ಕೋಲ್ಕತಾ: ಭಾರತೀಯ ಜನತಾ ಪಕ್ಷ ತೊರೆದು ಮತ್ತೆ ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಮುಕುಲ್ ರಾಯ್ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಸ್ಪೀಕರ್ ಗೆ ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗಡಿಭಾಗದ ಮಕ್ಕಳಿಗಾಗಿ ಶಾಲೆ ನಿರ್ಮಾಣ ಮಾಡಲು ಒಂದು ಕೋಟಿ ಧನ ಸಹಾಯ ಮಾಡಿದ ಅಕ್ಷಯ್ ಕುಮಾರ್
ಒಂದು ವೇಳೆ ತಮ್ಮ (ಬಿಜೆಪಿ) ಪಕ್ಷದ ಶಾಸಕ ಮುಕುಲ್ ರಾಯ್ ಅವರು ಜೂನ್ 15ರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ರಾಯ್ ವಿರುದ್ಧ ಭಾರತೀಯ ಜನತಾ ಪಕ್ಷ ಕಾನೂನು ಕ್ರಮದ ಹಾದಿ ಹಿಡಿಯಲಿದೆ ಎಂದು ಸುವೇಂದು ಅಧಿಕಾರಿ ಈ ಮೊದಲು ತಿಳಿಸಿದ್ದರು.
ಭಾರತೀಯ ಜನತಾ ಪಕ್ಷದಿಂದ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮುಕುಲ್ ರಾಯ್ ಅವರನ್ನು ಪಶ್ಚಿಮಬಂಗಾಳ ವಿಧಾನಸಭೆಯಿಂದ ಅನರ್ಹಗೊಳಿಸುವ ಬಗ್ಗೆ ಬಿಜೆಪಿ ದಾಖಲೆಗಳನ್ನು ಸಿದ್ದಪಡಿಸಿಕೊಂಡಿದೆ ಎಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ಕೋವಿಡ್ ಲಾಕ್ ಡೌನ್ ನಿಂದ ವಿಧಾನಸಭೆ ಸೆಕ್ರೆಟರಿಯೇಟ್ ಮುಚ್ಚಲ್ಪಟ್ಟಿರುವುದರಿಂದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಮುಕುಲ್ ರಾಯ್ ಅವರನ್ನು ಅನರ್ಹಗೊಳಿಸುವಂತೆ ನಾವು ಬೇಡಿಕೆಯನ್ನು ಇಟ್ಟಿದ್ದು, ಅದಕ್ಕೆ ಅಗತ್ಯವಿರುವ ದಾಖಲೆಗಳನ್ನು ಹೊಂದಿರುವುದಾಗಿ ಬಿಜೆಪಿ ತಿಳಿಸಿದೆ.