ಹೊಳಲ್ಕೆರೆ : ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ಗೋವಿಂದ ಕಾರಜೋಳ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಕಾರಣಿಕರ್ತರು ಎಂದು ಹೇಳಿಕೆ ನೀಡುವುದರ ಜತೆಗೆ ಮಾದಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಸಮದಾಯಕ್ಕೆ ಅಪಮಾನ ಮಾಡಿರುವ ಶಾಸಕ ಎಂ.ಚಂದ್ರಪ್ಪ ಅವರನ್ನು ಬಿಜೆಪಿ ಪಕ್ಷ ತತ್ ಕ್ಷಣವೇ ಉಚ್ಚಾಟಿಸಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯ್ಯಣ್ಣ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಶಾಸಕ ಎಂ.ಚಂದ್ರಪ್ಪ ಇವರಿಗೆ ಪ್ರವಾಸಿ ಮಂದಿರದಲ್ಲಿ ಮುತ್ತಿಗೆ ಹಾಕಿದ ದಲಿತ ಸಂಘರ್ಷ ಸಮಿತಿ ಸದಸ್ಯರು ಕಾರ‍್ಯಕ್ರಮ ಒಂದರಲ್ಲಿ ಶಾಸಕ ಎಂ.ಚಂದ್ರಪ್ಪ ಮಾದಿಗ ಸಮುದಾಯ ಬಿಜೆಪಿಗೆ ಮತ ನೀಡಿಲ್ಲ. ಕೇಂದ್ರ ಸಚಿವ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಮಾತು ಕೇಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಮಿಸಲಾತಿ ಜಾರಿಗೆ ತಂದಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಭಾರಿ ಎಂದು ಹೇಳಿಕೆ ನೀಡಿದ್ದಾರೆ. ಜತೆ ಮಾದಿಗ ಸಮುದಾಯವ ಬಗ್ಗೆ ಅಪಮಾನಕರವಾದ ರೀತಿಯಲ್ಲಿ ಮಾತನಾಡಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ ತಕ್ಷಣವೇ ಬಿಜೆಪಿ ಪಕ್ಷದ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿದರು.
ಹಲವಾರು ದಶಕಗಳಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಲು ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಶ್ರಮಿಸಿದ್ದಾರೆ. ಮಾದಿಗ ಸಮುದಾಯ ಸಾಕಷ್ಟು ಕಡೆಗಳಲ್ಲಿ ಬಿಜೆಪಿ ಪಕ್ಷದ ಪರವಾಗಿ ನಿಂತಿರುವ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರಕ್ಕೆ ಬಂದಿದೆ. ಅದರ ಅರಿವಿಲ್ಲದೆ ಪಕ್ಷದಲ್ಲಿರುವ ಮಾದಿಗ ಸಮುದಾಯದ ಮುಖಂಡರ ಬಗ್ಗೆ ಅಪಮಾನಕರ ಹೇಳಿಕೆ ನೀಡಿದ್ದಾರೆ. ಪಕ್ಷದ ಇವರ ವಿರುದ್ದ ಕೂಡಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದ ಎಲ್ಲೆಡೆ ಸಮುದಾಯದಿಂದ ಪ್ರತಿಭಟನೆಗೆ ಕರೆ ನೀಡಲಾಗುತ್ತದೆ ಎಂದು ತಿಳಿಸಿದರು.
ಮುಖಂಡರಾದ ಡಿ.ಆರ್.ಪಾಂಡುರಂಗಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸೋಲಲು ಮಾದಿಗ ಸಮುದಾಯದ ಬಿಜೆಪಿ ನಾಯಕರೇ ಕಾರಣವೆಂಬ ಹೇಳಿಕೆ ಪಕ್ಷ ವಿರೋಧಿ ಜತೆ ಸಮುದಾಯದಕ್ಕೆ ಮಾಡಿರುವ ಅಪಮಾನ. ಹಲವಾರು ದಶಕಗಳಿಂದ ಬಿಜೆಪಿಯನ್ನು ಕಟ್ಟಿಬೆಳೆಸಿದ್ದು ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಹಾಗೂ ಗೋವಿಂದಕಾರಜೋಳ, ಕ್ಷೇತ್ರದಲ್ಲಿ ಕೇಂದ್ರ ಸಚಿವರಿಗೆ ಅಪಾರವಾಗಿ ಬೆಂಬಲ ನೀಡಿದೆ. ವಿಧಾನ ಸಭಾ ಚುನಾವಣೆಯಲ್ಲಿ ಕೆಲವರು ಬಿಜೆಪಿ ಪಕ್ಷವನ್ನು ಬೆಂಬಲಿಸಿದ ಪರಿಣಾಮವಾಗಿ ಪಕ್ಷದ ಗೆಲುವು ಸಾಧಿಸಿದೆ. ಅದರೂ ಸಮುದಾಯವನ್ನು ಕುರಿತು ಹೇಳಿಕೆ ನೀಡುವಾಗ ಶಾಸಕ ಎಂ.ಚಂದ್ರಪ್ಪ ಎಚ್ಚರಿಕೆ ವಹಿಸಿ ವಹಿಸಬೇಕು. ಈ ಸಂಬಂಧ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುವ ಬಗ್ಗೆ ಪ್ರವಾಸಿ ಮಂದಿರದಲ್ಲಿ ತಿರ್ಮಾನ ಮಾಡಿದೆ. ಹಾಗಾಗಿ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳು ಸಮುದಾಯದ ಜನರು ಬರಬೇಕು. ಒಳಮಿಸಲಾತಿಯನ್ನು ಕುರಿತು ಆಕ್ಷೇಪ ವ್ಯಕ್ತಪಡಿಸಿ ಪರಿಶಿಷ್ಟ ಜಾತಿ ಜನರನ್ನು ಒಡೆದು ಆಳುವ ನೀತಿ ವಿರುದ್ದ ಉಗ್ರ ಹೋರಾಟ ನಡೆಸಬೇಕೆಂದು ತಿಳಿಸಿದರು. ಮುಖಂಡರಾದ ಪಾಡಿಗಟ್ಟೆ ಸುರೇಶ್ ಸೇರಿದಂತೆ ಹಲವಾರು ಮುಖಂಡರು ಶಾಸಕ ಎಂ.ಚಂದ್ರಪ್ಪ ರಿಗೆ ತೀವ್ರವಾದ ತರಾಟೆ ತೆಗೆದುಕೊಂಡರು.