆ ಅದನ್ನು ಪರಿಹರಿಸುವ ಜವಾಬ್ದಾರಿ ನಮ್ಮದೇ. 58 ಸಾವಿರ ಕೋಟಿ ರೂ ಹಣವನ್ನು ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿಗಳ ಸಾಧಕ-ಬಾಧಕಗಳನ್ನೂ ನಾವೇ ನೋಡಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದರು.

ಹೈಕಮಾಂಡ್‌ನ‌ವರು ನಮಗೆ ಶಹಬ್ಟಾಸ್‌ಗಿರಿ ಕೊಟ್ಟಿದ್ದಾರೆ: ಸಚಿವ
ಬೆಂಗಳೂರು: ದೆಹಲಿಗೆ ನಾವೆಲ್ಲರೂ ಹೋಗಿದ್ದೆವು. ಸಿಎಂ, ಡಿಸಿಎಂ ಚರ್ಚೆ ವಿಚಾರ ಹೈಕಮಾಂಡ್‌ ಮಾತನಾಡಲೇ ಇಲ್ಲ. ಬದಲಿಗೆ ನಮಗೆ ಶಹಬ್ಟಾಸ್‌ಗಿರಿ ಕೊಟ್ಟು ಕಳುಹಿಸಿದರು. ಒಳ್ಳೇ ಕೆಲಸ ಮಾಡುತ್ತಿದ್ದೀರಿ ಅಂತ ತಿಳಿಸಿದರು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಮಾಹಿತಿ ನೀಡಿದರು.

ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, “ಮಾನ್ಯ ಜೋಶಿಯವರು ಪತ್ರ ಬರೆಯಲಿ. ನಾವು ಅವರ ಪತ್ರಕ್ಕೆ ಸ್ಪಂದಿಸುತ್ತೇವೆ. ಆಮೇಲೆ ಅವರಿಗೆ ಏನು ಅಂತ ಗೊತ್ತಾಗುತ್ತದೆ’ ಎಂದು ತೀಕ್ಷ್ಣವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next