ಪುತ್ತೂರು: ಸಿದ್ದರಾಮಯ್ಯ ಸರಕಾರ ನಡೆಸಿರುವ ಅಭಿವೃದ್ಧಿ ಕೆಲಸಗಳ ಕುರಿತು ಪ್ರಶ್ನಿಸುವ ಬಿಜೆಪಿ, ಆರೆಸ್ಸೆಸ್‌ನೊಂದಿಗೆ ನೇರ ಸಂವಾದಕ್ಕೆ ಸಿದ್ಧರಿದ್ದೇವೆ ಎಂದು ಎಐಸಿಸಿ ಕಾರ್ಯ ದರ್ಶಿ, ಕಾಂಗ್ರೆಸ್ ಮೈಸೂರು ವಿಭಾಗ ಮಟ್ಟದ ಉಸ್ತುವಾರಿ ವಿಷ್ಣುನಾಥನ್ ಸವಾಲು ಹಾಕಿದ್ದಾರೆ. ಪುತ್ತೂರಿನ ಸುಭದ್ರಾ ಸಭಾಭವನದಲ್ಲಿ ಶನಿವಾರ ನಡೆದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಅವರು ನರೇಂದ್ರ ಮೋದಿಯವರಲ್ಲಿ ಸಾಲ ಮನ್ನಾ ಮಾಡುವಂತೆ ಕೇಳಿಕೊಳ್ಳಲು ಸಿದ್ಧರಿದ್ದಾರೆಯೇ ? ಎಂದು ಪ್ರಶ್ನಿಸಿದರು. ಎರಡು ತೀವ್ರವಾದಿಗಳ ತಂಡದ ಜಗಳವನ್ನು ಹಿಂದೂ -ಮುಸ್ಲಿಂ ಧರ್ಮದ ನಡುವಿನ ಯುದ್ಧದಂತೆ ಬಣ್ಣ ಬಳಿಯಬೇಡಿ ಎಂದು ವಿನಂತಿಸಿದರು.
ಏನು ಲಾಭವಾಗಿದೆ ?: ನರೇಂದ್ರ ಮೋದಿ ಅವರು ನೋಟು ಅಪಮೌಲ್ಯಗೊಳಿಸಿದ್ದರಿಂದ ಆದ ಲಾಭವೇನು ಎಂಬುದು ಇನ್ನೂ ಜನರಿಗೆ ತಿಳಿಯುತ್ತಿಲ್ಲ. ಚುನಾವಣೆ ಸಂದರ್ಭ ಘೋಷಿಸಿ ದಂತೆ ಪ್ರತಿಯೊಬ್ಬರ ಖಾತೆಗೆ 50 ಲಕ್ಷ ರೂ. ನೀಡಿದ್ದಾರೆಯೇ? 40 ರೂ.ಗೆ ಪೆಟ್ರೋಲ್ ಲಭಿಸುತ್ತಿದೆಯೇ ಎಂದು ಪ್ರಶ್ನಿಸಿದರು.
ಧರ್ಮದಲ್ಲಿ ರಾಜಕಾರಣ: ಮುಖ್ಯ ಅತಿಥಿ ಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿಯವರಿಂದ ಹಿಂದೂ ಧರ್ಮ ಸ್ಥಾಪನೆಯಾದುದಲ್ಲ ಎಂಬು ದನ್ನು ಅವರು ಅರಿತುಕೊಳ್ಳಬೇಕು. ಧರ್ಮದಲ್ಲಿ ರಾಜಕಾರಣ ಮಿಶ್ರಣ ಮಾಡುವ ಕೀಳು ಮನಃ ಸ್ಥಿತಿಯನ್ನು ಬಿಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಕಾರಣ: ಸಚಿವ ಬಿ. ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಒಂದೇ ಒಂದು ಅಕ್ರಮ ಗಣಿಗಾರಿಕೆ ರಾಜ್ಯದಲ್ಲಿ ಮಾಡಿಲ್ಲ. ಬಡವರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಎಂದರು.
ದೀಪವಾಗಿ ಪರಿವರ್ತಿಸುತ್ತಾರೆ: ಸಚಿವ ಖಾದರ್ ಮಾತನಾಡಿ, ಸರಕಾರ, ಜನಸಾಮಾ ನ್ಯರು ಬೇರೆಯಲ್ಲ. ಕಾನೂನು ರೀತಿಯಲ್ಲಿ ಸಂವಿಧಾನಕ್ಕೆ ಬದ್ಧವಾಗಿ ಕಾಂಗ್ರೆಸ್ ಸರಕಾರ ನಡೆದುಕೊಂಡು ಬಂದಿದೆ. ಜಿಲ್ಲೆಗೆ ಬೆಂಕಿ ಕೊಡುವವರಿದ್ದರೆ ಅದನ್ನು ದೀಪವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಹೊಂದಿದ್ದಾರೆ ಎಂದರು.