Advertisement

ದಲಿತ ವಿರೋಧಿ ಕಾಂಗ್ರೆಸ್ ವಿರುದ್ಧ ಜನಜಾಗೃತಿ: ಬಿಜೆಪಿ ಎಸ್.ಸಿ. ಮೋರ್ಚಾ ಸಭೆಯಲ್ಲಿ ನಿರ್ಣಯ

04:35 PM Aug 22, 2021 | Team Udayavani |

ಬೆಂಗಳೂರು: ಸಂವಿಧಾನ ಕರ್ತೃ ಹಾಗೂ ದಲಿತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಡಾ. ಬಾಬಾ ಸಾಬೇಬ್ ಅಂಬೇಡ್ಕರ್ ರವರನ್ನು ಅವಮಾನಿಸಿ, ಸೋಲಿಸಿ ವಂಚಿಸಿದ್ದ ಕಾಂಗ್ರೆಸ್ ಪಕ್ಷವನ್ನು ದಲಿತರು ತಿರಸ್ಕರಿಸಲು ಜನಜಾಗೃತಿ ಮೂಡಿಸಲು ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಪದಾಧಿಕಾರಿಗಳ ಸಭೆ ನಡೆಯಿತು. ಮುಂಬರುವ ದಿನಗಳಲ್ಲಿ ದಲಿತ ಕಾಳಜಿಯುಳ್ಳ, ದಲಿತರ ಸವಾರ್ಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಬಿಜೆಪಿಯನ್ನು ಬೆಂಬಲಿಸಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಸದೃಢವಾಗಿ ಕಟ್ಟುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ರಾಜ್ಯ ಮೋರ್ಚಾ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ರಾಷ್ಟ್ರೀಯ ಎಸ್ ಸಿ ಮೋರ್ಚಾ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರಭಾರಿ ಎಸ್. ಕುಮಾರ್ ಮತ್ತು ರಾಜ್ಯದಿಂದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಜಯಕುಮಾರ್ ಕಾಂಗೆಯವರೂ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಎಸ್.ಸಿ. ಮೋರ್ಚಾ ಹಿಂದೆಂದಿಗಿಂತಲೂ ಈಗ ಸದೃಢವಾಗಿ ಬೆಳೆಯುತ್ತಿದ್ದು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪರಿಶಿಷ್ಟ ಸಮುದಾಯವು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಲಿದೆ ಮತ್ತು ಕಾಂಗ್ರೆಸ್ ಪಕ್ಷದ ಸುಳ್ಳುಗಳನ್ನು ಜನಸಮುದಾಯಕ್ಕೆ ತಿಳಿಸಿ ಮತ್ತಷ್ಟು ಜನರನ್ನು ಬಿಜೆಪಿಗೆ ಸೇರ್ಪಡೆ ಮಾಡುವ ಮೂಲಕ ಪಕ್ಷವನ್ನು ಮತ್ತಷ್ಟು ಶಕ್ತಿಯುತವಾಗಿ ಕಟ್ಟಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕಾಂಗ್ರೆಸ್ ಪಕ್ಷ ಸದಾ ಸುಳ್ಳುಗಳನ್ನು ಹೇಳಿ ತಳ ಸಮುದಾಯಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುವ ಮೂಲಕ ದಲಿತರ ದಮನ ಮಾಡುತ್ತಿದ್ದು ದಲಿತರ ಏಳಿಗೆಗೆ ಕಾಂಗ್ರೆಸ್ ಆಡ್ಡಗಾಲಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next