Advertisement
ಅನಂತಕುಮಾರ ಹೆಗಡೆ ಅವರು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ, ಸಂವಿಧಾನವನ್ನು ತಿದ್ದುಪಡಿ ಮಾಡಲು, ಕಾಂಗ್ರೆಸ್ ಮಾಡಿದ ವಿರೂಪಗಳು ಮತ್ತು ಅನಗತ್ಯ ಸೇರ್ಪಡೆಗಳನ್ನು ಸರಿಪಡಿಸಲು ಬಿಜೆಪಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ” ಎಂದಿದ್ದರು.
Related Articles
Advertisement
ಹೇಳಿಕೆಯು ಸರ್ವಾಧಿಕಾರವನ್ನು ಹೇರುವ ಮೋದಿ-ಆರ್‌ಎಸ್‌ಎಸ್‌ನ ವಂಚಕ ಅಜೆಂಡಾವನ್ನು ಮತ್ತೊಮ್ಮೆ ಬಹಿರಂಗಪಡಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ಮೋದಿ ಸರ್ಕಾರ, ಬಿಜೆಪಿ ಮತ್ತು ಆರ್‌ಎಸ್‌ಎಸ್ ರಹಸ್ಯವಾಗಿ ಸರ್ವಾಧಿಕಾರವನ್ನು ಹೇರಲು ಬಯಸುತ್ತವೆ, ಆ ಮೂಲಕ ಅವರು ತಮ್ಮ ‘ಮನುವಾದಿ ಮನಸ್ಥಿತಿ’ಯನ್ನು ಭಾರತದ ಜನರ ಮೇಲೆ ಹೇರುತ್ತಾರೆ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
”ಕಾಲಕಾಲಕ್ಕೆ ಬಿಜೆಪಿ-ಆರ್‌ಎಸ್‌ಎಸ್‌ನ ಇಂತಹ ಪುನರಾವರ್ತಿತ ಕರೆಗಳು ನಮ್ಮ ಸಂವಿಧಾನ ತಯಾರಕರು ಪ್ರತಿಪಾದಿಸಿರುವ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವದ ಪ್ರಶ್ನಾತೀತ ತತ್ವಗಳ ಮೇಲೆ ನೇರ ದಾಳಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
“ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವು ಸಂವಿಧಾನದ ಬಲವಾದ ಸ್ತಂಭಗಳಾಗಿದ್ದು, ಈ ತತ್ವಗಳಲ್ಲಿನ ಯಾವುದೇ ಬದಲಾವಣೆಯು ಬಾಬಾಸಾಹೇಬ್ ಡಾ ಅಂಬೇಡ್ಕರ್ ಮತ್ತು ನಮ್ಮ ಪೂಜ್ಯ ಸಂಸ್ಥಾಪಕರು ರೂಪಿಸಿದ ಭಾರತಕ್ಕೆ ಅವಮಾನವಾಗಿದೆ” ಎಂದು “ಸಂವಿಧಾನ್ ಬಚಾವೋ ಬಿಜೆಪಿ ಹಟಾವೋ” ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.
ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ, ಮತ್ತು ಮೋದಿ ಅವರ ನೆಚ್ಚಿನ ಅನಂತಕುಮಾರ್ ಹೆಗಡೆ ಈಗಾಗಲೇ ತಿಳಿದಿದ್ದನ್ನು ಮಾತ್ರ ಬಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬುಡಮೇಲು ಮಾಡುವುದು ಬಿಜೆಪಿ ಮತ್ತು ಆರೆಸ್ಸೆಸ್ ಗುರಿಯಾಗಿದೆ ಎಂದಿದ್ದಾರೆ.
“400 ಸೀಟುಗಳನ್ನು ಮೀರುವ ಬಗ್ಗೆ ಪ್ರಧಾನ ಮಂತ್ರಿಗಳ ಎಲ್ಲಾ ಹೇಳಿಕೆಗಳು ಸಂವಿಧಾನವನ್ನು ಕಿತ್ತೊಗೆಯುವ ಗುರಿಯತ್ತ ಸಾಗುತ್ತಿವೆ. ಭಾರತದ ಜನರ, ವಿಶೇಷವಾಗಿ ದಲಿತರು, ಆದಿವಾಸಿಗಳು, ಒಬಿಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಕೊನೆಯ ರಕ್ಷಕ. ನಾವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಉಳಿಸಬೇಕಾದರೆ ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಸಂರಕ್ಷಿಸಬೇಕಾದರೆ, ನಾವು ಮೋದಿ ಸರ್ಕಾರದ ವಿರುದ್ಧ ಮತ ಹಾಕಬೇಕು” ಎಂದು ಎಕ್ಸ್ ನಲ್ಲಿನ ಪೋಸ್ಟ್ ಮಾಡಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಇದು ಬಿಜೆಪಿ ಸಂವಿಧಾನ ವಿರೋಧಿ ಎಂಬುದನ್ನು ತೋರಿಸುತ್ತದೆ. ಅವರು ಸಂವಿಧಾನವನ್ನು ತಿದ್ದುಪಡಿ ಮಾಡಲಿ. ಬಿಜೆಪಿ ಸಂಸದರು ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ. ಅವರು ಅದಕ್ಕೆ ಪ್ರಧಾನಿಯಿಂದ ಮುದ್ರೆಯೊತ್ತಲಿ” ಎಂದಿದ್ದಾರೆ.